ಎಲ್‌ಎಸ್‌ಜಿ ಗೆಲುವಿನಲ್ಲಿ ಮಿಂಚಿದ ಭರವಸೆಯ ಬ್ಯಾಟರ್
ಮುತ್ತಿನ ನಗರಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸುವುದು ಕಷ್ಟ ಎಂದು ಎಲ್ಲರು ಭಾವಿಸಿದ್ದರು. ಆದರೆ ಲಕ್ನೋ ಸೂಪರ್ ಜೈಂಟ್ಸ್ ಈ ಕೆಲಸವನ್ನು ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಮಾಡಿ ತೋರಿಸಿದೆ. ದೊಡ್ಡ ಹಿಟ್ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದ ಲಕ್ನೋ ಅಬ್ಬರಿಸಿದೆ. ಈ ಮೂಲಕ ಲಕ್ನೋ ಪ್ರಸಕ್ತ ಐಪಿಎಲ್‌ನಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಈ ಗೆಲುವಿನಲ್ಲಿ ಲಕ್ನೋ ತಂಡದ ವೇಗಿ ಶರ್ದೂಲ್ ಠಾಕೂರ್ ತಮ್ಮ ಬಿಗುವಿನ ದಾಳಿಯ ಮೂಲಕ ಎಲ್ಲರ ಗಮನ ಸೆಳೆದರು. ಬ್ಯಾಟಿಂಗ್‌ನಲ್ಲಿ ಲಕ್ನೋ ತಂಡದ ಭರವಸೆಯ ಬ್ಯಾಟರ್ ನಿಕೋಲಸ್ ಪೂರನ್ ಆಧಾರವಾದರು.
ಪಂದ್ಯದ ಯಾವುದೇ ಹಂತದಲ್ಲೂ ಈ ಪಂದ್ಯ ಎಲ್‌ಎಸ್‌ಜಿ ಸೋಲಬಹುದು ಎಂದು ಅನಿಸದ ಹಾಗೆ ಈ ಆಟಗಾರರು ಪ್ರದರ್ಶನ ನೀಡಿದರು. ಎಸ್‌ಆರ್‌ಎಚ್ ವಿರುದ್ಧ ನಿಕೋಲಸ್ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ಆರಂಭಿಕ ಐಡೆನ್ ಮಾರ್ಕ್ರಾಮ್ ಔಟ್ ಆಗ್ತಾ ಇದ್ದಂತೆ ಗ್ರೌಂಡ್‌ಗೆ ಬಂದ ನಿಕೋಲಸ್ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದರು. ಇವರು ಪವರ್ ಪ್ಲೇ ಸಂಪೂರ್ಣ ಲಾಭ ಪಡೆದು ಬ್ಯಾಟ್ ಮಾಡಿದರು.

ನಿಕೋಲಸ್ ಪೂರನ್ ತಮ್ಮ ನೈಜ್ ಆಟವನ್ನು ಆಡಿದ ಇವರು ತಾವು ಬಾರಿಸಿದ ಹೆಚ್ಚಿನ ರನ್‌ಗಳನ್ನು ಲೆಗ್‌ಸೈಡ್‌ನಲ್ಲಿ ಬಾರಿಸಿದರು. ತಂಡ ಇವರಿಗೆ ಯಾವ ರೋಲ್ ನೀಡಿದಿಯೋ ಆ ಪಾತ್ರವನ್ನು ಅಚ್ಚು ಕಟ್ಟಾಗಿ ನಿಭಾಯಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಮಿಡ್ಲ್ ಆರ್ಡರ್‌ನಲ್ಲಿ ತಂಡದ ಮೊತ್ತವನ್ನು ಹೆಚ್ಚಿಸಿತ್ತಾ, ವಿಕೆಟ್ ಕಾಯ್ದುಕೊಂಡು ಬ್ಯಾಟ್ ಮಾಡಿದ ನಿಕೋಲಸ್ ಆರ್ಭಟಿಸಿದರು.
ನಿಕೋಲಸ್ ಅರ್ಧಶತಕ
ನಿಕೋಲಸ್ ಪೂರನ್ ಅವರ ಆರ್ಭಟವನ್ನು ತಡಿಯಲು ಎಸ್‌ಆರ್‌ಎಚ್ ತಂಡದ ಯಾವೊಬ್ಬ ಬ್ಯಾಟರ್‌ಗೂ ಸಾಧ್ಯವೇ ಆಗಲಿಲ್ಲ. ಇವರು ಎಲ್ಲ ಸ್ಟಾರ್ ಬೌಲರ್‌ಗಳನ್ನು ಸಹ ದಂಡಿಸುತ್ತಾ ಸಾಗಿದರು. ಪ್ರಸಕ್ತ ಐಪಿಎಲ್‌ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ ಹೆಗ್ಗಳಿಕೆಗೆ ಇವರು ಪಾತ್ರರಾದರು. ಎಸ್‌ಆರ್‌ಎಚ್ ವಿರುದ್ಧ ಪೂರನ್ 26 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಸಹಾಯದಿಂದ 70 ರನ್ ಸಿಡಿಸಿ ಔಟ್ ಆದರು. ಈ ಮೂಲಕ ಪೂರನ್ ಪ್ರಸಕ್ತ ಆವೃತ್ತಿಯಲ್ಲಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಪಂದ್ಯದ ಫಲಿತಾಂಶ
ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಎಸ್‌ಆರ್‌ಎಚ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 190 ರನ್ ಸೇರಿಸಿತು. ಸನ್‌ರೈಸರ್ಸ್ ತಂಡದ ಪರ ಟ್ರಾವಿಸ್ ಹೆಡ್ 5 ಬೌಂಡರಿ, 3 ಸಿಕ್ಸರ್ ಸಹಾಯದಿದ 47 ರನ್ ಬಾರಿಸಿದರು. ನಿತೀಶ್ ಕುಮಾರ್ ರೆಡ್ಡಿ 32, ಅಂಕಿತ್ ವರ್ಮಾ 36 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಎಲ್‌ಎಸ್‌ಜಿ 16.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 193 ರನ್ ಸೇರಿಸಿ ಜಯ ಸಾಧಿಸಿತು. ಈ ಮೂಲಕ ಪೂರನ್ ಪ್ರಸಕ್ತ ಆವೃತ್ತಿಯಲ್ಲಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications