ಸೆಪ್ಟೆಂಬರ್‌ನಿಂದ ನ್ಯೂಜಿಲೆಂಡ್ ಮಹಿಳೆಯರ ಆಸ್ಟ್ರೇಲಿಯಾ ಪ್ರವಾಸ ಸರಣಿ

ವೆಲ್ಲಿಂಗ್ಟನ್: ಕಳೆದ ಮಾರ್ಚ್‌ನಲ್ಲಿ ಕೊರೊನಾದಿಂದಾಗಿ ಕ್ರೀಡಾಚಟುವಟಿಕೆಗಳು ಕೊನೆಗೊಂಡ ಬಳಿಕ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಮಹಿಳೆಯರು ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸರಣಿಗಾಗಿ ಮೈದಾನಕ್ಕಿಳಿಯಲಿದ್ದಾರೆ. ಸೆಪ್ಟೆಂಬರ್ ನಿಂದ ಆಸ್ಟ್ರೇಲಿಯಾ vs ನ್ಯೂಜಿಲೆಂಡ್ ಮಹಿಳೆಯರ ಪ್ರವಾಸ ಸರಣಿ ಆರಂಭಗೊಳ್ಳಲಿದೆ.
ಸೆಪ್ಟೆಂಬರ್‌ನಿಂದ ಬ್ರಿಸ್ಬೇನ್‌ನಿಂದ ಆರಂಭಗೊಳ್ಳುವ ಪ್ರವಾಸ ಸರಣಿ, ಅಕ್ಟೋಬರ್‌ನಲ್ಲಿ ಕೊನೆಗೊಳ್ಳಲಿದೆ. ಇತ್ತಂಡಗಳು ಆರು ಪಂದ್ಯಗಳ ನಿಯಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲಿವೆ. ಆಸ್ಟ್ರೇಲಿಯಾಕ್ಕೆ ನ್ಯೂಜಿಲೆಂಡ್ ಮಹಿಳೆಯರು ಪ್ರವಾಸ ಬರುತ್ತಿರುವುದನ್ನು ಕ್ರಿಕೆಟ್ ಆಸ್ಟ್ರೇಲಿಯಾ ಶನಿವಾರ (ಆಗಸ್ಟ್ 29) ಖಾತರಿಪಡಿಸಿದೆ.
ವರ್ಲ್ಡ್ ಟ್ವೆಂಟಿ20 ಚಾಂಪಿಯನ್ಸ್ ಆಸ್ಟ್ರೇಲಿಯಾ ಮಹಿಳೆಯರು ನ್ಯೂಜಿಲೆಂಡ್ ವಿರುದ್ಧ ಸುಮಾರು 12 ದಿನಗಳ ಕಾಲ ಮೂರು ಟಿ20ಐ ಮತ್ತು ಮೂರು ಏಕದಿನ ಪಂದ್ಯಗಳನ್ನಾಡಲಿದ್ದಾರೆ. ಸೆಪ್ಟೆಂಬರ್ 9ರಂದು ಆಸ್ಟ್ರೇಲಿಯಾಕ್ಕೆ ಬಂದಿಳಿಯಲಿರುವ ನ್ಯೂಜಿಲೆಂಡ್ ತಂಡ ಆ ಬಳಿಕ 14 ದಿನಗಳ ಐಸೊಲೇಶನ್ ಪಾಲಿಸಲಿದೆ.
ಆಸ್ಟ್ರೇಲಿಯಾ-ಇಂಗ್ಲೆಂಡ್ ಮೊದಲ ಟಿ20ಐ ಪಂದ್ಯ ಅಲನ್ ಬಾರ್ಡರ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 26ರಂದು ನಡೆಯಲಿದೆ. ಮುಂದಿನ ಪಂದ್ಯಗಳು ಸೆಪ್ಟೆಂಬರ್ 27 ಮತ್ತು ಸೆಪ್ಟೆಂಬರ್ 30ರಂದು ನಡೆಯಲಿದೆ. ಏಕದಿನ ಪಂದ್ಯಗಳು ಅಕ್ಟೋಬರ್ 3, 5 ಮತ್ತು 7ರಂದು ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications