Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Turning Point: ಲಕ್ನೋ ಸೋಲಿನಲ್ಲಿ ಸ್ಟಾರ್‌ ಬ್ಯಾಟರ್‌ ವೈಫಲ್ಯವೇ ಪ್ರಮುಖ ಕಾರಣ

ಮುಂಬೈ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಣ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 54 ರನ್‌ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಮುಂಬೈ ಆಡಿದ 10 ಪಂದ್ಯಗಳಲ್ಲಿ 6 ಜಯ, 4 ಸೋಲು ಕಂಡಿದ್ದು 12 ಅಂಕ ಕಲೆ ಹಾಕಿದೆ. ಐಪಿಎಲ್‌ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ನಿಕೋಲಸ್‌ ಪೂರನ್‌ 216 ರನ್‌ಗಳ ಟಾರ್ಗೆಟ್‌ ಬೆನ್ನಟ್ಟಿದಾಗ ನಿರಾಸೆ ಅನುಭವಿಸಿದರು.

ಮುಂಬೈ ಇಂಡಿಯನ್ಸ್‌ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿರು. ಈ ವೇಳೆ ತಂಡ ಸ್ಟಾರ್ ಆಟಗಾರರ ರಯಾನ್‌ ರಿಕಲ್ಟನ್‌ (58) ಹಾಗೂ ವಿಲ್‌ ಜಾಕ್ಸ್‌ (29) ಹಾಗೂ ಸೂರ್ಯಕುಮಾರ್‌ ಯಾದವ್‌ (54) ಉತ್ತಮ ಆಟದ ಪ್ರದರ್ಶನ ನೀಡಿದ ಫಲವಾಗಿ ತಂಡ ಸವಾಲಿನ ಮೊತ್ತವನ್ನು ಕಲೆ ಹಾಕುವಲ್ಲಿ ಸಫಲವಾಯಿತು. ಕಾರ್ಬಿನ್ ಬಾಷ್ ಮುಂಬೈ ಪರ ಫಿನಿಷಿಂಗ್ ಕಾರ್ಯವನ್ನು ಮಾಡಿದರು.

Nicholas Pooran s Failure Leads to Lucknow s Defeat Against Mumbai Indians

ಲಕ್ನೋ ತಂಡದ ಪರ ಮಯಾಂಕ್‌ ಯಾದವ್, ಪ್ರಿನ್ಸ್‌ ಯಾದವ್ ಮಹತ್ವದ ವಿಕೆಟ್‌ಗಳನ್ನು ಪಡೆದು ಮುಂಬೈಗೆ ಪೆಟ್ಟು ನೀಡಿದರು. ರವಿ ಬಿಷ್ಣೋಯಿ ಹಾಗೂ ಆವೇಶ್‌ ಖಾನ್‌ ಸಹ ರನ್‌ಗಳಿಗೆ ಕಡಿವಾಣ ಹಾಕುವ ಪ್ರಯತ್ನವನ್ನು ಮಾಡಿದರು. ಆದರೆ ಮುಂಬೈ ಇಂಡಿಯನ್ಸ್‌ ಅಗ್ರೇಸಿವ್ ಅಪ್ರೋಚ್‌ ತಂಡ ಸವಾಲಿನ ಮೊತ್ತ ಕಲೆ ಹಾಕಲು ನೆರವಾಯಿತು.

ಟರ್ನಿಂಗ್‌ ಪಾಯಿಂಟ್‌ ಇದೆ..

ಗುರಿಯನ್ನು ಬೆನ್ನಟ್ಟಿದ ಲಕ್ನೋ ಸೂಪರ್‌ ಜೈಂಟ್ಸ್ ಸ್ಥಿರ ಆರಂಭವನ್ನು ಪಡೆಯಿತು. ಈ ಸವಾಲಿನ ಮೊತ್ತವನ್ನು ತಂಡ ಹಿಂದೆ ಬಿದ್ದಿರುವುದರದಲ್ಲಿ ನಿಕೋಲಸ್ ಪೂರನ್‌ ಅವರ ದೊಡ್ಡ ಇನಿಂಗ್ಸ್‌ ಕಟ್ಟದೇ ಇರುವುದು ಪ್ರಮುಖವಾಯಿತು. ಪೂರನ್‌ ಲಕ್ನೋ ತಂಡದ ಸ್ಟಾರ್ ಆಟಗಾರರಲ್ಲಿ ಒಬ್ಬರು. ಇವರನ್ನು ಪೆವೆಲಿಯನ್‌ಗೆ ಕಳುಹಿಸುವಲ್ಲಿ ಸೂರ್ಯಕುಮಾರ್ ಯಾದವ್ ಉತ್ತಮ ಕ್ಯಾಚ್‌ ಪಡೆದು ಮಿಂಚಿದರು. ಇನಿಂಗ್ಸ್‌ನ 6ನೇ ಓವರ್‌ನಲ್ಲಿ ವಿಲ್ ಜಾಕ್ಸ್ ಮುಂಬೈ ಇಂಡಿಯನ್ಸ್‌ ಮಂದಹಾಸ ಮೂಡಿಸಲು ಸಫಲರಾದರು.

ನಿಕೋಲಸ್ ಪೂರನ್‌ ಅವರು ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದು ತಂಡ ಸೋಲಿನತ್ತ ಮುಖ ಮಾಡುವಂತೆ ಆಯಿತು. ಇನ್ನು ಮಿಚೆಲ್‌ ಮಾರ್ಷ್‌ (34), ಆಯುಷ್‌ ಬದೋನಿ (35), ಡೇವಿಡ್ ಮಿಲ್ಲರ್ (24) ತಂಡವನ್ನು ಗೆಲುವಿನ ದಡ ದಾಟಿಸುವಲ್ಲಿ ವಿಫಲರಾದರು. ಮುಂಬೈ ಪರ ಟ್ರೆಂಟ್‌ ಬೌಲ್ಟ್‌ 3 ವಿಕೆಟ್‌ ಪಡೆದರೆ, ಯಾರ್ಕರ್‌ ಸ್ಪೇಷಲಿಸ್ಟ್‌ ಖ್ಯಾತಿಯ ಜಸ್ಪ್ರಿತ್ ಬುಮ್ರಾ 22 ರನ್‌ ನೀಡಿ ನಾಲ್ಕು ವಿಕೆಟ್‌ ಕಬಳಿಸಿದರು.

Nicholas Pooran s Failure Leads to Lucknow s Defeat Against Mumbai Indians

ಲಕ್ನೋ ತಂಡದ ದುಬಾರಿ ಆಟಗಾರ ರಿಷಭ್‌ ಪಂತ್ ಹಾಗೂ ಮಧ್ಯಮ ಕ್ರಮಾಂಕದ ಆಟಗಾರರು ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ. ಇದು ಲಕ್ನೋ ಸೂಪರ್‌ ಜೈಂಟ್ಸ್ ಟೂರ್ನಿಯಲ್ಲಿ ಕಂಡ ಐದನೇ ಸೋಲಾಗಿದೆ. ಈ ಪಂದ್ಯದಲ್ಲಿ ಎಲ್‌ಎಸ್‌ಜಿ 161 ರನ್‌ ಕಲೆ ಹಾಕಲು ಮಾತ್ರ ಸಫಲವಾಯಿತು. ಮುಂಬೈ ಟೂರ್ನಿಯಲ್ಲಿ ಸತತ ಐದನೇ ಜಯದ ಓಟವನ್ನು ಮುಂದುವರೆಸಿತು.

Story first published: Sunday, April 27, 2025, 21:12 [IST]
Other articles published on Apr 27, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+