ಮುಂಬೈನಲ್ಲಿ ಅಭ್ಯಾಸ ಆರಂಭಿಸಿದ ಕಿವೀಸ್ ಸ್ಪಿನ್ನರ್
ಟೀಮ್ ಇಂಡಿಯಾ ಸದ್ಯ ಬಾಂಗ್ಲಾದೇಶದ ವಿರುದ್ಧ ಟಿ20 ಸರಣಿಯನ್ನು ಆಡುತ್ತಿದೆ. ಆಡಿರುವ ಎರಡೂ ಪಂದ್ಯಗಳನ್ನು ಗೆದ್ದ ಭಾರತ, ಮೂರನೇ ಪಂದ್ಯಕ್ಕೆ ಸಿದ್ಧತೆ ನಡೆಸಿದೆ. ಇದಕ್ಕೂ ಮೊದಲು ನಡೆದ ಟೆಸ್ಟ್ ಸರಣಿಯಲ್ಲಿ ರೋಹಿತ್ ಪಡೆ ಅಮೋಘ ಪ್ರದರ್ಶನ ನೀಡಿ ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು. ಇದೇ ಹಾದಿಯನ್ನು ತುಳಿಯುವ ಕನಸು ಟೀಮ್ ಇಂಡಿಯಾದ ಯುವ ಪಡೆಯದ್ದಾಗಿದೆ. ಇದಾದ ಬಳಿಕ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಗೆ ಈಗಾಗಲೇ ಅನುಭವಿ ಆಟಗಾರರು ಅಭ್ಯಾಸ ನಡೆಸಿದ್ದಾರೆ.
ಈ ಮಹತ್ವದ ಸರಣಿಗೆ ಇನ್ನು ಭಾರತ ತಂಡವನ್ನು ಪ್ರಕಟಿಸಿಲ್ಲ. ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಡಿಯಲ್ಲಿ ಆಡಲಾಗುತ್ತಿದ್ದು, ಕುತೂಹಲ ಮೂಡಿಸಿದೆ. ಈ ಸರಣಿಯ ಮೊದಲ ಪಂದ್ಯ ಅಕ್ಟೋಬರ್ 16ರಿಂದ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಕಟ್ಟಿ ಹಾಕಲು ನ್ಯೂಜಿಲೆಂಡ್ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ.

ಮುಂಬೈನಲ್ಲಿ ಸ್ಟಾರ್ ಸ್ಪಿನ್ನರ್ ಅಭ್ಯಾಸ
ಭಾರತದಲ್ಲಿ ಟೆಸ್ಟ್ ಸರಣಿ ನಡೆಯುತ್ತಿದ್ದು, ಸ್ಪಿನ್ ಬೌಲರ್‌ಗಳ ಮೇಲೆ ಎಲ್ಲರ ಚಿತ್ತ ನೆಟ್ಟಿರುತ್ತದೆ. ನ್ಯೂಜಿಲೆಂಡ್ ತಂಡದಲ್ಲೂ ಸ್ಪಿನ್ ಬೌಲರ್‌ಗಳು ಇದ್ದಾರೆ. ಈಗಾಗಲೇ ನ್ಯೂಜಿಲೆಂಡ್‌ನ ಸ್ಟಾರ್ ಸ್ಪಿನ್ನರ್ ಅಜಾಜ್ ಪಟೇಲ್ ಭಾರತ ತಲುಪಿದ್ದು, ಈಗಾಗಲೇ ಮುಂಬೈನಲ್ಲಿ ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ. ನ್ಯೂಜಿಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಅಜಾಜ್ ಭಾರತದ ಮುಂಬೈ ಮೂಲದವರು. ತಮ್ಮ ಕುಟುಂಬಸ್ಥರನ್ನು ಭೇಟಿಯಾಗಲು ಅಜಾಜ್ ಪಟೇಲ್ ಮುಂಬೈಗೆ ಬಂದಾಗ, ತಂಡವನ್ನು ಘೋಷಿಸಲಾಗಿದೆ.
ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯಲಿದೆ. ಶುಕ್ರವಾರ ಕಿವೀಸ್ ಭಾರತ ಪ್ರವಾಸವನ್ನು ಆರಂಭಿಸಲಿದೆ. ಅಜಾಜ್ ಗುರುವಾರ ಮುಂಬೈನಿಂದ ಬೆಂಗಳೂರಿಗೆ ತೆರಳಿ ಅಲ್ಲಿ ತಮ್ಮ ತಂಡವನ್ನು ಅವರು ಸೇರಿಕೊಳ್ಳಲಿದ್ದಾರೆ.
ಅಜಾಜ್ ಪಟೇಲ್ ಅವರು ಅಫ್ಘಾನಿಸ್ತಾನದ ಮ್ಯಾನೇಜರ್ ಆಗಿದ್ದ ದತ್ತಾ ಮಿತಾಬಾಕರ್ ಅವರನ್ನು ಸಂಪರ್ಕಿಸಿ, ತಾವು ಮುಂಬೈನಲ್ಲಿ ಅಭ್ಯಾಸ ಮಾಡಲು ಏರ್ಪಾಡು ಮಾಡಿಕೊಡಿ ಎಂದು ಮನವಿಯನ್ನು ಇಟ್ಟಿದ್ದರು. ಇದರಂತೆ ಅಜಾಜ್‌ಗೆ ಮುಂಬೈನಲ್ಲಿ ಅಭ್ಯಾಸ ಮಾಡಲು ಸ್ಥಳವಾಕಾಶ ನೀಡಲಾಗಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಅಜಾಜ್ ಇತಿಹಾಸ
ಅಜಾಜ್ ಪಟೇಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅಮೋಘ ದಾಖಲೆಯನ್ನು ಹೊಂದಿದ್ದಾರೆ. ಇವರು ಆಡಿದ 18 ಟೆಸ್ಟ್ ಪಂದ್ಯಗಳ 32 ಇನಿಂಗ್ಸ್‌ಗಳಲ್ಲಿ 70 ವಿಕೆಟ್ ಕಬಳಿಸಿದ್ದಾರೆ. ಮುಂಬೈನಲ್ಲಿ 2021, ಡಿಸೆಂಬರ್ 3 ರಿಂದ ಆರಂಭವಾಗಿದ್ದ ಟೆಸ್ಟ್‌ನಲ್ಲಿ ಅಜಾಜ್ ಇತಿಹಾಸ ನಿರ್ಮಿಸಿದ್ದರು. ಒಂದೇ ಇನಿಂಗ್ಸ್‌ನಲ್ಲಿ ಎಲ್ಲ ಹತ್ತು ವಿಕೆಟ್ ಪಡೆದು ದಾಖಲೆ ಬರೆದಿದ್ದರು. ಅಲ್ಲದೆ ಈ ದಾಖಲೆ ಮಾಡಿದ ವಿಶ್ವದ ಮೂರನೇ ಆಟಗಾರ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡರು. ಹೀಗಾಗಿ ಅಜಾಜ್ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications