Nitish Kumar Reddy: ಪರ್ತ್‌ನಲ್ಲಿ ಭರವಸೆ ಮೂಡಿಸಿದ ನಿತೀಶ್‌ಕುಮಾರ್ ರೆಡ್ಡಿ; ಪಾಂಡ್ಯ ಸ್ಥಾನ ತುಂಬ್ತಾರಾ?
ಟೀಮ್ ಇಂಡಿಯಾದ ವೇಗದ ಬೌಲಿಂಗ್ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಪರ್ತ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನಿತೀಶ್ ಕುಮಾರ್ ರೆಡ್ಡಿ ಭಾರತದ ಪರ ಪಾದಾರ್ಪಣೆ ಮಾಡಿದ್ದಾರೆ. ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲೇ ನಿತೀಶ್ ಕುಮಾರ್ ರೆಡ್ಡಿ ಅಭೂತಪೂರ್ವ ಪ್ರದರ್ಶನ ನೀಡಿ ಎಲ್ಲರೂ ಚಿತ್ತ ಕದ್ದಿದ್ದಾರೆ. ಅವರು ಬ್ಯಾಟ್ ಬೀಸಿದ ರಭಸಕ್ಕೆ ಆಸೀಸ್ ಬೌಲರ್‌ಗಳು ಕಂಗಾಲಾಗಿ ಹೋಗಿದ್ದಾರೆ.
ಪರ್ತ್‌ನಂತಹ ಕಠಿಣ ಬೌನ್ಸಿ ಪಿಚ್‌ನಲ್ಲಿ ಅನುಭವಿ ಬ್ಯಾಟರ್‌ಗಳು ರನ್ ಗಳಿಸುವುದು ತುಂಬಾ ಕಷ್ಟಕರವಾಗಿದೆ. ಆದರೆ, ಇದೇ ಪರ್ತ್ ಪಿಚ್‌ನಲ್ಲಿ ಆಸೀಸ್ ವೇಗಿಗಳ ವಿರುದ್ಧ ನಿತೀಶ್ ಕುಮಾರ್ ರೆಡ್ಡಿ ಲೀಲಾಜಾಲವಾಗಿ ಬ್ಯಾಟಿಂಗ್ ಮಾಡಿದರು. ಅವರು ಎದುರಿಸಿದ 59 ಎಸೆತಗಳಲ್ಲಿ 6 ಬೌಂಡರಿಗಳ ಮತ್ತು 1 ಸಿಕ್ಸರ್ ನೆರವನಿಂದ 41 ರನ್‌ಗಳ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು.

ಭಾರತಕ್ಕೆ ಆಸರೆ
ಪರ್ತ್ ಟೆಸ್ಟ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಟಾಪ್ ಆರ್ಡರ್ ಬ್ಯಾಟರ್‌ಗಳು ಬಿಗ್ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ನಿತೀಶ್ ಕುಮಾರ್ ರೆಡ್ಡಿ ಅವರು ರಿಷಭ್ ಪಂತ್ ಜೊತೆಗೂಡಿ ಏಳನೇ ವಿಕೆಟ್‌ಗೆ 48 ರನ್‌ಗಳ ಮಹತ್ವದ ಜೊತೆಯಾಟ ನೀಡಿದರು. ಈ ಜೊತೆಯಾಟ ನಡೆಯದೇ ಇದ್ದಿದ್ದರೆ, ಪರ್ತ್ ಪಿಚ್‌ನಲ್ಲಿ ಆಸೀಸ್ ಬೌಲರ್‌ಗಳು ಟೀಮ್ ಇಂಡಿಯಾವನ್ನು 100 ರನ್‌ಗಳಿಗೆ ಆಲೌಟ್ ಮಾಡುತ್ತಿದ್ದರು.
ಆಸೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಭಾರತಕ್ಕೆ ಆಸರೆಯಾದರು. ನಿತೀಶ್ 41 ರನ್ ಗಳಿಸಿದರೆ, ರಿಷಬ್ ಪಂತ್ 37 ರನ್ ಬಾರಿಸಿದರು. ಈ ಇಬ್ಬರನ್ನು ಹೊರತುಪಡಿಸಿ, ಭಾರತದ ಇನ್ನಿಂಗ್ಸ್‌ನಲ್ಲಿ ಯಾರೂ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಭಾರತ ತಂಡ 49.4 ಓವರ್‌ಗಳಲ್ಲಿ 150 ರನ್‌ಗಳಿಗೆ ಆಲೌಟಾಯಿತು.
ಪಾಂಡ್ಯ ಸ್ಥಾನ ತುಂಬ್ತಾರಾ?
ನಿತೀಶ್ ಕುಮಾರ್ ರೆಡ್ಡಿ ಈಗಾಗಲೇ ಭಾರತದ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಪಾದರ್ಪಾಣೆ ಮಾಡಿದ್ದು, ಅಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ತವರಿನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯಲ್ಲಿ ನಿತೀಶ್ ಮಿಂಚಿದ್ದರು. ಇದಾದ ನಂತರ ಅವರು ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಡುವ ಅವಕಾಶವನ್ನು ಪಡೆದಿದ್ದಾರೆ. ಹೀಗಾಗಿ ಅವರನ್ನು ಸ್ಟಾರ್ ಅನುಭವಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಪಾಂಡ್ಯ ಅವರಂತಯೇ ವೇಗದ ಬೌಲಿಂಗ್ ಮಾಡುವ ನಿತೀಶ್ ಭಾರತ ಟಾಪ್ ಆರ್ಡರ್ ಬ್ಯಾಟರ್‌ಗಳ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗೆ ಬಂದ ನಿತೀಶ್ ಕುಮಾರ್ ರೆಡ್ಡಿ ಜಬಾವ್ದಾರಿಯುತ ಇನ್ನಿಂಗ್ಸ್ ಕಟ್ಟಿದ್ದಾರೆ. ಈ ಇನ್ನಿಂಗ್ಸ್ ಅನ್ನು ಸೂಕ್ಷ್ಮವಾಗಿ ಗಮನಿಸಿರುವ
ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಶೈಲಿಯನ್ನು ನೆನಪಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications