For Quick Alerts
ALLOW NOTIFICATIONS  
For Daily Alerts
 

Nitish Kumar Reddy: ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಶತಕ ಬಾರಿಸಿದ ನಿತೀಶ್‌ಗೆ ಹರಿದು ಬರುತ್ತಿರುವ ಬಹುಮಾನ

ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಆಧಾರವಾದ ನಿತೀಶ್ ಕುಮಾರ್ ರೆಡ್ಡಿ ಅವರ ಆರ್ಭಟ ಸಾಗರೋತ್ತರದಲ್ಲಿ ಘರ್ಜಿಸುತ್ತಿದೆ. ನಿತೀಶ್‌ ಕುಮಾರ್‌ ಕ್ಲಾಸ್‌ ಆಟಕ್ಕೆ ಅಭಿಮಾನಿಗಳು ಹಾಗೂ ಮಾಜಿ ಆಟಗಾರರು ಫುಲ್ ಮಾಕ್ಸ್‌ ನೀಡಿದ್ದಾರೆ. ಅನುಭವಿ ಬ್ಯಾಟರ್‌ಗಳು ಪರದಾಡಿದ ಪಿಚ್‌ನಲ್ಲಿ ನಿತೀಶ್‌ ಕುಮಾರ್‌ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ಇವರ ಬ್ಯಾಟಿಂಗ್ ಅಬ್ಬರ ಕಂಡು ಟೀಮ್ ಮ್ಯಾನೇಜ್ಮೆಂಟ್ ಫುಲ್‌ ಖುಷ್ ಆಗಿದೆ. ಇವರ ಆಟಕ್ಕೆ ಈಗ ಬಹುಮಾನ ಮೊತ್ತ ಹರಿದು ಬರುತ್ತಿದೆ.

ಐತಿಹಾಸಿಕ ಮೆಲ್ಬೋರ್ನ್‌ ಅಂಗಳದಲ್ಲಿ 21ನೇ ವರ್ಷದಲ್ಲಿ ಶತಕ ಸಿಡಿಸಿದ ನಿತೀಶ್‌ ಕುಮಾರ್‌ ಹಲವು ದಾಖಲೆ ಬರೆದರು. ಇವರು 176 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅಜೇಯ 105 ರನ್‌ ಸಿಡಿಸಿದರು. ಇವರ ಅಮೋಘ ಆಟದ ಫಲವಾಗಿ ಟೀಮ್ ಇಂಡಿಯಾ ಫಾಲೋಆನ್‌ ನಿಂದ ಬಚಾವ್ ಆಯಿತು. ಇವರ ಆಟಕ್ಕೆ ಮನಸೋತು ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆ ನಿತೀಶ್‌ಗೆ ಲಕ್ಷಾಂತರ ರೂಪಾಯಿ ಬಹುಮಾನ ನೀಡಲಿದೆ.

Nitish Kumar Reddy Shines with Maiden Test Century Andhra Cricket Association Announces 25 Lakh Reward

ಲಕ್ಷ ಲಕ್ಷ ಬಹುಮಾನ

ಮೆಲ್ಬೋರ್ನ್ ಟೆಸ್ಟ್‌ನ ಮೂರನೇ ದಿನದ ಅಂತ್ಯದವರೆಗೆ ನಿತೀಶ್ ಅಜೇಯ 105 ರನ್ ಗಳಿಸಿದರು. ಎನ್‌ಡಿಟಿವಿಯ ವರದಿಯ ಪ್ರಕಾರ, ನಿತೀಶ್ ರೆಡ್ಡಿ ಈ ಇನ್ನಿಂಗ್ಸ್‌ಗೆ 25 ಲಕ್ಷ ರೂಪಾಯಿ ಬಹುಮಾನ ಹರಿದು ಬರಲಿದೆ. ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಕೇಸಿನೇನಿ ಶಿವನಾಥ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ನಿತೀಶ್‌ ಕುಮಾರ್ ರೆಡ್ಡಿ ಅವರ ಅಮೋಘ ಬ್ಯಾಟಿಂಗ್‌ ಕಂಡು ಸಂತಸವಾಯಿತು. ಇವರು ಸೀಮಿತ ಓವರ್‌ಗಳ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. ಈಗ ಇದೇ ಪ್ರದರ್ಶನವನ್ನು ಅವರು ಟೆಸ್ಟ್‌ ಕ್ರಿಕೆಟ್‌ನಲ್ಲೂ ಮುಂದುವರೆಸಿದ್ದಾರೆ. ಸಿಕ್ಕ ಅವಕಾಶವನ್ನು ಬಳಸಿಕೊಂಡಿರುವ ನಿತೀಶ್ ಕುಮಾರ್‌ ಅಬ್ಬರಿಸಿದ್ದಾರೆ. ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆಯು ನಿತೀಶ್ ರೆಡ್ಡಿ ಅವರಿಗೆ 25 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ.

ಭರ್ಜರಿ ಜೊತೆಯಾಟ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ 7 ವಿಕೆಟ್‌ಗೆ 221 ರನ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಕ್ರೀಸ್‌ನಲ್ಲಿ ಕಚ್ಚಿ ನಿಂತು ಬ್ಯಾಟ್ ಮಾಡಿದ ವಾಷಿಂಗ್ಟನ್‌ ಸುಂದರ್ ಹಾಗೂ ನಿತೀಶ್ ಕುಮಾರ್‌ ರೆಡ್ಡಿ ಸೊಗಸಾದ ಆಟವನ್ನು ಆಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ 285 ಎಸೆತಗಳಲ್ಲಿ 127 ರನ್‌ಗಳ ಅಮೋಘ ಜೊತೆಯಾಟವನ್ನು ನೀಡಿತು. ವಾಷಿಂಗ್ಟನ್‌ ಸುಂದರ್‌ 162 ಎಸೆತಗಳಲ್ಲಿ ಕೇವಲ ಒಂದು ಬೌಂಡರಿ ಸಹಾಯದಿಂದ 50 ರನ್‌ ಸಿಡಿಸಿದರು. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಬೇಕಾದ ಹಾಗೆ ಬ್ಯಾಟಿಂಗ್ ಮಾಡಿ ತಂಡಕ್ಕೆ ನೆರವಾದರು.

ಆಸ್ಟ್ರೇಲಿಯಾ ಇನ್ನು 116 ರನ್‌ಗಳ ಇನಿಂಗ್ಸ್‌ ಮುನ್ನಡೆ ಸಾಧಿಸುತ್ತಿದೆ. ಟೀಮ್ ಇಂಡಿಯಾ 9 ವಿಕೆಟ್‌ ನಷ್ಟಕ್ಕೆ 358 ರನ್‌ ಸೇರಿಸಿದೆ. ನಿತೀಶ್‌ ಕುಮಾರ್‌ ರೆಡ್ಡಿ ಹಾಗೂ ಮೊಹಮ್ಮದ್‌ ಸಿರಾಜ್‌ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Story first published: Saturday, December 28, 2024, 22:10 [IST]
Other articles published on Dec 28, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+