ಕ್ರಿಸ್ ಗೇಲ್ ಸಿಕ್ಸರ್ ದಾಖಲೆಯ ಸನಿಹದಲ್ಲಿ ವಿಂಡೀಸ್ ಪ್ಲೇಯರ್
ವೆಸ್ಟ್ ಇಂಡೀಸ್ ವಿಶ್ವ ಕ್ರಿಕೆಟ್‌ಗೆ ಅದೆಷ್ಟೋ ದೈತ್ಯ ಆಟಗಾರರನ್ನು ನೀಡಿದೆ. ಈ ಆಟಗಾರರು ತಮ್ಮ ಹೊಡಿ ಬಡಿ ಆಟದಿಂದಲೇ ಹೆಸರುವಾಸಿ. ಬಿಗ್ ಹಿಟ್ಟಿಂಗ್ ಶಾಟ್‌ಗಳನ್ನು ಬಾರಿಸುವುದರಲ್ಲಿ ನಿಸ್ಸೀಮರು. ಒಂದೊಮ್ಮೆ ಕ್ರಿಸ್‌ಗೆ ಕಚ್ಚಿ ನಿಂತರು ಎಂದ್ರೆ ದೊಡ್ಡ ಇನಿಂಗ್ಸ್ ಫಿಕ್ಸ್. ರನ್ ಚೇಸ್ ಎಷ್ಟೇ ದೊಡ್ಡದು ಇರಲಿ, ಈ ದೈತ್ಯರು ನಿಂತರೇ ಸಲೀಸಾಗಿ ಮುಗಿಸಿ ಬಿಡುತ್ತಾರೆ.
ವಿಂಡೀಸ್ ದೈತ್ಯ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಹೆಸರುಗಳಲ್ಲಿ ಸ್ಟಾರ್ ಆಟಗಾರ ಕ್ರಿಸ್ ಗೇಲ್‌ಗೂ ಸ್ಥಾನ. ತಮ್ಮ ಧಮಾಕೆದಾರ್ ಬ್ಯಾಟಿಂಗ್ ಶೈಲಿಯಿಂದಲೇ ಗೇಲ್ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿದವರು. ಇವರ ಕ್ಲಾಸಿಕ್ ಬ್ಯಾಟಿಂಗ್ ಕಂಡು ಅಭಿಮಾನಿಗಳು, ಅವರನ್ನು ಅಭಿಮಾನದಿಂದ ಯುನಿವರ್ಸಲ್ ಬಾಸ್ ಎಂದೇ ಕರೆಯುತ್ತಾರೆ. ಇವರಿಗೆ ವಿಶ್ವದ ನಾನಾ ದೇಶಗಳಲ್ಲಿ ಅಭಿಮಾನಿಗಳ ಬಳಗವಿದೆ.

ಗೇಲ್ ದಾಖಲೆಗೆ ಅಪಾಯ
ಕ್ರಿಸ್ ಗೇಲ್ ಕ್ರಿಕೆಟ್ ಅಂಗಳದಲ್ಲಿ ಅದೆಷ್ಟೋ ಸಾಧನೆಗಳನ್ನು, ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದರಲ್ಲಿ ಒಂದು ದಾಖಲೆಗೆ ಈಗ ಅಪಾಯ. ಹೌದು ಕ್ರಿಸ್ ಗೇಲ್ ಕ್ರಿಕೆಟ್ ಅಂಗಳದಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿದ್ದಾರೆ. ಅದರಲ್ಲಿ ಸಿಕ್ಸರ್ ಬಾರಿಸುವುದು ಎಂದರೆ ಗೇಲ್‌ಗೆ ಅಚ್ಚು ಮೆಚ್ಚು. ಅವರ ಒಂದು ಸಿಕ್ಸರ್ ದಾಖಲೆಯ ಮೇಲೆ, ಅವರದ್ದೇ ದೇಶದ ಆಟಗಾರ ಕಣ್ಣು ನೆಟ್ಟಿದ್ದಾನೆ.
ವಿಂಡೀಸ್ ಆಟಗಾರನ ಆರ್ಭಟ
ಇತ್ತೀಚಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ವಿಂಡೀಸ್ ಸುಲಭ ಜಯ ದಾಖಲಿಸಿತು. ಈ ಪಂದ್ಯದಲ್ಲಿ ನಿಕೋಲಸ್ ಪೂರನ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 35 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಈ ವೇಳೆ 2 ಬೌಂಡರಿ, 4 ಸಿಕ್ಸರ್ ಸೇರಿವೆ. ಈ ಪಂದ್ಯದಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ನಿಕೋಲಸ್ ಪೂರನ್ ಕ್ರಿಸ್ ಗೇಲ್ ಅವರ ಶ್ರೇಷ್ಠ ದಾಖಲೆಯ ಸಮೀಪಕ್ಕೆ ಬಂದಿದ್ದಾರೆ.

ದಾಖಲೆಯ ಸನಿಹದಲ್ಲಿ ಪೂರನ್
ಚುಟುಕು ಕ್ರಿಕೆಟ್‌ನ ಬೆಸ್ಟ್ ಬ್ಯಾಟರ್ ಎಂದೇ ಕರೆಸಿಕೊಳ್ಳುವ ಕ್ರಿಸ್ ಗೇಲ್ 2015ರಲ್ಲಿ ಟಿ20 ಕ್ರಿಕೆಟ್ ನಲ್ಲಿ ಒಟ್ಟು 135 ಸಿಕ್ಸರ್ ಬಾರಿಸಿದ್ದಾರೆ. ಈ ದಾಖಲೆಯ ಸನಿಹಕ್ಕೆ ನಿಕೋಲಸ್ ಬಂದು ನಿಂತಿದ್ದಾರೆ. ಪ್ರಸಕ್ತ ವರ್ಷ ಪೂರನ್ ಟಿ20 ಕ್ರಿಕೆಟ್‌ನಲ್ಲಿ ಒಟ್ಟು 130 ಸಿಕ್ಸರ್ ಸಿಡಿಸಿದ್ದಾರೆ. ಒಂದು ಕ್ಯಾಲೆಂಡರ್ ವರ್ಷದಲ್ಲಿ T20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಲೆಕ್ಕಾಚಾರದಲ್ಲಿ ಪೂರನ್, ಗೇಲ್ ದಾಖಲೆ ಮುರಿಯಬಹುದು. ಗೇಲ್ ದಾಖಲೆ ಮುರಿಯಲು ಪೂರನ್‌ಗೆ ಜಸ್ಟ್ 6 ಸಿಕ್ಸರ್ ಅವಶ್ಯಕತೆ ಇದೆ. ಕಳೆದ 9 ವರ್ಷಗಳಲ್ಲಿ ಯಾವುದೇ ಬ್ಯಾಟ್ಸ್‌ಮನ್ ಗೇಲ್ ಅವರ ಈ ದಾಖಲೆಯನ್ನು ಮುರಿದಿಲ್ಲ.
ಸಿಕ್ಸರ್‌ಗಳ ರಾಜ
ನಿಕೋಲಸ್ ಪೂರನ್ ಪ್ರಸ್ತುತ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 144 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ ಇವರಿಗೆ ಮೂರನೇ ಸ್ಥಾನ. 98 ಪಂದ್ಯಗಳಲ್ಲಿ ಪೂರನ್ 138.39 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 2,195 ರನ್ ಗಳಿಸಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕೀರ್ತಿ ಭಾರತದ ರೋಹಿತ್ ಶರ್ಮಾ ಅವರಿಗೆ ಸಲ್ಲುತ್ತದೆ. ಅವರು 159 ಪಂದ್ಯಗಳಲ್ಲಿ 205 ಸಿಕ್ಸರ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ಎರಡನೇ ಸ್ಥಾನದಲ್ಲಿದ್ದಾರೆ. ಇವರು 122 ಪಂದ್ಯಗಳಲ್ಲಿ 173 ಸಿಕ್ಸರ್ ಬಾರಿಸಿದ ದಾಖಲೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications