Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಗುವಿನ ನಿರೀಕ್ಷೆಯಲ್ಲಿದ್ದಾರೆ ನ್ಯೂಜಿಲೆಂಡ್‌ನ ಸಲಿಂಗಿ ಮಹಿಳಾ ಕ್ರಿಕೆಟರ್ಸ್!

New Zealand women cricket’s same-sex couple expecting their first child

ವೆಲ್ಲಿಂಗ್ಟನ್, ಆಗಸ್ಟ್ 21: ನ್ಯೂಜಿಲೆಂಡ್‌ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಆ್ಯಮಿ ಸ್ಯಾಟರ್ತ್‌ವೈಟ್ ಆಟದಿಂದ ಕೊಂಚ ಬಿಡುವು ತೆಗೆದುಕೊಳ್ಳುತ್ತಿದ್ದಾರೆ. ಹಾಗಂತ ಕ್ರಿಕೆಟ್ ಬೋರ್ಡಿನೊಂದಿಗಿನ ಅವರ ಒಪ್ಪಂದ ಕೊನೆಗೊಂಡಿಲ್ಲ. ಆದರೆ ಗರ್ಭಿಣಿ ರಜೆ ನೀತಿಯ ಅನುಸಾರ ಆ್ಯಮಿ ಸಂಬಳ ಸಹಿತ ಬಿಡುವು ತೆಗೆದುಕೊಂಡಿದ್ದಾರೆ.

ಹೇಳಿಕೆಯೊಂದರಲ್ಲಿ ಸ್ಯಾಟರ್ತ್‌ವೈಟ್ ತಾನು ಮತ್ತು ತನ್ನ ಪತ್ನಿ, ಸಹ ಆಟಗಾರ್ತಿ ಲೀ ತಹುಹು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ಮುಂದಿನ ವರ್ಷ ಜನವರಿಯಲ್ಲಿ ಮಗು ಜನಿಸುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದ್ದಾರೆ.

2021ರ ವಿಶ್ವಕಪ್‌ ವೇಳೆ ನ್ಯೂಜಿಲೆಂಡ್‌ ತಂಡ ಸೇರಿಕೊಳ್ಳುವ ವಿಶ್ವಾಸವನ್ನು ಸ್ಯಾಟರ್ತ್‌ವೈಟ್ ತೋರಿಕೊಂಡಿದ್ದಾರೆ. ಈ ವಿಶ್ವಕಪ್‌ ಟೂರ್ನಿಯ ಆತಿಥ್ಯವನ್ನು ನ್ಯೂಜಿಲೆಂಡ್ ವಹಿಸಿಕೊಳ್ಳುತ್ತಿದೆ. ಹಾಗೆಯೆ ಬಿಡುವಿನ ವೇಳೆ ತಾನು ತಂಡದ ಮಾರ್ಗದರ್ಶಿಯಾಗಿರುವುದಾಗಿ ಆ್ಯಮಿ ತಿಳಿಸಿದ್ದಾರೆ.

'ಲೀ ಮತ್ತು ನಾನು ಒಂದು ಖುಷಿಯ ವಿಚಾರ ಹಂಚಿಕೊಳ್ಳಲು ಬಯಸಿದ್ದೇವೆ. ಮುಂದಿನ ಹೊಸ ವರ್ಷದ ಆರಂಭದಲ್ಲಿ ನಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ನಾವಿದ್ದೇವೆ. ಇದು ನಮ್ಮ ಜೀವನದಲ್ಲಿ ಒಂದು ವಿಶೇಷ ಸಮಯ ಮತ್ತು ಈ ಹೊಸ ಅಧ್ಯಾಯಕ್ಕಾಗಿ ನಾವು ಕಾತರರಾಗಿದ್ದೇವೆ,' ಎಂದು ಸ್ಯಾಟರ್ತ್‌ವೈಟ್ ಹೇಳಿಕೊಂಡಿದ್ದಾರೆ.

ನ್ಯೂಜಿಲೆಂಡ್‌ ಕ್ರಿಕೆಟ್‌ನಲ್ಲಿನ ಗರ್ಭಿಣಿ ರಜೆ ನೀತಿಯ ಪ್ರಕಾರ 2019-20ರ ವರೆಗೆ ಬೋರ್ಡ್‌ನೊಂದಿಗಿನ ತನ್ನ ಒಪ್ಪಂದ ಉಳಿಸಿಕೊಂಡಿರುವ ಸ್ಯಾಟರ್ತ್‌ವೈಟ್, 2017ರ ಮಾರ್ಚ್‌ನಲ್ಲಿ ತನ್ನದೇ ತಂಡದಲ್ಲಿದ್ದ ಲೀ ತಹುಹು ಅವರನ್ನು ಮದುವೆಯಾಗಿದ್ದರು.

Story first published: Wednesday, August 21, 2019, 13:46 [IST]
Other articles published on Aug 21, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+