IN Pics: ಹರಿಣಗಳ ವಿರುದ್ಧ ಸೆಣೆಸಲು ಹುಲಿಗಳ ಸಮರಾಭ್ಯಾಸ
ಮೊಹಾಲಿ, ನವೆಂಬರ್, 04: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಮೊಹಾಲಿಯಲ್ಲಿ ಮೊದಲ ಟೆಸ್ಟ್ ಆಡಲು ಭಾರತ ತಂಡ ಸಜ್ಜಾಗಿದ್ದು ಕಠಿಣ ಅಭ್ಯಾಸ ನಡೆಸಿದೆ. ನಾಯಕ ವಿರಾಟ್ ಕೊಹ್ಲಿಗೆ ತವರಿನಲ್ಲಿ ಸರಣಿ ಗೆಲ್ಲುವ ಅವಕಾಶವಿದೆ. ಎರಡು ಸರಣಿಗಳನ್ನು ದಕ್ಕಿಸಿಕೊಂಡಿರುವ ಆತ್ಮವಿಶ್ವಾಸದಲ್ಲಿ ದಕ್ಷಿಣ ಆಫ್ರಿಕಾ ಬೀಗುತ್ತಿದ್ದರೆ, ಭಾರತ ತನ್ನ ಟೆಸ್ಟ್ ಶ್ರೇಯಾಂಕದ ಪಟ್ಟ ಕಾಪಾಡಿಕೊಳ್ಳಲು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಕ್ಕಿದೆ.[ಗ್ಯಾಲರಿ : ದಕ್ಷಿಣ ಆಫ್ರಿಕಾ vs ಭಾರತ ಸರಣಿ]
ಮಹೆಂದ್ರ ಸಿಂಗ್ ಧೋನಿ ನಂತರ ಟೆಸ್ಟ್ ತಂಡ ಮುನ್ನಡೆಸುತ್ತಿರುವ ಕೊಹ್ಲಿಗೆ ರವಿಶಾಸ್ತ್ರೀ ಮಾರ್ಗದರ್ಶಕರಾಗಿದ್ದಾರೆ. ಅಶ್ವಿನ್ ಮತ್ತು ಮಿಶ್ರಾ ಸ್ಪಿನ್ ಬೆಂಬಲ ತಂಡಕ್ಕಿದ್ದರೆ ವೇಗದ ಬೌಲಿಂಗ್ ವಿಭಾಗ ಸಾಧಾರಣವಾಗಿದೆ. ಇಶಾಂತ್ ಶರ್ಮಾ ತಂಡಕ್ಕೆ ಮರಳಿದ್ದರೂ ಮೊಹಾಲಿ ಟೆಸ್ಟ್ ಆಡುವುದು ಅನುಮಾನ.[ಮೊಹಾಲಿಯಲ್ಲಿ ಹುಲಿಗಳಿಗೆ ಒಲಿಯುವುದೆ ಜಯ?]
ಟಿ20 ಹಾಗೂ ಏಕದಿನ ಕ್ರಿಕೆಟ್ ಸರಣಿಯನ್ನು ಕಳೆದುಕೊಂಡಿರುವ ಭಾರತ ಟೆಸ್ಟ್ ಪಂದ್ಯಗಳನ್ನಾದರೂ ಉಳಿಸಿಕೊಳ್ಳಬೇಕೆಂಬ ಹಂಬಲದಲ್ಲಿದೆ. ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಇಶಾಂತ್ ಶರ್ಮಾ, ರವೀದ್ರ ಜಡೇಜಾ ಸೇರಿದಂತೆ ಭಾರತದ ಎಲ್ಲ ಆಟಗಾರರು ಕಠಿಣ ಅಭ್ಯಾಸ ಮಾಡಿದರು. ಭಾರತದ ಆಟಗಾರರ ಅಭ್ಯಾಸದ ಚಿತ್ರಗಳನ್ನು ನೋಡಿಕೊಂಡು ಬನ್ನಿ....(ಪಿಟಿಐ ಚಿತ್ರಗಳು)

ಹಿಟ್ ಮಾಡುವರೇ ರೋಹಿತ್ ಶರ್ಮಾ ?
ಆಫ್ರಿಕಾ ವಿರುದ್ಧ ಟಿ 20 ಮತ್ತು ಏಕದಿನ ಪಂದ್ಯಗಳಲ್ಲಿ ಉತ್ತಮ ಸಾಧನೆ ತೋರಿದ ರೋಹಿತ್ ಶರ್ಮಾ ಅವರ ಮೇಲೆ ನಿರೀಕ್ಷೆಗಳ ಭಾರವಿದೆ.

ಗುರು ಶಾಸ್ತ್ರೀ
ಮೊಹಾಲಿ ಅಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಟೀಂ ಇಂಡಿಯಾ ಮೆಂಟರ್ ರವಿ ಶಾಸ್ತ್ರೀ ಮತ್ತು ನಾಯಕ ವಿರಾಟ್ ಕೊಹ್ಲಿ ಕಂಡಿದ್ದು ಹೀಗೆ..

ವೇಗದ ಬೌಲಿಂಗ್ ಹೇಗೆ?
ಭಾರತಕ್ಕೆ ವೇಗದ ಬೌಲಿಂಗ್ ವಿಭಾಗದ್ದೇ ಚಿಂತೆ ತಂದಿದೆ. ಅನುಭವಿ ಇಶಾಂತ್ ಶರ್ಮಾ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಜಡೇಜಾಗಮನ
ಆಲ್ ರೌಂಡರ್ ರವೀಂದ್ರ ಜಡೇಜಾ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡು ವಿಭಾಗದಲ್ಲಿ ಜಡೇಜಾ ಸವಾಲು ನಿರ್ವಹಿಸಬೇಕಿದೆ.

ಭಾರತದ ವೇಗಿಗಳು
ಅಭ್ಯಾಸದ ವೇಳೆ ಕಂಡುಬಂದ ಭಾರತದ ವೇಗಿಗಳಾದ ಇಶಾಂತ್ ಶರ್ಮಾ, ಭುವನೇಶ್ವರ ಕುಮಾರ್ ಮತ್ತು ವರುಣ್ ಆರುನ್.

ಸಮಾಲೋಚನೆ
ದಕ್ಷಿಣ ಆಫ್ರಿಕಾವನ್ನು ಯಾವ ರೀತಿ ಕಟ್ಟಿ ಹಾಕಬೇಕು ಎಂಬುದನ್ನು ಸಮಾಲೋಚಿಸುತ್ತಿರುವ ಸ್ಪಿನ್ನರ್ ಅಮಿತ್ ಮಿಶ್ರಾ, ರವೀಂದ್ರ ಜಡೇಜಾ.

ಶಿಕಾರಿಗೆ ಧವನ್ ಸಿದ್ಧ
ಆರಂಭಿಕ ಆಟಗಾರ ಶಿಖರ್ ಧವನ್ ಕಠಿಣ ಅಭ್ಯಾಸ ನಡೆಸಿದರು. ರವೀಂದ್ರ ಜಡೇಜಾ ಮತ್ತು ಧವನ್ ನಡುವೆ ನಡೆದ ಸಂಭಾಷಣೆ.

ಗೆಲುವು ದಕ್ಕುವುದೆ?
ಬ್ಯಾಟಿಂಗ್ ಅಭ್ಯಾಸದ ವೇಳೆ ಮೊಹಾಲಿಯಲ್ಲಿ ವಿರಾಟ್ ಕೊಹ್ಲಿ ಕಣ್ಣಿಗೆ ಬಿದ್ದಿದ್ದು ಹೀಗೆ. ಮೊಹಾಲಿಯಲ್ಲಿ ಟೀಂ ಇಂಡಿಯಾ ಶೈನ್ ಆಗುವುದೇ ಎಂದು ಕೊಹ್ಲಿ ಲೆಕ್ಕಹಾಕುತ್ತಿದ್ದಂತೆ ಭಾಸವಾಗುತ್ತಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications