ಮಹಿಳಾ ಟಿ20: ಭಾರತ ವಿರುದ್ಧ ನ್ಯೂಜಿಲ್ಯಾಂಡ್‌ಗೆ 2 ರನ್ ರೋಚಕ ಜಯ

ಹ್ಯಾಮಿಲ್ಟನ್, ಫೆಬ್ರವರಿ 10: ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ಭಾನುವಾರ (ಫೆಬ್ರವರಿ 10) ನಡೆದ ಭಾರತ vs ನ್ಯೂಜಿಲ್ಯಾಂಡ್ ಮಹಿಳಾ ಟಿ20 ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡ್ ತಂಡ 2 ರನ್ ರೋಚಕ ಗೆಲುವನ್ನಾಚರಿಸಿದೆ. ಇದರೊಂದಿಗೆ ಭಾರತ 3-೦ಯಿಂದ ಸರಣಿ ಸೋತು ವೈಟ್ ವಾಷ್ ಮುಖಭಂಗ ಅನುಭವಿಸಿದೆ.
ಭಾರತದ ವನಿತೆಯರ ಬ್ಯಾಟಿಂಗ್ ವಿಭಾಗದ ನಿರ್ಲಕ್ಷ್ಯ ಸೋಲಿಗೆ ಕಾರಣವಾಗಿದೆ. ತಂಡದ ಪರ ಸ್ಮೃತಿ ಮಂಧಾನ ಒಬ್ಬರೇ ಹೋರಾಟ ನಡೆಸಿದ್ದು ಕಂಡುಬಂತು. ಮಂಧಾನ 86 ರನ್ ಸೇರಿಸಿದರು. ನ್ಯೂಜಿಲ್ಯಾಂಡ್ ನೀಡಿದ್ದ 162 ರನ್ ಗುರಿ ಬೆನ್ನಟ್ಟಿದ ಭಾರತ 20 ಓವರ್‌ಗೆ 4 ವಿಕೆಟ್ ಕಳೆದು 159 ರನ್ ಗಳಿಸಿ ತಲೆ ಬಾಗಿತು.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಕಿವೀಸ್ ವನಿತೆಯರಿಗೆ ಸೋಫಿ ಡೆವೈನ್ 72, ನಾಯಕಿ ಆಮಿ ಸಟ್ಟರ್ವೈಟ್ 31 ರನ್ ಗಳಿಸಿದ್ದು ಗೆಲುವಿನ ನೆಲೆಯಲ್ಲಿ ನೆರವಿಗೆ ಬಂತು. ನ್ಯೂಜಿಲ್ಯಾಂಡ್ 20 ಓವರ್‌ಗೆ 7 ವಿಕೆಟ್ ಕಳೆದು 161 ರನ್ ಪೇರಿಸಿತ್ತು. ಪಂದ್ಯಶ್ರೇಷ್ಠೆ ಸರಣಿ ಶ್ರೇಷ್ಠೆ ಎರಡೂ ಪ್ರಶಸ್ತಿ ಸೋಫಿ ಡೆವೈನ್ ಗೆ ಒಲಿಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications