RR vs CSK IPL 2025: ನಿತೀಶ್ ರಾಣಾ 81, ಸಿಎಸ್‌ಕೆಗೆ 183 ರನ್ ಗುರಿ ನೀಡಿದ ರಾಜಸ್ಥಾನ
ಗುವಾಹಟಿ: ಆರಂಭದಲ್ಲಿ ಭರ್ಜರಿ ಆರಂಭ ಪಡೆದಿದ್ದ ರಾಜಸ್ಥಾನ ರಾಯಲ್ಸ್ ಮಿಡ್ಲ್ ಓವರ್‌ಗಳಲ್ಲಿ ರನ್ ಕಲೆ ಹಾಕುವಲ್ಲಿ ವಿಫಲವಾದ ಪರಿಣಾಮ 18ನೇ ಆವೃತ್ತಿಯ 10 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ರಾಜಸ್ಥಾನ ತಂಡದ ಭರವಸೆಯ ಆಟಗಾರ ನಿತೀಶ್ ರಾಣಾ ಬಾರಿಸಿದ ಅರ್ಧಶತಕದ ನೆರವಿನಿಂದ ಆತಿಥೇಯ ತಂಡ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ಸ್ಥಿರ ಪ್ರದರ್ಶನ ನೀಡಿತು. ಪವರ್ ಪ್ಲೇನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಭರವಸೆಯ ಬ್ಯಾಟರ್ ಯಶಸ್ವಿ ಜೈಸ್ವಾಲ್ ರನ್ ಕಲೆ ಹಾಕುವಲ್ಲಿ ವಿಫಲರಾಗಿ 4 ರನ್‌ಗಳಿಗೆ ಆಟ ಮುಗಿಸಿದರು.

4 ರನ್‌ಗಳಿಗೆ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಸಂಜು ಸ್ಯಾಮ್ಸನ್ ಹಾಗೂ ನಿತೀಶ್ ರಾಣಾ ಆಧಾರವಾದರು. ಈ ಜೊಡಿ ಎರಡನೇ ವಿಕೆಟ್‌ಗೆ 82 ರನ್ ಸೇರಿಸಿ ತಂಡಕ್ಕೆ ಆಸರೆಯಾಯಿತು. ಈ ಜೋಡಿ ಪವರ್ ಪ್ಲೇನಲ್ಲಿ ಮತ್ತೆ ವಿಕೆಟ್ ಬೀಳದಂತೆ ಕಾಯ್ದುಕೊಂಡು ಬ್ಯಾಟ್ ಮಾಡಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಚೆನ್ನೈ ಬೌಲರ್‌ಗಳು ವಿಫಲರಾದರು. ಸಂಜು 20 ರನ್ ಬಾರಿಸಿ ಮುನ್ನಗುತ್ತಿದ್ದಾಗ ನೂರ್ ಅಹ್ಮದ್ ತೋಡಿದ ಖೆಡ್ಡಾಗೆ ಬಲಿಯಾದರು.
ನಿತೀಶ್ ರಾಣಾ ಅರ್ಧಶತಕ
ಮೂರನೇ ವಿಕೆಟ್‌ಗೆ ನಿತೀಶ್ ರಾಣಾ ಅವರನ್ನು ಸೇರಿಕೊಂಡ ನಾಯಕ ರಿಯಾನ್ ಪರಾಗ್ ತಂಡಕ್ಕೆ ಆಸರೆಯಾದರು. ಈ ಜೋಡಿ 24 ಎಸೆತಗಳಲ್ಲಿ 38 ರನ್ ಸಿಡಿಸಿತು. ಈ ವೇಳೆ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದ ನಿತೀಶ್ ರಾಣಾ ಅಶ್ವಿನ್ ಅವರ ವೈಡ್ ಬೌಲನ್ನು ಬೌಂಡರಿ ಗೆರೆ ಬಾರಿಸಲು ಮುನ್ನುಗಿದಾಗ ಎಂ ಎಸ್ ಧೋನಿ ಮಾಡಿದ ಕ್ಲಾಸಿಕ್ ಸ್ಟಂಪಿಂಗ್ ಬಲಿಯಾದರು. ಇದಕ್ಕೂ ಮೊದಲು ನಿತೀಶ್ ರಾಣಾ 36 ಎಸೆತಗಳಲ್ಲಿ 10 ಬೌಂಡರಿ, 5 ಸಿಕ್ಸರ್ ಸಹಾಯದಿಂದ 81 ರನ್ ಸಿಡಿಸಿ ಔಟ್ ಆದರು.

ಮಧ್ಯಮ ಕ್ರಮಾಂಕದಲ್ಲಿ ಧ್ರುವ್ ಜುರೇಲ್ 3, ಆಲ್‌ರೌಂಡರ್ ವನಿಂದು ಹಸರಂಗ್ 4 ರನ್ ಬಾರಿಸಿ ಔಟ್ ಆದರು. ನಾಯಕ ರಿಯಾನ್ ಪರಾಗ್ 28 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 37 ರನ್ ಬಾರಿಸಿ ಪತಿರಾಣಾಗೆ ವಿಕೆಟ್ ಒಪ್ಪಿಸಿದರು.
ಮೊದಲ 10 ಓವರ್‌ಗಳಲ್ಲಿ 99 ರನ್ ಬಾರಿಸಿ 2 ವಿಕೆಟ್ ಕಳೆದುಕೊಂಡ್ಡು ಉತ್ತಮ ಸ್ಥಿತಿಯಲ್ಲಿತ್ತು. ಇನ್ನು ಆರ್‌ಆರ್ 12 ರಿಂದ 16 ಓವರ್‌ಗಳ ವರೆಗೆ ರನ್ ಕಲೆ ಹಾಕುವಲ್ಲಿ ವಿಫಲವಾಯಿತು. ಈ ವೇಳೆ ರಾಜಸ್ಥಾನ 24 ರನ್ ಸಿಡಿಸಿ 2 ವಿಕೆಟ್ ಕಳೆದುಕೊಂಡಿತು. ಅಲ್ಲದೆ ಡೆತ್ ಓವರ್‌ಗಳಲ್ಲೂ ರನ್ ಕಲೆ ಹಾಕುವಲ್ಲಿ ವಿಫಲವಾಯಿತು.
ಶಿಮ್ರೋನ್ ಹೆಟ್ಮೆಯರ್ 19 ರನ್‌ಗಳಿಗೆ ಆಟ ಮುಗಿಸಿದರು. ಅಂತಿಮವಾಗಿ ರಾಜಸ್ಥಾನ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 182 ರನ್ ಸೇರಿಸಿತು. ಚೆನ್ನೈ ಪರ ಖಲೀಲ್ ಅಹ್ಮದ್, ನೂರ್ ಅಹ್ಮದ್, ಮತೀಶ್ ಪತಿರಾಣಾ ತಲಾ 2 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications