Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SA vs NZ : 4 ವಿಕೆಟ್‌ಗಳ ರೋಚಕ ಜಯ: ಶ್ರೀಲಂಕಾ ವಿರುದ್ಧ ಟಿ20 ಸರಣಿ ಗೆದ್ದ ನ್ಯೂಜಿಲೆಂಡ್

ಕ್ವೀನ್ಸ್‌ಟೌನ್‌ನ ಜಾನ್ ಡೇವಿಸ್ ಓವಲ್‌ನಲ್ಲಿ ನಡೆದ ಟಿ20 ಸರಣಿಯ ನಿರ್ಣಾಯಕ ಪಂದ್ಯದಲ್ಲಿ ನ್ಯೂಜಿಲೆಂಡ್ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ಕೊನೆಯ ಪಂದ್ಯ ಗೆಲ್ಲುವ ಮೂಲಕ 2-1 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಒವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು. ಟೀಮ್ ಸೀಫರ್ಟ್ ಉತ್ತಮ ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್ ಈ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿತು.

ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಉತ್ತಮ ಆರಂಭ ಪಡೆಯಿತು ಪಾತುಮ್ ನಿಸಾಂಕ 25 ಎಸೆತಗಳಲ್ಲಿ 25 ರನ್ ಗಳಿಸಿ ಔಟಾದರು. ಕುಶಾಲ್ ಮೆಂಡಿಸ್ 48 ಎಸೆತಗಳಲ್ಲಿ 6 ಬೌಂಡರಿ 4 ಸಿಕ್ಸರ್ ನೆರವಿನಿಂದ 73 ರನ್ ಗಳಿಸಿದರು. ಮೊದಲನೇ ವಿಕೆಟ್‌ಗೆ ಈ ಜೋಡಿ 76 ರನ್ ಕಲೆಹಾಕಿತು. ಕುಶಾಲ್ ಪೆರೆರಾ ಕೂಡ 21 ಎಸೆತಗಳಲ್ಲಿ 33 ರನ್ ಗಳಿಸಿ ಮಿಂಚಿದರು.

New Zealand Won

ಧನಂಕಯ ಡಿ ಸಿಲ್ವ 9 ಎಸೆತಗಳಲ್ಲಿ 20 ರನ್ ಗಳಿಸಿದರೆ, ನಾಯಕ ದಸುನ್ ಶನಕ 8 ಎಸೆತಗಳಲ್ಲಿ 15 ರನ್ ಗಳಿಸಿದರು. ಚರಿತ್ ಅಸಲಂಕ 6 ಎಸೆತಗಳಲ್ಲಿ 3 ರನ್ ಗಳಿಸಿದರು. ಕೊನೆಯ ಓವರ್ ನಲ್ಲಿ ಮ್ಯಾಟ್ ಹೆನ್ರಿ ಕೇವಲ 3 ರನ್ ನೀಡುವ ಮೂಲಕ ಶ್ರೀಲಂಕಾ ರನ್ ಗಳಿಕೆಗೆ ಕಡಿವಾಣ ಹಾಕಿದರು. 200 ರನ್ ಗಳಿಸುವ ಅವಕಾಶ ಇದ್ದರೂ, ಕೊನೆಯ ಹಂತದಲ್ಲಿ ಎಡವಿದ ಲಂಕಾ 182 ರನ್ ಗಳನ್ನು ಗಳಿಸಿತು.

ರೋಚಕ ಗೆಲುವು ಸಾಧಿಸಿದ ನ್ಯೂಜಿಲೆಂಡ್

ಬೃಹತ್ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲೆಂಡ್ ತಂಡಕ್ಕೆ ಚಾಡ್ ಬೋವ್ಸ್, ಟಿಮ್ ಸೀಫರ್ಟ್ ಅತ್ಯುತ್ತಮ ಆರಂಭ ಒದಗಿಸಿದರು. ಚಾಡ್ ಬೋವ್ಸ್ 18 ಎಸೆತಗಳಲ್ಲಿ 17 ರನ್ ಗಳಿಸಿದರು, ಟಿಮ್ ಸೀಫರ್ಟ್ ಮಾತ್ರ ಸ್ಫೋಟಕ ಇನ್ನಿಂಗ್ಸ್ ಆಡಿದರು. ಮೊದಲನೇ ವಿಕೆಟ್‌ಗೆ ಈ ಜೋಡಿ 53 ರನ್ ಕಲೆಹಾಕಿತು. ಸೀಫರ್ಟ್ 48 ಎಸೆತಗಳಲ್ಲಿ 10 ಬೌಂಡರಿ ಮೂರು ಭರ್ಜರಿ ಸಿಕ್ಸರ್ ಸಹಿತ 88 ರನ್ ಗಳಿಸಿದರು. ನಾಯಕ ಟಾಮ್ ಲಾಥಮ್ 23 ಎಸೆತಗಳಲ್ಲಿ 31 ರನ್ ಗಳಿಸಿ ಮಿಂಚಿದರು.

ಕೊನೆಯ ಓವರ್ ನಲ್ಲಿ ನ್ಯೂಜಿಲೆಂಡ್ ಗೆಲುವಿಗೆ 10 ರನ್‌ಗಳ ಅಗತ್ಯವಿತ್ತು. ಮೊದಲನೇ ಎಸೆತದಲ್ಲೇ ಸಿಕ್ಸರ್ ಸಿಡಿಸಿದ ಮಾರ್ಕ್ ಚಾಪ್‌ಮನ್ ನ್ಯೂಜಿಲೆಂಡ್‌ ಗೆಲುವನ್ನು ಖಚಿತಪಡಿಸಿದರು, ಆದರೆ ಎರಡನೇ ಎಸೆತದಲ್ಲೇ ಕ್ಯಾಚ್ ನೀಡಿ ಔಟಾದರು, ಮೂರನೇ ಎಸೆತದಲ್ಲಿ ನೀಶಮ್ ರನೌಟ್ ಆಗುವ ಮೂಲಕ ಪಂದ್ಯ ರೋಚಕವಾಯಿತು. ಆದರೆ ರಚಿನ್ ರವೀಂದ್ರ ಮೊದಲನೇ ಎಸೆತದಲ್ಲೇ ಎರಡು ರನ್ ಗಳಿಸುವ ಮೂಲಕ ಇನ್ನೂ ಒಂದು ಎಸೆತ ಬಾಕಿ ಇರುವಂತೆ ನ್ಯೂಜಿಲೆಂಡ್‌ಗೆ ಗೆಲುವು ತಂದುಕೊಟ್ಟರು.

New Zealand Won

ಉಭಯ ತಂಡಗಳ ಆಡುವ ಬಳಗ

ಶ್ರೀಲಂಕಾ : ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಕುಸಲ್ ಪೆರೆರಾ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಸುನ್ ಶನಕ (ನಾಯಕ), ವನಿಂದು ಹಸರಂಗಾ, ಮಹೀಶ್ ತೀಕ್ಷಣ, ಪ್ರಮೋದ್ ಮದುಶನ್, ಕಸುನ್ ರಜಿತ, ಲಹಿರು ಕುಮಾರ.

ನ್ಯೂಜಿಲೆಂಡ್ : ಚಾಡ್ ಬೋವ್ಸ್, ಟಿಮ್ ಸೀಫರ್ಟ್, ಟಾಮ್ ಲ್ಯಾಥಮ್ (ನಾಯಕ/ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಜೇಮ್ಸ್ ನೀಶಮ್, ರಚಿನ್ ರವೀಂದ್ರ, ಆಡಮ್ ಮಿಲ್ನೆ, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬೆನ್ ಲಿಸ್ಟರ್.

Story first published: Saturday, April 8, 2023, 10:40 [IST]
Other articles published on Apr 8, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+