Women's T20 World Cup: ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ನ್ಯೂಜಿಲೆಂಡ್ ವನಿತೆಯರು
ನ್ಯೂಜಿಲೆಂಡ್ ವನಿತೆಯರ ತಂಡ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2024ರ ಚಾಂಪಿಯನ್ ಆಗಿದೆ. ಬಹಳ ಕುತೂಹಲ ಮೂಡಿಸಿದ ಟಿ20 ವಿಶ್ವಕಪ್ 2024ರ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 32 ರನ್‌ಗಳಿಂದ ಸೋಲಿಸಿದ ನ್ಯೂಜಿಲೆಂಡ್ ಚೊಚ್ಚಲ ಪ್ರಶಸ್ತ ಗೆದ್ದು ಇತಿಹಾಸ ನಿರ್ಮಿಸಿದೆ.
ಟಿ20 ವಿಶ್ವಕಪ್ 2024ರ ಟೂರ್ನಿಯುದ್ದಕ್ಕೂ ಕಿವೀಸ್ ಪಡೆ ವನಿಯತೆಯರು ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಯಾವುದೇ ನ್ಯೂಜಿಲೆಂಡ್ ಪುರುಷ ಅಥವಾ ಮಹಿಳಾ ತಂಡ ಐಸಿಸಿ ವಿಶ್ವಕಪ್ ಟ್ರೋಫಿ ಗೆದ್ದಿರುವುದು ಇದೇ ಮೊದಲು. ಇದಕ್ಕೂ ಮುನ್ನ ಕಿವೀಸ್ ತಂಡ ಐಸಿಸಿ ಏಕದಿನ ಹಾಗೂ ಟಿ20 ಟ್ರೋಫಿ ಗೆದ್ದಿರಲಿಲ್ಲ.

ದಕ್ಷಿಣ ಆಫ್ರಿಕಾ ತಂಡ ಕೂಡ ಇನ್ನೂ ಯಾವುದೇ ಐಸಿಸಿ ವಿಶ್ವಕಪ್ ಟ್ರೋಫಿಯನ್ನು ಗೆದ್ದಿಲ್ಲ. ಇಂತಹ ಪರಿಸ್ಥಿತಿಯಲ್ಲಿ 2024ರ ಪುರುಷರ ಟಿ 20 ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತದ ಸೋಲಿನ ನಂತರ, ದಕ್ಷಿಣ ಆಫ್ರಿಕಾದ ಅಭಿಮಾನಿಗಳು ಮಹಿಳಾ ತಂಡ ಕಪ್ ಗೆಲ್ಲುತ್ತದೆ ಎಂದು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ಈ ಬಾರಿಯೂ ಹರಿಣಗಳ ಪಡೆ ಚೋಕರ್ ಎಂದು ಸಾಬೀತುಪಡಿಸಿದೆ.
ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಅಮೆಲಿಯಾ ಕೆರ್ (43), ಸುಜಿ ಬೇಟ್ಸ್ (32) ಮತ್ತು ಬ್ರಾಕ್ ಹ್ಯಾಲಿಡೆ (38) ಜವಾಬ್ದಾರಿಯುತ ಆಟದಿಂದಾಗಿ 158 ರನ್ ಗಳಿಸಿತು. ಈ ಮೂವರ ಹೊರತಾಗಿ ಯಾವುದೇ ಕಿವೀಸ್ ಬ್ಯಾಟರ್‌ಗಳು ತಂಡಕ್ಕೆ ಆಸರೆಯಾಗಲಿಲ್ಲ. ಇಲ್ಲಿಂದ ದಕ್ಷಿಣ ಆಫ್ರಿಕಾ ಗೆಲ್ಲುತ್ತದೆ ಎಂದು ಎಲ್ಲರೂ ಭಾವಿಸಿದರು.
ಕಿವೀಸ್ ನೀಡಿದ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಭರ್ಜರಿ ಆರಂಭ ಪಡೆಯಿತು. ಆಫ್ರಿಕಾ ಯಾವುದೇ ವಿಕೆಟ್ ನಷ್ಟವಿಲ್ಲದೆ 51 ರನ್ ಗಳಿಸಿತ್ತು. ನಂತರ 7ನೇ ಓವರ್ ನ ಕೊನೆಯ ಎಸೆತದಲ್ಲಿ ತಜ್ಮಿನ್ ಬ್ರಿಟ್ಸ್ 18 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇತ್ತ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ನಾಯಕಿ ಲಾರಾ ವಾಲ್ಡ್‌ವರ್ತ್ 33 ರನ್‌ಗಳಿಗೆ ಕ್ಯಾಚ್ ಔಟ್ ಆದರು.
ಬಳಿಕ ಬ್ಯಾಟಿಂಗ್‌ಗೆ ಬಂದ ಮರಿಜಾನೆ ಕಪ್ ಮತ್ತು ಬೋಶ್ ಕೂಡ ವಿಶೇಷ ಪ್ರದರ್ಶನ ತೋರದೆ ಕೊನೆ ಹಂತದಲ್ಲಿ ವಿಕೆಟ್ ಕಳೆದುಕೊಂಡರು. ಪ್ರಶಸ್ತಿ ಗೆಲ್ಲಲು ಆಫ್ರಿಕಾಕ್ಕೆ ಕೊನೆಯ 36 ಎಸೆತಗಳಲ್ಲಿ 72 ರನ್‌ಗಳ ಅಗತ್ಯವಿತ್ತು. ಆದರೆ ದಕ್ಷಿಣ ಆಫ್ರಿಕಾ ಇಲ್ಲಿಂದ ರನ್ ಗಳಿಸಲು ಸಾಧ್ಯವಾಗದೆ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
ಹರಿಣಗಳ ಪಡೆಯ ಕೊನೆಯ ಭರವಸೆ ಆಗಿ ಉಳಿದಿದ್ದ ಸುನೆ ಲೂಸ್ 16ನೇ ಓವರ್ ನಲ್ಲಿ ಪೆವಿಲಿಯನ್‌ಗೆ ಮರಳಿದರು. ಕಿವೀಸ್ ತಂಡ ಚಾಂಪಿಯನ್ ಆಗಲು 4 ವಿಕೆಟ್ ಅಗತ್ಯವಿತ್ತು. ಮತ್ತೊಂದೆಡೆ ಆಫ್ರಿಕಾಕ್ಕೆ 29 ಎಸೆತಗಳಲ್ಲಿ 62 ರನ್ ಬೇಕಿತ್ತು. ಆ ಬಳಿಕ ಆಫ್ರಿಕಾ ತನ್ನೆಲ್ಲ ವಿಕೆಟ್‌ಗಳನ್ನು ಒಂದರ ಹಿಂದೆ ಒಂದರಂತೆ ಕಳೆದುಕೊಂಡು ಸೋಲು ಕಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications