Nitish Kumar Reddy: ಕೋಟಿ ಬೆಲೆಯ ರೇಂಜ್ ರೋವರ್ ಖರೀದಿಸಿದ ಎಸ್‌ಆರ್‌ಎಚ್ ಸ್ಟಾರ್ ನಿತೀಶ್ ರೆಡ್ಡಿ
Nitish Kumar Reddy Car: ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಬರೀ ಮೈದಾನದಲ್ಲಿ ಅಷ್ಟೇ ಅಲ್ಲದೆ, ಆಚೆಯೂ ಸುದ್ದಿಯಲ್ಲಿದ್ದಾರೆ. ಅವರು ಇದೀಗ ರೇಂಜ್ ರೋವರ್ ಆಟೋಬಯೋಗ್ರಫಿ ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಇದು ಎಲ್ಲಡೆ ಸಖತ್ ಟ್ರೆಂಡಿಂಗ್‌ನಲ್ಲಿದೆ. ಇದಕ್ಕೆ ಕಾರಣವೂ ಇದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2026ರಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿರುವ ಈ 22 ವರ್ಷದ ಕ್ರಿಕೆಟಿಗನ ಯಶಸ್ಸಿನ ಪಯಣದಲ್ಲಿ ಇದು ಮತ್ತೊಂದು ಮೈಲಿಗಲ್ಲಾಗಿದೆ. ಈ ದುಬಾರಿ ಎಸ್‌ಯುವಿ ಖರೀದಿಸುವ ಮೂಲಕ ನಿತೀಶ್ ರೆಡ್ಡಿ ಅವರು ಕಂಗನಾ ರಣಾವತ್, ಸಂಜಯ್ ದತ್, ಅನು ಮಲಿಕ್, ರಣದೀಪ್ ಹೂಡಾ, ಶಿಲ್ಪಾ ಶೆಟ್ಟಿ ಮತ್ತು ಜಾನ್ವಿ ಕಪೂರ್ ಅವರಂತಹ ಸೆಲೆಬ್ರಿಟಿಗಳ ಸಾಲಿಗೆ ಸೇರ್ಪಡೆಯಾಗಿದ್ದಾರೆ.

ಈ ಐಷಾರಾಮಿ ಕಾರು ಯಾವೆಲ್ಲಾ ಬಣ್ಣಗಳಲ್ಲಿ ಲಭ್ಯ?
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ, ಈ ಯುವ ಸ್ಟಾರ್ ಕ್ರಿಕೆಟಿಗ ಈ ಐಷಾರಾಮಿ ಎಸ್‌ಯುವಿಯಲ್ಲಿ ಕುಟುಂಬದೊಂದಿಗೆ ಪ್ರಯಾಣ ಮಾಡುತ್ತಿರುವುದು ಕಂಡುಬಂದಿದೆ. ಇನ್ನೂ ಈ ಮಾದರಿಯ ಕಾರು ಗೋಲ್ಡ್ ಬಣ್ಣದ ಹೊರತಾಗಿ ಸ್ಯಾಂಟೋರಿನಿ ಬ್ಲ್ಯಾಕ್, ಫ್ಯೂಜಿ ವೈಟ್ ಮತ್ತು ಬೆಲ್ಗ್ರಾವಿಯಾ ಗ್ರೀನ್ ಬಣ್ಣಗಳ ಆಯ್ಕೆಯಲ್ಲೂ ಲಭ್ಯವಿದೆ.
ಎಸ್‌ಆರ್‌ಎಚ್ ವಿರುದ್ಧ ಮಿಂಚಿದ್ದ ನಿತೀಶ್
ನಿತೀಶ್ ಕುಮಾರ್ ರೆಡ್ಡಿ ಅವರು ಹೊಸ ಕಾರಿನ ಡಿಲಿವರಿ ಪಡೆಯುತ್ತಿರುವುದು ಈ ವೈರಲ್ ವಿಡಿಯೋಗಳಲ್ಲಿ ಕಾಣಬಹುದು. ಏಪ್ರಿಲ್ 18ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ 10 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಇದರ ಬೆನ್ನಲ್ಲೇ ನಿತೀಶ್ ಈ ಖರೀದಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆ ಪಂದ್ಯದಲ್ಲಿ ನಿತೀಶ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನವು ತಂಡದ ಮೊತ್ತವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸಿತ್ತು. 4 ಓವರ್ ಎಸೆದು 31 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಬಳಿಸಿ ಮಿಂಚಿದ್ದರು.
ನಿತೀಶ್ ಖರೀದಿಸಿದ ರೇಂಜ್ ರೋವರ್‌ನ ವಿಶೇಷತೆಗಳು
ರೇಂಜ್ ರೋವರ್ ಆಟೋಬಯೋಗ್ರಫಿಯ ಟಾಪ್ ಎಂಡ್ ಮಾದರಿಯು (Highest spec variant) 4.4-ಲೀಟರ್ V8 ಇಂಜಿನ್ ಹೊಂದಿದ್ದು, ಇದು 522 hp ಪವರ್ ಮತ್ತು 750 Nm ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮೈಲ್ಡ್-ಹೈಬ್ರಿಡ್ ಸಿಸ್ಟಮ್ ಬೆಂಬಲ ಹೊಂದಿರುವ ಈ ಎಸ್‌ಯುವಿ, ಕೇವಲ 4.6 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ತಲುಪಬಲ್ಲದು. ಇದರ ಗರಿಷ್ಠ ವೇಗ ಗಂಟೆಗೆ 250 ಕಿಲೋ ಮೀಟರ್ ಆಗಿದೆ. ಈ ಐಷಾರಾಮಿ ಕಾರು ಪ್ಲಗ್-ಇನ್ ಹೈಬ್ರಿಡ್ ಮತ್ತು ಡೀಸೆಲ್ ಇಂಜಿನ್ ಆಯ್ಕೆಗಳಲ್ಲೂ ಲಭ್ಯವಿದೆ. ಆದರೆ, ನಿತೀಶ್ ಕುಮಾರ್ ರೆಡ್ಡಿ ಅವರು ಇವುಗಳಲ್ಲಿ ಯಾವ ಇಂಜಿನ್ ಮಾದರಿಯನ್ನು ಆರಿಸಿಕೊಂಡಿದ್ದಾರೆ ಎಂದು ಇನ್ನೂ ತಿಳಿದುಬಂದಿಲ್ಲ.
ರೇಂಜ್ ರೋವರ್ ಒಳಾಭಾಗದ ವೈಶಿಷ್ಟ್ಯಗಳು
ಈ ಎಸ್‌ಯುವಿಯಲ್ಲಿ ಪವರ್ ಅಡ್ಜಸ್ಟ್‌ಮೆಂಟ್ ಮತ್ತು ಮಸಾಜ್ ಫಂಕ್ಷನ್ ಹೊಂದಿರುವ ಆಸನಗಳಿವೆ. ಇದು ಸುದೀರ್ಘ ತರಬೇತಿಯ ನಂತರ ಆಟಗಾರರು ಆರಾಮವಾಗಿ ವಿಶ್ರಾಂತಿ ಪಡೆಯಲು ನೆರವಾಗುತ್ತದೆ. ಇಲ್ಲಿರುವ ಅತ್ಯಾಧುನಿಕ ಕರ್ವ್ಡ್ ಟಚ್‌ಸ್ಕ್ರೀನ್ 'ಪಿವಿ ಪ್ರೊ' ಇನ್ಫೋಟೈನ್‌ಮೆಂಟ್ ವ್ಯವಸ್ಥೆಯನ್ನು ಹೊಂದಿದ್ದು, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋವನ್ನು ಬೆಂಬಲಿಸುತ್ತದೆ.
ಇನ್ನು ಸಂಗೀತ ಪ್ರಿಯರಿಗಾಗಿ ಇದರಲ್ಲಿ ಮೆರಿಡಿಯನ್ ಕಂಪನಿಯ 29 ಸ್ಪೀಕರ್‌ಗಳ ಸರೌಂಡ್ ಸೌಂಡ್ ಸಿಸ್ಟಮ್ ಇದ್ದು, ಪ್ರಯಾಣದ ಸಮಯದಲ್ಲಿ ಉತ್ತಮ ಅನುಭವ ನೀಡುತ್ತದೆ. ಜೊತೆಗೆ 'ಫೋರ್-ಜೋನ್ ಕ್ಲೈಮೇಟ್ ಕಂಟ್ರೋಲ್' ಮತ್ತು ಹಿಂಭಾಗದಲ್ಲಿ 'ಎಕ್ಸಿಕ್ಯೂಟಿವ್ ಕ್ಲಾಸ್ ಸೀಟಿಂಗ್' ಆಯ್ಕೆಯಿದೆ.
ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆ
ಸುರಕ್ಷತೆಯ ದೃಷ್ಟಿಯಿಂದ ಈ ಕಾರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಕೆ ಮಾಡಲಾಗಿದೆ. ಇದರಲ್ಲಿ 360-ಡಿಗ್ರಿ ಕ್ಯಾಮೆರಾ, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಏರ್‌ಬ್ಯಾಗ್‌ಗಳು ಮತ್ತು ಸುಧಾರಿತ ಚಾಲಕ ನೆರವು ವ್ಯವಸ್ಥೆಯಾದ Advanced Driver Assistance Systems ತಂತ್ರಜ್ಞಾನವನ್ನು ಹೊಂದಿದೆ. ಇವೆಲ್ಲವೂ ಪ್ರಯಾಣಿಕರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸುತ್ತವೆ ಎಂದು ಹೇಳಲಾಗುತ್ತದೆ. ಮಾಹಿತಿ ಪ್ರಕಾರ, ಈ ಕಾರಿನ ಎಕ್ಸ್‌ಶೋರೂಂ ಬೆಲೆ 2.93 - 3.61 ಕೋಟಿ ರೂಪಾಯಿದೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications