For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ಶ್ರೀಲಂಕಾ ಕ್ರಿಕೆಟಿಗನಿಗೆ ನಿಷೇಧ ಶಿಕ್ಷೆ; ಕಾರಣವೇನು?

ಆಗಸ್ಟ್ 16 ಶುಕ್ರವಾರ, ಶ್ರೀಲಂಕಾ ಕ್ರಿಕೆಟ್ ಲೋಕದಲ್ಲಿ ಹಲವು ದಿನಗಳಿಂದ ಅಹಿತಕರ ಘಟನೆ ನಡೆಯುತ್ತಿವೆ. ಭಾರತ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯಿಂದ ಶ್ರೀಲಂಕಾದ ಸ್ಟಾರ್ ಬೌಲರ್‌ಗಳು ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರು.

ಇದೀಗ ಶ್ರೀಲಂಕಾದ ವಿಕೆಟ್‌ ಕೀಪರ್ ಮತ್ತು ಬ್ಯಾಟರ್ ನಿರೋಶನ್ ಡಿಕ್ವೆಲ್ಲಾ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿಷೇಧಕ್ಕೊಳಗಾಗಿದ್ದಾರೆ. ಡೋಪಿಂಗ್ ವಿರೋಧಿ ಉಲ್ಲಂಘನೆಗಾಗಿ ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.

Niroshan Dickwella banned from all forms of cricket

ಡೋಪ್ ಪರೀಕ್ಷೆಯಲ್ಲಿ ನಿರೋಶನ್ ವಿಫಲರಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಲಂಕಾ ಪ್ರೀಮಿಯರ್ ಲೀಗ್ (ಎಲ್‌ಪಿಎಲ್) ವೇಳೆ ಡೋಪಿಂಗ್ ವಿರೋಧಿ ಉಲ್ಲಂಘನೆಯ ಆರೋಪದ ಕಾರಣ ನಿಷೇಧ ಶಿಕ್ಷೆಯನ್ನು ವಿಧಿಸಲಾಗಿದೆ. ಈ ನಿಷೇಧದಿಂದ ಡಿಕ್ವೆಲ್ಲಾ ಯಾವಾಗ ಹೊರಬರುತ್ತಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಡಿಕ್ವೆಲ್ಲಾ ಎಲ್‌ಪಿಎಲ್ ಟೂರ್ನಿಯಲ್ಲಿ ಗಾಲೆ ಮಾರ್ವೆಲ್ಸ್‌ ತಂಡದ ನಾಯಕರಾಗಿದ್ದರು. ಈ ಆವೃತ್ತಿಯಲ್ಲಿ ಆಡಿದ 10 ಪಂದ್ಯಗಳಲ್ಲಿ 153.33 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 184 ರನ್ ಗಳಿಸಿದ್ದರು. ಆದರೂ ಗಾಲೆ ಮಾರ್ವೆಲ್ಸ್ ತಂಡ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿತ್ತು. ಆದರೆ ಫೈನಲ್‌ನಲ್ಲಿ ಜಾಫ್ನಾ ಕಿಂಗ್ಸ್ ವಿರುದ್ಧ ಸೋಲು ಕಂಡಿತ್ತು.

ಇದಕ್ಕೂ ಮೊದಲು ನಿರೋಶನ್ ಡಿಕ್ವೆಲ್ಲಾ 2021ರಲ್ಲಿ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ಬಯೋ ಬಬಲ್ ನಿಯಮವನ್ನು ಉಲ್ಲಂಘಿಸಿದಕ್ಕಾಗಿ ದನುಷ್ಕಾ ಗುಣತಿಲಕ ಮತ್ತು ಕುಸಾಲ್ ಮೆಂಡಿಸ್ ಅವರೊಂದಿಗೆ ನಿರೋಶನ್ ಡಿಕ್ವೆಲ್ಲಾ ಕೂಡ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರು.

ಡಿಕ್ವೆಲ್ಲಾ ವೃತ್ತಿಜೀವನ

ನಿರೋಶನ್ ಡಿಕ್ವೆಲ್ಲಾ ಅವರ ವೃತ್ತಿಜೀವನದಲ್ಲಿ ಶ್ರೀಲಂಕಾ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರು 54 ಟೆಸ್ಟ್ ಮತ್ತು 55 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 2757 ಮತ್ತು ಏಕದಿನದಲ್ಲಿ 1604 ರನ್ ಗಳಿಸಿದ್ದಾರೆ.

ಟಿ20ಯಲ್ಲಿ ಕೇವಲ 28 ಪಂದ್ಯಗಳನ್ನಷ್ಟೇ ಆಡಿದ್ದಾರೆ. ದೀರ್ಘಕಾಲದಿಂದ ಡಿಕ್ವೆಲ್ಲಾ ಟಿ20 ಮತ್ತು ಏಕದಿನ ಮಾದರಿ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಆದರೆ ಟೆಸ್ಟ್‌ ಕ್ರಿಕೆಟ್‌ಗೆ ಅವರು ಕಳೆದ ವರ್ಷ ಮಾರ್ಚ್‌ನಲ್ಲಿ ತಮ್ಮ ಕೊನೆಯ ಪಂದ್ಯವನ್ನಾಡಿದ್ದರು.

Story first published: Friday, August 16, 2024, 23:02 [IST]
Other articles published on Aug 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+