ನಾಲ್ಕನೇ ಟಿ20 ಗೆದ್ದು ಸರಣಿ ವಶಪಡಿಸಿಕೊಂಡ ಟೀಮ್ ಇಂಡಿಯಾಗೆ ದಂಡದ ಬರೆ!

ಟೀಮ್ ಇಂಡಿಯಾ ನ್ಯೂಜಿಲ್ಯಾಂಡ್ ನೆಲದಲ್ಲಿ ಮೊದಲ ಬಾರಿಗೆ ಸರಣಿಯನ್ನು ವಶಪಡಿಸಿಕೊಂಡಿದೆ. ನಾಲ್ಕನೇ ಪಂದ್ಯವನ್ನು ಭಾರತ ಮೂರನೇ ಪಂದ್ಯದ ರೀತಿಯಲ್ಲೇ ಸೂಪರ್ ಓವರ್‌ನಲ್ಲಿ ಗೆದ್ದುಕೊಂಡಿದೆ. ಆದರೆ ಈ ಪಂದ್ಯದ ಮೂಲಕ ಸರಣಿ ಗೆಲುವಿನ ಖುಷಿಯಲ್ಲಿದ್ದ ಟೀಮ್ ಇಂಡಿಯಾಗೆ ದಂಡದ ಬರೆ ಬಿದ್ದಿದೆ.
ವೆಲ್ಲಿಂಗ್ಟನ್‌ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ ಕಾರಣಕ್ಕೆ ದಂಡಕ್ಕೆ ಗುರಿಯಾಗಿದೆ. ಪಂದ್ಯದ ವೇತನದ ಶೇಕಡಾ 40ರಷ್ಟು ದಂಡವನ್ನು ಟೀಮ್ ಇಂಡಿಯಾ ಪಾವತಿಸಬೇಕಿದೆ.
ವೆಲ್ಲಿಂಗ್ಟನ್‌ನಲ್ಲಿ ನ್ಯೂಜಿಲ್ಯಾಂಡ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಟೀಮ್ ಇಂಡಿಯಾ ನೀಡಿದ್ದ ಗುರಿಯನ್ನು ನ್ಯೂಜಿಲ್ಯಾಂಡ್ ಬೆನ್ನತ್ತಿತ್ತು. ಈ ವೇಳೆ ಟೀಮ್ ಇಂಡಿಯಾ ನಿಗದಿತ ಸಮಯಕ್ಕಿಂತ ಹೆಚ್ಚಿನ ಕಾಲಾವಕಾಶವನ್ನು ಪಡೆದುಕೊಂಡು ಬೌಲಿಂಗ್ ನಡೆಸಿದೆ. ಇದು ದಂಡಕ್ಕೆ ಕಾರಣವಾಗಿದೆ.
ಐಸಿಸಿ ನೀತಿ ಸಂಹಿತೆಯ 2.22 ಆರ್ಟಿಕಲ್ ಪ್ರಕಾರ ನಿಗದಿನ ಸಮಯಕ್ಕಿಂತ ನಿಧಾನವಾದ ಪ್ರತಿ ಓವರ್‌ಗೆ ಶೇಕಡಾ 20ರಷ್ಟು ದಂಡ ಬೀಳಲಿದೆ. ಟೀಮ್ ಇಂಡಿಯಾದ ನಾಲ್ಕನೇ ಪಂದ್ಯದಲ್ಲಿ 2 ಓವರ್‌ಗಳಷ್ಟು ನಿಧಾನವಾಗಿ ಬೌಲಿಂಗ್ ಮಾಡಿತ್ತು. ಹೀಗಾಗಿ ಟೀಮ್ ಇಂಡಿಯಾದ ಆಟಗಾರರು ಮತ್ತು ತಂಡದ ಸಿಬ್ಬಂದಿಗಳು 40ಶೇಕಡಾ ದಂಡಕ್ಕೆ ಗುರಿಯಾಗಿದ್ದಾರೆ.
ಟೀಮ್ ಇಂಡಿಯಾ ನಾಲ್ಕನೇ ಪಂದ್ಯವನ್ನೂ ಸೂಪರ್ ಓವರ್‌ನಲ್ಲಿ ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 165 ರನ್‌ಗಳ ಸವಾಲಿನ ಗುರಿಯನ್ನು ನ್ಯೂಜಿಲ್ಯಾಂಡ್‌ಗೆ ನೀಡಿತ್ತು. ಬಳಿಕ ಈ ಮೊತ್ತವನ್ನು ಬೆನ್ನಟ್ಟಿದ ಕೀವಿಸ್ ಪಡೆ ಪಂದ್ಯದ ಅಂತ್ಯದಲ್ಲಿ ನಾಟಕೀಯವಾಗಿ ಟೈ ಮಾಡಿಕೊಂಡು ಸೂಪರ್ ಓವರ್‌ನಲ್ಲಿ ಸೋಲು ಕಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications