3ನೇ ಪಂದ್ಯ ಸೋತರೂ ಕಿವೀಸ್ ಏಕದಿನ ಸರಣಿ ಗೆದ್ದ ಭಾರತದ ಮಹಿಳೆಯರು

ಹ್ಯಾಮಿಲ್ಟನ್, ಫೆಬ್ರವರಿ 1: ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ಶುಕ್ರವಾರ (ಫೆಬ್ರವರಿ 1) ನಡೆಯುತ್ತಿರುವ ನ್ಯೂಜಿಲ್ಯಾಂಡ್ ವನಿತೆಯರು ಮತ್ತು ಭಾರತದ ವನಿತೆಯರ ನಡುವಿನ 3ನೇ ಏಕದಿನ ಪಂದ್ಯದಲ್ಲಿ ಆತಿಥೇಯ ಕಿವೀಸ್ 8 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿದೆ. 3 ಪಂದ್ಯಗಳ ಏಕದಿನ ಸರಣಿ 2-1ರಿಂದ ಭಾರತದ ಮಡಿಲೇರಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡ ಎದುರಾಳಿಗೆ 150 ರನ್ ಗುರಿ ನೀಡಿತ್ತು. ಇನ್ನಿಂಗ್ಸ್ ಆರಂಭಿಸಿದ ಭಾರತದ ಮಹಿಳೆಯರು 44 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 149 ರನ್ ಗಳಿಸಿದರು. 52 ರನ್‌ನೊಂದಿಗೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ದೀಪ್ತೀ ಶರ್ಮಾ ತಂಡದ ಮೊತ್ತ ಹೆಚ್ಚುವಂತೆ ನೋಡಿಕೊಂಡರು.
ಆದರೆ ನ್ಯೂಜಿಲ್ಯಾಂಡಿಗೆ ಸವಾಲಿನ ರನ್ ಗುರಿ ನೀಡುವಲ್ಲಿ ಭಾರತ ಎಡವಿತ್ತು. ಸುಝೀ ಬೇಟ್ಸ್ 57, ಆಮಿ ಸಟ್ಟರ್ವೈಟ್ 66 ರನ್ ನೆರವಿನೊಂದಿಗೆ ನ್ಯೂಜಿಲ್ಯಾಂಡ್ 29.2 ಓವರ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 153 ರನ್ ಪೇರಿಸುವುದರೊಂದಿಗೆ ಗೆಲುವನ್ನಾಚರಿಸಿತು.
ಈ ಪಂದ್ಯಕ್ಕಾಗಿ ಮೈದಾನಕ್ಕಿಳಿದಿದ್ದ ಭಾರತ ತಂಡದ ನಾಯಕಿ ಮಿಥಾಲಿ ರಾಜ್ 200ನೇ ಏಕದಿನ ಕ್ರಿಕೆಟ್ ಪಂದ್ಯ ಆಡಿದ ವಿಶ್ವದ ಮೊದಲ ಮಹಿಳೆ ಹೆಗ್ಗಳಿಕೆ ಪಾತ್ರರಾದರು. ಕಿವೀಸ್‌ನ ಆ್ಯನ್ನ ಪೀಟರ್‌ಸನ್ ಪಂದ್ಯಶ್ರೇಷ್ಠೆ ಎನಿಸಿದರೆ, ಭಾರತ ಸ್ಮೃತಿ ಮಂಧಾನ ಸರಣಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications