For Quick Alerts
ALLOW NOTIFICATIONS  
For Daily Alerts
 

World Cup 2023: ಮಳೆಯಿಂದಾಗಿ ಸೆಮಿಫೈನಲ್ ಪಂದ್ಯ ರದ್ದಾದರೆ, ಭಾರತ ತಂಡದ ಕಥೆಯೇನು?

By ನಾಗೇಶ್

ಪ್ರಸಕ್ತ 2023ರ ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಡಿದ ಎಲ್ಲಾ ಒಂಬತ್ತು ಪಂದ್ಯಗಳಲ್ಲೂ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಜಯಭೇರಿ ಬಾರಿಸಿ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದೆ.

ಅಲ್ಲದೆ, ಈ ಬಾರಿಯ ವಿಶ್ವಕಪ್‍ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಭಾರತ ತಂಡ ಪಾತ್ರವಾಗಿದೆ. 2019ರ ವಿಶ್ವಕಪ್‍ ಸೆಮಿಫೈನಲ್ ಪಂದ್ಯವೇ ಈ ಬಾರಿಯೂ ಪುನರಾವರ್ತನೆ ಆಗಿದೆ. ಏಕೆಂದರೆ, ಕಳೆದ ಬಾರಿಯಂತೆ ಈ ಬಾರಿಯೂ ಬಲಿಷ್ಠ ಕಿವೀಸ್ ತಂಡ ಎದುರಾಳಿಯಾಗಿದೆ.

ICC World Cup 2023: If Semi-final Match Canceled Due to Rain, Team India Will Enters To final

2023ರ ವಿಶ್ವಕಪ್ ಈಗ ಅಂತಿಮ ಘಟ್ಟ ತಲುಪಿದ್ದು, ಈ ಏಕದಿನ ವಿಶ್ವಕಪ್ ಕ್ರಿಕೆಟ್‌ನ ಮೊದಲ ಸೆಮಿಫೈನಲ್ ಪಂದ್ಯವು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಈ ಪಂದ್ಯಕ್ಕೆ ಸಂಬಂಧಿಸಿದಂತೆ ಒಂದು ನಿಯಮ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಲಿದೆ.

1
1-2023

ವಾಸ್ತವವಾಗಿ ಮಳೆಯಿಂದಾಗಿ ಅಥವಾ ಹವಾಮಾನ ವೈಪರಿತ್ಯದಿಂದಾಗಿ ಮೊದಲ ಸೆಮಿಫೈನಲ್ ಪಂದ್ಯ ರದ್ದಾದರೆ, ರೋಹಿತ್ ಶರ್ಮಾ ನಾಯಕತ್ವದ ಆತಿಥೇಯ ನೇರವಾಗಿ ಫೈನಲ್ ತಲುಪಲಿದೆ.

ICC World Cup 2023: If Semi-final Match Canceled Due to Rain, Team India Will Enters To final

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯವು ಬುಧವಾರ, ನವೆಂಬರ್ 15ರಂದು ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಹಿಂದೆ ಎರಡೂ ತಂಡಗಳು ಲೀಗ್ ಹಂತದಲ್ಲಿ ಮುಖಾಮುಖಿಯಾದಾಗ ಭಾರತ ತಂಡ ಗೆಲುವು ಸಾಧಿಸಿತ್ತು.

ಆದಾಗ್ಯೂ, ಲೀಗ್ ಹಂತದಲ್ಲಿ ಭಾರತಕ್ಕೆ ಪೈಪೋಟಿ ನೀಡಿದ ಏಕೈಕ ತಂಡವೆಂದರೆ ನ್ಯೂಜಿಲೆಂಡ್. ಹೀಗಿರುವಾಗ ಸೆಮಿಫೈನಲ್ ಪಂದ್ಯವೂ ರೋಚಕವಾಗುವ ಸಂಪೂರ್ಣ ಸಾಧ್ಯತೆಗಳಿವೆ.

ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಐಸಿಸಿ ಮೀಸಲು ದಿನವನ್ನು ನಿಗದಿಪಡಿಸಿದೆ. ಅಂದರೆ, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದ ದಿನವಾದ ಸೆಪ್ಟೆಂಬರ್ 15ರಂದು ಮಳೆ ಬಂದರೆ, ನವೆಂಬರ್ 16ರ ಗುರುವಾರದಂದು ಪಂದ್ಯದ ಮುಂದುವರೆದ ಭಾಗವನ್ನು ಆಡಿಸಲಿದೆ.

ಅದೇ ರೀತಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದ ಸೆಮಿಫೈನಲ್ ಪಂದ್ಯದ ದಿನವಾದ ನವೆಂಬರ್ 16ರಂದು ಮಳೆ ಬಂದರೆ, ನವೆಂಬರ್ 17 ಮೀಸಲು ದಿನವಾಗಿದೆ. ಇನ್ನು ನವೆಂಬರ್ 19ರಂದು ನಡೆಯಲಿರುವ ಫೈನಲ್‌ಗೆ ಸಹ ನವೆಂಬರ್ 20ರಂದು ಮೀಸಲು ದಿನವನ್ನು ಇರಿಸಲಾಗಿದೆ.

ನವೆಂಬರ್ 15 ಮತ್ತು 16 ಎರಡೂ ದಿನ ಮಳೆ ಸುರಿದು ಭಾರತ ತಂಡದ ಸೆಮಿಫೈನಲ್ ಪಂದ್ಯ ರದ್ದಾದರೆ ಟೀಮ್ ಇಂಡಿಯಾ ಫೈನಲ್ ಪ್ರವೇಶಿಸಲಿದೆ.

ಐಸಿಸಿ ನಿಯಮಗಳ ಪ್ರಕಾರ, ಸೆಮಿಫೈನಲ್ ಪಂದ್ಯವನ್ನು ರದ್ದುಗೊಳಿಸಿದರೆ ಲೀಗ್ ಹಂತದ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವು ಫೈನಲ್‌ಗೆ ತಲುಪುತ್ತದೆ. ಈ ಮೂಲಕ ಭಾರತದ ಪಂದ್ಯ ರದ್ದಾದರೆ ಫೈನಲ್‌ಗೆ ಹೋಗಲಿದೆ, ಏಕೆಂದರೆ ಟೀಮ್ ಇಂಡಿಯಾ ಅಂಕಪಟ್ಟಿಯಲ್ಲಿ ಉಳಿದ ತಂಡಗಳಿಗಿಂತ ಅಗ್ರಸ್ಥಾನ ಕಾಯ್ದುಕೊಂಡಿದೆ.

Story first published: Tuesday, November 14, 2023, 9:04 [IST]
Other articles published on Nov 14, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+