Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC Final: ನ್ಯೂಜಿಲೆಂಡ್ ಗೆಲುವಿಗೆ ಅರ್ಹ ತಂಡ ಎಂದ ರವಿ ಶಾಸ್ತ್ರಿ

New Zealand were deserved winners says Team India Coach Ravi Shastri

ಸೌಥಾಂಪ್ಟನ್, ಜೂನ್ 24: ನ್ಯೂಜಿಲೆಂಡ್ ತಂಡದ ವಿರುದ್ಧ ಟೀಮ್ ಇಂಡಿಯಾದ ಸೋಲಿನ ನಂತರ ಕೋಚ್ ರವಿ ಶಾಸ್ತ್ರಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಗೆಲುವಿಗೆ ನ್ಯೂಜಿಲೆಂಡ್ ಅರ್ಹವಾದ ತಂಡ ಎಂದು ಹೇಳಿದ್ದಾರೆ. ಕೇನ್ ವಿಲಿಯಮ್ಸನ್ ಬಳಗ 8 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದಿದೆ.

ರವಿ ಶಾಸ್ತ್ರಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಶುಭಹಾರೈಸಿ ಟ್ವೀಟ್ ಮಾಡಿದ್ದಾರೆ. " ಈ ಪರಿಸ್ಥಿತಿಯಲ್ಲಿ ಉತ್ತಮ ತಂಡ ಗೆಲುವು ಸಾಧಿಸಿದೆ. ವಿಶ್ವ ಚಾಂಪಿಯನ್ ಪಟ್ಟಕ್ಕೆ ಸುದೀರ್ಘ ಕಾಲ ಕಾಯುವಿಕೆಯ ನಂತರ ಸುದೀರ್ಘ ಮಾದರಿಯಲ್ಲಿ ಅರ್ಹ ಗೆಲುವನ್ನು ಪಡೆದಿದೆ. ದೊಡ್ಡ ಸಂಗತಿಗಳು ಸುಲಭವಾಗಿ ದಕ್ಕುವುದಿಲ್ಲ ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ. ಉತ್ತಮವಾಗಿ ಆಡಿದ್ದೀರಿ ನ್ಯೂಜಿಲೆಂಡ್." ಎಂದು ರವಿಶಾಸ್ತ್ರಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದು ನ್ಯೂಜಿಲೆಂಡ್ ತಂಡದ ಎರಡನೇ ಐಸಿಸಿ ಟ್ರೋಫಿಯಾಗಿದೆ. ಇದಕ್ಕೂ ಮುನ್ನ 2000ನೇ ಇಸವಿಯಲ್ಲಿ ಮೊದಲ ಬಾರಿಗೆ ಐಸಿಸಿ ಟ್ರೋಫಿಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಮುತ್ತಿಕ್ಕಿತ್ತು. ಅಂದು ನಾಕ್‌ಔಟ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ತಂಡ ಜಯಗಳಿಸಿತ್ತು. ಅದಾದ ನಂತರ 2015 ಹಾಗೂ 2019ರ ವಿಶ್ವ ಕಪ್‌ನಲ್ಲಿ ಫೈನಲ್ ಹಂತಕ್ಕೇರಿತ್ತಾದರೂ ಗೆಲುವು ಸಾಧ್ಯವಾಗಿರಲಿಲ್ಲ.

"ಇದು ನ್ಯೂಜಿಲೆಂಡ್ ತಂಡದ ಅದ್ಭುತವಾದ ಪ್ರಯಾಣವಾಗಿದೆ. ಕಳೆದ ಕೆಲ ವರ್ಷಗಳಿಂದ ಬೃಹತ್ ಗೆಲುವಿಗೆ ಅತ್ಯಂತ ಸನಿಹಕ್ಕೆ ತಲುಪಿದ್ದರು. ಇದೀಗ ಅದು ಸಂಪೂರ್ಣವಾಗಿ ಸಾಧ್ಯವಾಗಿದೆ" ಎಂದು ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಬ್ರೆಂಡನ್ ಮೆಕ್ಕಲಮ್ ಹೇಳಿಕೆ ನೀಡಿದ್ದಾರೆ.

Story first published: Friday, June 25, 2021, 10:17 [IST]
Other articles published on Jun 25, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+