ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಡಿದ ಇಂಗ್ಲೆಂಡ್ ತಂಡಕ್ಕೆ ಭರವಸೆಯ ಬ್ಯಾಟರ್ ಜೋ ರೂಟ್ ಆಧಾರವಾಗಿದ್ದಾರೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಯಾಶಸ್ವಿ ಬೌಲರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ ನಿತೀಶ್ ಕುಮಾರ್ ರೆಡ್ಡಿ. ಸದ್ಯ ಇವರ ಚಿತ್ತ ಲಾರ್ಡ್ಸ್ ಹಾನರ್ ಬೋರ್ಡ್‌ನತ್ತ ನೆಟ್ಟಿದೆ.
ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಪರ ಮೊದಲ ವಿಕೆಟ್ ಪಡೆದ ಹೆಗ್ಗಳಿಕೆಗೆ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರಿಗೆ ಸಲ್ಲುತ್ತದೆ. ಇವರು ಲಾರ್ಡ್ಸ್ ಅಂಗಳದಲ್ಲಿ ಭಾರತದ ಪರ ಆರಂಭದಲ್ಲಿ ಎರಡು ವಿಕೆಟ್ ಪಡೆದು ಬೀಗಿದರು. ಇವರು ಇಂಗ್ಲೆಂಡ್ ತಂಡದ ಆರಂಭಿಕ ಬೆನ್ ಡಕೆಟ್, ಜಾಕ್ ಕ್ರಾಲಿ ಅವರನ್ನು ನಿತೀಶ್ ಒಂದೇ ಓವರ್ ಎರಡು ವಿಕೆಟ್ ಕಬಳಿಸಿದ್ದಾರೆ. ಇದೇ ಓವರ್‌ನಲ್ಲಿ ಇವರಿಗೆ ಮೂರು ವಿಕೆಟ್ ಪಡೆಯುವ ಅವಕಾಶ ಇತ್ತು. ಆದರೆ ಗಿಲ್ ಕ್ಯಾಚ್ ಕೈ ಚೆಲ್ಲಿದರು. ಹೀಗಾಗಿ ಮೊದಲ ದಿನದಾಟದಲ್ಲಿ ಭಾರತ ಪರ ನಿತೀಶ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್.

ನಿತೀಶ್ ಕುಮಾರ್ ಅವರ ಚಿತ್ತ ಸದ್ಯ ಲಾರ್ಡ್ಸ್ ಅಂಗಳದಲ್ಲಿ ಹಾನರ್ ಬೋರ್ಡ್ ಮೇಲೆ ನೆಟ್ಟಿದೆ. ಈ ಅಂಗಳದಲ್ಲಿ ಬ್ಯಾಟಿಂಗ್‌ನಲ್ಲಿ ಶತಕ ಸಿಡಿಸಿದ ಹಾಗೂ ಬೌಲಿಂಗ್‌ನಲ್ಲಿ ಐದು ವಿಕೆಟ್ ಪಡೆದ ಬೌಲರ್‌ಗಳ ಹೆಸರುಗಳನ್ಜು ಈ ಬೋರ್ಡ್ ಮೇಲೆ ನಮೂದಿಸಗಾಲುತ್ತದೆ. ಇಂತಹ ಅಪರೂಪದ ಸಾಧನೆಯ ಮೇಲೆ ನಿತೀಶ್ ಕುಮಾರ್ ಕಣ್ಣೂ ನೆಟ್ಟಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಇವರು ಇನ್ನು ಮೂರು ವಿಕೆಟ್‌ಗಳನ್ನು ಪಡೆದಲ್ಲಿ ಬೋರ್ಡ್ ಮೇಲೆ ಹೆಸರು ಬೀಳಲಿದೆ.
ನಿತೀಶ್ ಕುಮಾರ್ ರೆಡ್ಡಿ ದಿನದಾಟದ ಮುಕ್ತಾಯದ ಬಳಿಕ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ನಾನು ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುವ ಆಸೆ ನನ್ನದಾಗಿತ್ತು. ಹೀಗಾಗಿ ನನ್ನ ಬೌಲಿಂಗ್ ಮೇಲೆ ಕೆಲಸ ಮಾಡುವ ಆಸೆ ಹೊಂದಿದೆ. ನಾನು ನನ್ನ ಬೌಲಿಂಗ್ ಸುಧಾರಣೆಯ ಬಗ್ಗೆ ಪ್ಯಾಟ್ ಕಮಿನ್ಸ್ ಅವರಲ್ಲಿ ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದೇನೆ. ನಾನು ಆಸೀಸ್ ನೆಲದಲ್ಲಿ ಹೇಗೆ ಬೌಲಿಂಗ್ ಮಾಡಬೇಕಿತ್ತು. ಹೇಗೆ ಬೌಲಿಂಗ್ ಮಾಡಿದರೆ ಉತ್ತಮ ಎಂದು ಅವರು ಸೂಚಿಸಿದ್ರು. ಇದು ನನ್ನ ಬೌಲಿಂಗ್ ಸುಧಾರಣೆಗೆ ಅನುಕೂಲವಾಯಿತು ಎಂದು ನಿತೀಶ್ ಹೇಳಿದ್ದಾರೆ.

ಟೀಮ್ ಇಂಡಿಯಾದ ಕೋಚ್ ಮೊನೆ ಮಾರ್ಕೆಲ್ ಅವರು ಸಹ ನನ್ನ ಬೌಲಿಂಗ್ ಸುಧಾರಣೆಗೆ ಶ್ರಮಿಸಿದ್ದಾರೆ. ಇವರು ಸಹ ಕಳೆದ ಕೆಲವು ವಾರಗಳಿಂದ ಸತತವಾಗಿ ನನ್ನ ಜೊತೆ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ನನ್ನ ಬೌಲಿಂಗ್‌ನಲ್ಲಿ ಸುಧಾರಣೆಯನ್ನು ಕಂಡಿದ್ದೇನೆ . ಕೋಚ್ ಜತೆ ಮತನಾಡುವುದು ನನಗೆ ಖುಷಿ ನೀಡಿದೆ.