ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7 ರನ್‌ಗೆ ತಂಡ ಆಲೌಟ್: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಕ್ರಿಕೆಟ್ ಅಂಗಳದಲ್ಲಿ ದಿನವೂ ಹೊಸ ಹೊಸ ದಾಖಲೆಗಳು ನಿರ್ಮಾಣ ಆಗುತ್ತಲೇ ಇರುತ್ತವೆ. ಈ ದಾಖಲೆಗಳು ಆಟಗಾರರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಇನ್ನು ಹಲವು ದಾಖಲೆಗಳು ಆಟಗಾರರ ಕಳಪೆ ಆಟದ ಮಾನದಂಡವಾಗಿರುತ್ತದೆ. ಇನ್ನು ಕ್ರಿಕೆಟ್‌ನಲ್ಲಿ ಟಿ20 ಸ್ವರೂಪ ಎಂಟ್ರಿ ಪಡೆದಾಗಿನಿಂದಲೂ ದಿನಕ್ಕೊಂದು ದಾಖಲೆಗಳು ನಿರ್ಮಾಣ ಆಗುತ್ತಲೇ ಇರುತ್ತವೆ. ಟಿ20 ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳ ಮೆರೆದಾಟ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಬೌಲರ್‌ಗಳು ಸಹ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ತಂಡವೊಂದು ಕೇವಲ 07 ರನ್‌ಗಳಿಗೆ ಆಲೌಟ್ ಆಗಿದೆ.
ಟಿ20 ಕ್ರಿಕೆಟ್ ಅಂದರೆ ಹೊಡಿ ಬಡಿ ಆಟ. ಈ ಆಟದಲ್ಲಿ ಸ್ಟ್ರೈಕ್ ರೇಟ್ ಇಂಪಾರ್ಟೆಂಟ್. ಈ ಆಟದಲ್ಲಿ ಬ್ಯಾಟರ್ ಒಬ್ಬ 7 ರನ್‌ಗೆ ಔಟ್ ಆದಲ್ಲಿ ಟೀಕೆಗೆ ಗುರಿಯಾಗುತ್ತಾನೆ. ಈ ವೇಳೆ ತಂಡ ಒಂದು 7 ರನ್‌ಗಳಿಗೆ ಆಲ್‌ಔಟ್ ಆಗಿದೆ ಎಂದರೆ ನಂಬಲು ಅಸಾಧ್ಯ. ಆದರೆ, ಈ ಪಂದ್ಯಕ್ಕೂ ಕ್ರಿಕೆಟ್ ಅಂಗಳ ಸಾಕ್ಷಿಯಾಗಿದೆ. ಈ ಪಂದ್ಯ ನಡೆದಿದ್ದು ಎಲ್ಲಿ, ಯಾವ ತಂಡಗಳ ನಡುವೆ ಫೈಟ್ ನಡೆದಿತ್ತು ಎಂಬ ವರದಿ ಇಲ್ಲಿದೆ.

ಪುರುಷರ T20 ವಿಶ್ವಕಪ್ ಆಫ್ರಿಕಾ ಖಂಡದ ಕ್ವಾಲಿಫೈಯರ್ 2024ರ ಸಿ ಗುಂಪಿನ ಪಂದ್ಯದ ವೇಳೆ ಈ ಸ್ಕೋರ್ ಬೋರ್ಡ್ ಕಂಡು ಬಂದಿದೆ. ಕ್ವಾಲಿಫೈಯರ್‌ನ ಐದನೇ ಪಂದ್ಯ ನೈಜೀರಿಯಾ ಮತ್ತು ಐವರಿ ಕೋಸ್ಟ್ ನಡುವೆ ನಡೆಯಿತು. ಪಂದ್ಯದಲ್ಲಿ ಗುರಿ ಬೆನ್ನತ್ತಲು ಬಂದ ಐವರಿ ಕೋಸ್ಟ್ ತಂಡ 7.3 ಓವರ್ ಗಳಲ್ಲಿ ಕೇವಲ 07 ರನ್ ಗಳಿಗೆ ಆಲೌಟ್ ಆಗಿದೆ. ಇದು ಟಿ20 ಅಂತಾರಾಷ್ಟ್ರೀಯ ಇತಿಹಾಸದಲ್ಲೇ ಅತ್ಯಂತ ಕಡಿಮೆ ಮೊತ್ತ.
ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಕಡಿಮೆ ಮೊತ್ತ ಗಳಿಸಿದ ದಾಖಲೆ ಮಂಗೋಲಿಯಾ ಮತ್ತು ಐಲ್ ಆಫ್ ಮ್ಯಾನ್ ತಂಡಗಳದ್ದಾಗಿತ್ತು. ಉಭಯ ತಂಡಗಳು 10-10 ರನ್‌ಗಳಿಗೆ ಆಲೌಟ್ ಆಗಿವೆ. ಆದರೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದ್ದು ಇದೇ ಮೊದಲು.
ನೈಜಿರಿಯಾಗೆ ಭಾರಿ ಗೆಲುವು
ಪಂದ್ಯದಲ್ಲಿ ಟಾಸ್ ಗೆದ್ದ ನೈಜೀರಿಯಾ ಬ್ಯಾಟಿಂಗ್ ಮಾಡಿ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಂಟನೇ ಗರಿಷ್ಠ ಮೊತ್ತ ಸೇರಿಸಿತು. ಈ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 271 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಐವರಿ ಕೋಸ್ಟ್ ತಂಡ ಕೇವಲ 07 ರನ್ ಗಳಿಗೆ ಆಲೌಟ್ ಆಯಿತು. ನೈಜೀರಿಯಾ 264 ರನ್ ಗಳ ಜಯ ಸಾಧಿಸಿತು. ನೈಜಿರಿಯಾ ತಂಡದ ಪರ ಸೆಲಿಮ್ ಸಲಾವ್ 53 ಎಸೆತಗಳಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ ತಂಡಕ್ಕೆ 112 ರನ್ ಗಳಿಸಿದರು. ಐಸಾಕ್ ಒಕ್ಪೆ 23 ಎಸೆತಗಳಲ್ಲಿ 65 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications