For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಗೆ ನ್ಯೂಜಿಲ್ಯಾಂಡ್ ತಂಡ ಆಯ್ಕೆ

New Zealand Vs India Odi: New Zealand Odi Squad Announced

ನ್ಯೂಜಿಲ್ಯಾಂಡ್ ತಂಡ ಟೀಮ್ ಇಂಡಿಯಾ ವಿರುದ್ಧ ಟಿ20 ಸರಣಿಯ ಮುಕ್ತಾಯದ ಬಳಿಕ 3 ಏಕದಿನ ಪಂದ್ಯಗಳನ್ನು ಆಡಲಿದೆ. ಇದಕ್ಕಾಗಿ ಇಂದು ನ್ಯೂಜಿಲ್ಯಾಂಡ್ ತಂಡವನ್ನು ಪ್ರಕಟಗೊಳಿಸಲಾಗಿದೆ. ಫೆಬ್ರವರಿ 5 ರಿಂದ ಏಕದಿನ ಸರಣಿ ಆರಂಭವಾಗಲಿದೆ.

ಟೀಮ್ ಇಂಡಿಯಾವನ್ನು ತನ್ನ ನೆಲದಲ್ಲೇ ಎದುರಿಸಲು ನ್ಯೂಜಿಲ್ಯಾಂಡ್ ಬೌಲಿಂಗ್ ವಿಭಾಗದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿಕೊಂಡಿದೆ. ಕ್ಯಾಲ್ ಜ್ಯಾಮಿಸನ್, ಸ್ಕಾಟ್ ಕಗ್ಗ್ಲೀನ್ ಹ್ಯಾಮಿಷ್ ಬೆನ್ನತ್ ನ್ಯೂಜಿಲ್ಯಾಂಡ್ ತಂಡವನ್ನು ಸೇರಿಕೊಂಡಿದ್ದಾರೆ. ಕ್ಯಾಲ್ ಜ್ಯಾಮಿಸನ್ ನ್ಯೂಜಿಲ್ಯಾಂಡ್ ತಂಡಕ್ಕೆ ಇನ್ನಷ್ಟೇ ಪದಾರ್ಪಣೆ ಮಾಡಬೇಕಿದೆ.

ಟ್ರೆಂಟ್ ಬೋಲ್ಟ್, ಲೂಕಿ ಫರ್ಗ್ಯೂಸನ್ ಮತ್ತು ಮ್ಯಾಟ್ ಹೆನ್ರಿ ನ್ಯೂಜಿಲ್ಯಾಂಡ್ ತಂಡದ ಬೌಲರ್‌ಗಳಾಗಿದ್ದು ಗಾಯಗೊಂಡ ಕಾರಣ ಟಿ20 ಸರಣಿಯ ಬಳಿಕ ಏಕದಿನ ಸರಣಿಯಿಂದಲೂ ಹೊರಗುಳಿದಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಟಾಮ್ ಲ್ಯಾಥಮ್ ಮತ್ತೆ ಏಕದಿನ ತಂಡಕ್ಕೆ ವಾಪಸ್ಸಾಗಿದ್ದಾರೆ.

ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಇಂಗ್ಲೆಂಡನ್ನು ಎದುರಿಸಿದ ನ್ಯೂಜಿಲ್ಯಾಂಡ್ ತಂಡ ಸೂಪರ್ ಓವರ್ನಲ್ಲೂ ಟೈ ಮಾಡಿಕೊಂಡು ಇಂಗ್ಲೆಂಡ್‌ಗೆ ವಿಶ್ವಕಪ್‌ಅನ್ನು ಒಪ್ಪಿಸಿತ್ತು. ಆ ವಿಶ್ವಕಪ್‌ ನ್ಯೂಜಿಲ್ಯಾಂಡ್ ಯಾವುದೇ ಏಕದಿನ ಸರಣಿಯಲ್ಲಿ ಪಾಲ್ಗೊಂಡಿಲ್ಲ. ಟೀಮ್ ಇಂಡಿಯಾ ವಿರುದ್ಧ ಮತ್ತೆ ಏಕದಿನ ಸರಣಿಯಲ್ಲಿ ಕಣಕ್ಕಿಳಿಯುತ್ತಿದೆ.

ಒಡಿಐ ಸರಣಿಗೆ ಆಯ್ಕೆಯಾಗಿರುವ ಕೀವಿಸ್ ತಂಡದ ಸದಸ್ಯರು:

ಕೇನ್ ವಿಲಿಯಮ್ಸನ್ (ನಾಯಕ), ಹಮೀಶ್ ಬೆನೆಟ್, ಟಾಮ್ ಬ್ಲುಂಡೆಲ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಾರ್ಟಿನ್ ಗಪ್ಟಿಲ್, ಕೈಲ್ ಜೇಮಿಸನ್, ಸ್ಕಾಟ್ ಕಗ್ಗ್ಲೀನ್, ಟಾಮ್ ಲಾಥಮ್, ಜಿಮ್ಮಿ ನೀಶಮ್, ಹೆನ್ರಿ ನಿಕೋಲ್ಸ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲ

Story first published: Thursday, January 30, 2020, 15:37 [IST]
Other articles published on Jan 30, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+