Record break: 9 ವರ್ಷಗಳ ಹಳೆಯ ಕ್ರಿಸ್ ಗೇಲ್ ದಾಖಲೆ ಮುರಿದ ಸ್ಪೋಟಕ ಬ್ಯಾಟರ್
ಕೆರಿಬಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ ವಿಕೆಟ್ ಕೀಪರ್- ಬ್ಯಾಟರ್ ನಿಕೋಲಸ್ ಪೂರನ್ ಅಬ್ಬರಿಸುತ್ತಿದ್ದಾರೆ. ಭರ್ಜರಿ ಫಾರ್ಮ್ ಮುಂದುವರಿಸಿರುವ ಅವರು ಕ್ರಿಸ್ ಗೇಲ್ ದಾಖಲೆಯನ್ನು ಮುರಿದಿದ್ದಾರೆ.
ಪೂರನ್ ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದ ಕ್ರಿಸ್ ಗೇಲ್ ಅವರ 9 ವರ್ಷಗಳ ಹಳೆಯ ದಾಖಲೆಯನ್ನು ಬ್ರೇಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ವಿರುದ್ದದ ಪಂದ್ಯದಲ್ಲಿ ಅವರು 9 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಈ ವರ್ಷ ಪೂರನ್ ಇದುವರೆಗೆ 139 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಇದರೊಂದಿಗೆ 2015 ರಿಂದ 135 ಸಿಕ್ಸರ್ ಸಿಡಿಸಿದ ಗೇಲ್ ದಾಖಲೆಯನ್ನು ಪೂರನ್ ಹಿಂದಿಕ್ಕಿದ ಸಾಧನೆ ಮಾಡಿದ್ದಾರೆ.
ಸಿಕ್ಸರ್ ಕಿಂಗ್
ಪ್ರಸ್ತಕ ಕ್ಯಾಲೆಂಡರ್ ವರ್ಷದಲ್ಲಿ ನಿಕೋಲಸ್ ಪೂರನ್ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ ಆಗಿದ್ದಾರೆ. ಇದೇ ಮೊದಲ ಬಾರಿಗೆ ಅವರು ಈ ಸಾಧನೆ ಮಾಡಿರುವುದು. ಈ ವರ್ಷ ವೆಸ್ಟ್ ಇಂಡೀಸ್ ಸೇರಿದಂತೆ 8 ಟಿ20 ಫ್ರಾಂಚೈಸಿ ತಂಡ ಪರ ಆಡಿದ್ದಾರೆ.
ಪೂರನ್ ಆಡಿರುವ ಒಟ್ಟು 58 ಪಂದ್ಯಗಳಲ್ಲಿ 139 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅವರ ಹೆಸರಿನಲ್ಲಿ 13 ಅರ್ಧ ಶತಕಗಳಿವೆ. ಆದರೆ, ಈ ವರ್ಷ ಅವರು ಇನ್ನೂ ಒಂದು ಶತಕ ಗಳಿಸಲು ಸಾಧ್ಯವಾಗಿಲ್ಲ. ಒಟ್ಟು 1844 ರನ್‌ಗಳನ್ನು ಕಲೆ ಹಾಕಿದ್ದಾರೆ.
ಐಪಿಎಲ್‌ನಲ್ಲಿಯೂ ಅಬ್ಬರ
ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಕೊನೆಯ ಋತುವಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಹಲವು ಮ್ಯಾಚ್ ವಿನ್ನಂಗ್ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಅಲ್ಲದೆ, ಅವರು 2024ರ ಐಪಿಎಲ್‌ನಲ್ಲಿಯೂ ಅಬ್ಬರಿಸಿದ್ದರು. ಈ ಋತುವಿನಲ್ಲಿ 178.21 ರ ಅತ್ಯುತ್ತಮ ಸ್ಟ್ರೈಕ್ ರೇಟ್‌ನಲ್ಲಿ 499 ರನ್ ಗಳಿಸಿದ್ದು, 36 ಸಿಕ್ಸರ್ ಬಾರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications