Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ ಏಕದಿನ 2ನೇ ಪಂದ್ಯ: ಕಿವೀಸ್ ವಿರುದ್ಧ ಭಾರತ 8 ವಿಕೆಟ್ ಜಯಭೇರಿ

New Zealand Women vs India Women: India Women won by 8 Wickets

ಮೌಂಟ್‌ಮೌಂಗನ್ಯುಯಿ, ಜನವರಿ 29: ಮೌಂಟ್‌ಮೌಂಗನ್ಯುಯಿಯ ಬೇ ಓವಲ್ ಸ್ಟೇಡಿಯಂನಲ್ಲಿ ಮಂಗಳವಾರ (ಜನವರಿ 29) ನಡೆದ ಪ್ರವಾಸಿ ಭಾರತದ ಮಹಿಳೆಯರು ಮತ್ತು ಆತಿಥೇಯ ನ್ಯೂಜಿಲ್ಯಾಂಡ್ ಮಹಿಳೆಯರ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್ ಭರ್ಜರಿ ಜಯಭೇರಿ ಬಾರಿಸಿದೆ.

ಭಾರತದ ಸ್ಮೃತಿ ಮಂಧಾನ ಅವರ ಅಜೇಯ ಅರ್ಧಶತಕ (90 ರನ್) ಮತ್ತು ಅನುಭವಿ ವೇಗಿ ಜೂಲನ್ ಗೋಸ್ವಾಮಿ ಅವರ ಬೌಲಿಂಗ್ ಬೆಂಬಲ ತಂಡದ ಗೆಲುವನ್ನು ಬರೆಯಿತು. ಈ ಗೆಲುವಿನೊಂದಿಗೆ 3 ಪಂದ್ಯಗಳ ಏಕದಿನ ಸರಣಿಯನ್ನು ಭಾರತ 2-0ಯಿಂದ ವಶಕ್ಕೆ ಪಡೆದುಕೊಂಡಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್ ವನಿತಾ ತಂಡ, ನಾಯಕಿ ಆಮಿ ಸಟ್ಟರ್ವೈಟ್ ಏಕಾಂಗಿ ಹೋರಾಟದೊಂದಿಗೆ (71 ರನ್) 44.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 161 ರನ್ ಕಲೆ ಹಾಕಿತು. ಸಾಧಾರಣ ರನ್ ಗುರಿ ಬೆನ್ನತ್ತಿದ ಭಾರತ, ನಾಯಕಿ ಮಿಥಾಲಿ ರಾಜ್ ಅಜೇಯ 63, ಮಂಧಾನ 90 ರನ್ ನೆರವಿನೊಂದಿಗೆ 35.2 ಓವರ್‌ಗೆ 2 ವಿಕೆಟ್ ಕಳೆದು 166 ಪೇರಿಸಿತು.

ಕಿವೀಸ್ ವನಿತೆಯರ ಇನ್ನಿಂಗ್ಸ್‌ ವೇಳೆ ಭಾರತದ ಜೂಲನ್ 3, ಎಕ್ತಾ ಬಿಶ್ತ್, ದೀಪ್ತೀ ಶರ್ಮಾ ಮತ್ತು ಪೂನಂ ಯಾದವ್ ತಲಾ 2 ವಿಕೆಟ್, ಶಿಖಾ ಪಾಂಡೆ 1 ವಿಕೆಟ್ ಉರುಳಿಸಿ ತಂಡದ ಗೆಲುವಿಗೆ ಕಾರಣರಾದರು. ಅಬ್ಬರದ ಬ್ಯಾಟಿಂಗ್‌ ನಡೆಸಿದ ಸ್ಮೃತಿ ಪಂದ್ಯ ಶ್ರೇಷ್ಠ ಆಟಗಾರ್ತಿಯೆನಿಸಿದರು.

Story first published: Tuesday, January 29, 2019, 13:04 [IST]
Other articles published on Jan 29, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+