ಆಕ್ಲೆಂಡ್, ಜೂನ್ 22: ನ್ಯೂಜಿಲೆಂಡಿನ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಲ್ಯೂಕ್ ರೊಂಚಿ ಅವರು ಅಂತಾರಾಷ್ಟ್ರೀಯ ಕ್ರಿಕೆಟಿಗೆ ಗುರುವಾರ(ಜೂನ್ 22) ದಂದು ಗುಡ್ ಬೈ ಹೇಳಿದ್ದಾರೆ. 36 ವರ್ಷ ವಯಸ್ಸಿನ ರೊಂಚಿ ಅವರು ಕಿವೀಸ್ ಪರ ನಾಲ್ಕು ಟೆಸ್ಟ್ ಪಂದ್ಯ, 85 ಏಕದಿನ ಅಂತಾರಾಷ್ಟ್ರೀಯ ಪಂದ್ಯ ಹಾಗೂ 32 ಟಿ20ಐ ಪಂದ್ಯಗಳನ್ನಾಡಿದ್ದಾರೆ.ವಿಶೇಷವೆಂದರೆ ರೊಂಚಿ ಅವರು ಕಿವೀಸ್ ತಂಡದ ಭಾಗವಾಗುವ ಮೊದಲು ಆಸ್ಟ್ರೇಲಿಯಾದ ಪರ ಕೂಡಾ ಕ್ರಿಕೆಟ್ ಆಡಿದ್ದು ವಿಶೇಷ. 2008 ಹಾಗೂ 2009ರ ಅವಧಿಯಲ್ಲಿ ನಾಲ್ಕು ಏಕದಿನ ಪಂದ್ಯ ಹಾಗೂ ಟಿ20ಐ ಪಂದ್ಯಗಳನ್ನು ಆಸ್ಟ್ರೇಲಿಯಾ ಪರ ಆಡಿದ್ದ ರೊಂಚಿ, 2013ರ ನಂತರ ಕಿವೀಸ್ ತಂಡ ಸೇರಿದ್ದರು. #13; #13;