AUS vs IND 4Th Test: ಭಾರತ 369ಕ್ಕೆ ಆಲೌಟ್: ಯುವ ಆಟಗಾರನಿಗೆ ತಕ್ಕ ಉತ್ತರ ನೀಡಿದ ಬುಮ್ರಾ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ನಿತೀಶ್ ಕುಮಾರ್ ರೆಡ್ಡಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಭಾನುವಾರದ ಆಟಕ್ಕೆ 11 ರನ್ ಸಿಡಿಸಿದ ನಿತೀಶ್ ಕುಮಾರ್ ರೆಡ್ಡಿ ನಾಥನ್ ಲಿಯಾನ್‌ಗೆ ವಿಕೆಟ್ ಒಪ್ಪಿಸಿದರು. ನಿತೀಶ್ ಕುಮಾರ್ 114 ಸಿಡಿಸಿ ಔಟ್ ಆದರು. ಟೀಮ್ ಇಂಡಿಯಾ 369 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 105 ರನ್‌ಗಳ ಮುನ್ನಡೆ ಸಾಧಿಸಿತು.
ಭಾರತದ ಯುವ ಭರವಸೆಯ ಬ್ಯಾಟರ್ ನಿತೀಶ್ ಕುಮಾರ್ ರೆಡ್ಡಿ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಇದೇ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬ್ಯಾಟ್ ಮಾಡುವ ಅವಕಾಶ ಪಡೆದ ನಿತೀಶ್ ಕುಮಾರ್ ರೆಡ್ಡಿ ಮೊದಲ ಟೆಸ್ಟ್ ಪಂದ್ಯದಿಂದಲೂ ಭರವಸೆ ಮೂಡಿಸಿದ್ದರು. ಆದರೆ ಬಿಗ್ ಇನಿಂಗ್ಸ್ ಮಾತ್ರ ಮೂಡಿ ಬಂದಿರಲಿಲ್ಲ. ಆದರೆ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ನಿತೀಶ್ ಕುಮಾರ್ ರೆಡ್ಡಿ ಕ್ಲಾಸಿಕ್ ಬ್ಯಾಟಿಂಗ್ ನಡೆಸಿ ಅಬ್ಬರಿಸಿದರು. ಈ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

ಭಾರತದ ಮೊದಲ ಇನಿಂಗ್ಸ್ ವೇಳೆ ಮೊಹಮ್ಮದ್ ಸಿರಾಜ್ ಬ್ಯಾಟ್ ಮಾಡುವಾಗ, ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಸ್ಲಿಪ್‌ನಲ್ಲಿದ್ದ ಸ್ಟೀವನ್ ಸ್ಮಿತ್‌ಗೆ ಕ್ಯಾಚ್ ನೀಡಿದರು. ಆದರೆ ಈ ಕ್ಯಾಚ್‌ನಿಂದ ಫೀಲ್ಡ್ ಅಂಪೈರ್ ತೃಪ್ತರಾಗಿರಲಿಲ್ಲ. ಹೀಗಾಗಿ ಈ ಮನವಿಯನ್ನು ಮೂರನೇ ಅಂಪೈರ್‌ಗೆ ಪರೀಕ್ಷಿಸುವಂತೆ ಕೇಳಿಕೊಳ್ಳಲಾಯಿತು. ಫೀಲ್ಡ್ ಅಂಪೈರ್ ಪರಿಶೀಲಿಸಿದ ಬಳಿಕ ನಾಟೌಟ್ ಎಂದು ಘೋಷಿಸಿದರು.
ಸ್ಯಾಮ್ ಜಿದ್ದು ಗೆದ್ದ ಬುಮ್ರಾ
ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರಿತ್ ಬುಮ್ರಾ ಅವರನ್ನು ನಾಲ್ಕನೇ ಟೆಸ್ಟ್ ಮೊದಲ ಇನಿಂಗ್ಸ್‌ನಲ್ಲಿ ಅಬ್ಬರಿಸಿದ್ದ ಆಸ್ಟ್ರೇಲಿಯಾದ 19 ವರ್ಷದ ಯುವ ಬ್ಯಾಟರ್ ಸ್ಯಾಮ್ ಕಾನ್‌ಸ್ಟಾಸ್ ಅವರಿಗೆ ಖೆಡ್ಡಾ ತೋಡಿದರು. ಮೊದಲ ಇನಿಂಗ್ಸ್‌ನಲ್ಲಿ ಬುಮ್ರಾ ವಿರುದ್ಧ ಆಕ್ರಮಣಕಾರಿ ಆಟದ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದ್ದ ಸ್ಯಾಮ್, ಎರಡನೇ ಇನಿಂಗ್ಸ್‌ನಲ್ಲಿ ಮಂಕಾದರು. ಇವರು 18 ಎಸೆತಗಳನ್ನು ಎದುರಿಸಿ 8 ರನ್ ಬಾರಿಸಿದರು.
ಬುಮ್ರಾ ಅವರು ಎಸೆದ ಗುಡ್ ಲೆಂಥ್ ಎಸೆತವನ್ನು ತಪ್ಪಾಗಿ ಅರ್ಥಮಾಡಿಕೊಂಡ ಸ್ಯಾಮ್ ಕ್ಲೀನ್ ಬೋಲ್ಡ್ ಆದರು. ಈ ಮೂಲಕ ಸ್ಯಾಮ್ ಅವರ ಜಿದ್ದನ್ನು ಎರಡನೇ ಇನಿಂಗ್ಸ್‌ನಲ್ಲಿ ಗೆದ್ದು ಬೀಗಿದರು.

ಸಾಮಾನ್ಯವಾಗಿ ಬುಮ್ರಾ ಯಾವುದೇ ವಿಕೆಟ್‌ಗಳನ್ನು ಪಡೆದರೆ ಅಷ್ಟೋಂದು ಸಂಭ್ರಮಾಚರಣೆ ಮಾಡುವುದಿಲ್ಲ. ಆದರೆ ಸ್ಯಾಮ್ ಕಾನ್‌ಸ್ಟಾಸ್ ಅವರ ವಿಕೆಟ್ ಪಡೆಯುತ್ತಿದ್ದಂತೆ ಎರಡೂ ಕೈಗಳನ್ನು ಮೇಲೆ ಮಾಡಿ ಅಭಿಮಾನಿಗಳಿಗೆ ಇನ್ನು ಹೆಚ್ಚಿಗೆ ಚಿಯರ್ ಮಾಡಿ ಎಂದು ಪ್ರೇರೆಪಿಸಿದರು. ಭಾರತೀಯ ಅಭಿಮಾನಿಗಳ ಸಂತಸಕ್ಕೆ ಪಾರವೇ ಇರಲಿಲ್ಲ. ಆಸ್ಟ್ರೇಲಿಯಾದ ಯುವ ಬ್ಯಾಟರ್‌ನನ್ನು ಔಟ್ ಮಾಡುವಲ್ಲಿ ವಿಫಲರಾದರು. ಈ ಮೂಲಕ ಟೀಮ್ ಇಂಡಿಯಾ ಆರಂಭದಲ್ಲಿ ಪುಟಿದೇಳಲು ಜಸ್ಪ್ರಿತ್ ಬುಮ್ರಾ ನೆರವಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications