ಏಪ್ರಿಲ್ ಫೂಲ್ ಸುದ್ದಿಯಲ್ಲ, ಕೊಹ್ಲಿ ನಕಲಿ ಖಾತೆಗೆ ಸ್ಟಾರ್ಕ್ ಟ್ವೀಟ್
ಬೆಂಗಳೂರು, ಏಪ್ರಿಲ್ 02: ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಅದಷ್ಟು ಬೇಗ ಗುಣಮುಖರಾಗಿ ತಂಡ ಸೇರುತ್ತಾರೆ ಎಂಬ ಆಶಾಭಾವನೆ ಎಲ್ಲರಲ್ಲೂ ಇದೆ. ಈ ನಡುವೆ ಐಪಿಎಲ್ 10 ಹಾಗೂ ಆರ್ ಸಿಬಿ ತೊರೆದಿರುವ ವೇಗಿ ಮಿಚೆಲ್ ಸ್ಟಾರ್ಕ್ ಅವರು ಕೊಹ್ಲಿ ಎಂದುಕೊಂಡು ಬೇರೊಂದು ಟ್ವಿಟ್ಟರ್ ಐಡಿಗೆ ಟ್ವೀಟ್ ಮಾಡಿದ್ದು ಸದ್ಯದ ಸುದ್ದಿ.
ಐಪಿಎಲ್ 2017 : ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು?
ಇಂಡಿಯನ್ ಪ್ರೀಮಿಯರ್ ಲೀಗ್ 10ನೇ ಆವೃತ್ತಿ ಆರಂಭಕ್ಕೂ ಮುನ್ನವೇ ಸ್ಟಾರ್ ಕ್ರಿಕೆಟರ್ ಗಳು ಗಾಯಾಳುಗಳ ಪಟ್ಟಿ ಸೇರಿರುವುದು ಫ್ಯಾನ್ಸ್ ಗಳಿಗೆ ದುಃಖ ತಂದಿದೆ.
'ನಾನು ಹೊಸ ಐಪಿಎಲ್ ತಂಡವನ್ನು ಹುಡುಕಿಕೊಳ್ಳಬೇಕೆ?' ಎಂದು ಮಿಚೆಲ್ ಸ್ಟಾರ್ಕ್ ಅವರು ಹಾಸ್ಯಮಯ ಸಂದೇಶವನ್ನು ಅಸಲಿ ಕೊಹ್ಲಿ ಬದಲಿಗೆ ನಕಲಿ ಕೊಹ್ಲಿಗೆ ಕಳಿಸಿದ್ದಾರೆ. ಇದು ಏಪ್ರಿಲ್ ಫೂಲ್ ಸುದ್ದಿಯಲ್ಲ. ಆರ್ ಸಿಬಿ ತೊರೆದಿರುವ ಸ್ಟಾರ್ಕ್ ಅವರು ಕೊಹ್ಲಿ ಹೆಸರಿನ ಪರೋಡಿ ಅಕೌಂಟಿಗೆ ಕಳಿಸಿದ ಸಂದೇಶ ವೈರಲ್ ಆಗಿದೆ.
ಎಡಗೈ ವೇಗಿ ಸ್ಟಾರ್ಕ್ ಅವರು ಬೆಂಗಳೂರು ಟೆಸ್ಟ್ ವೇಳೆ ಪಾದದ ಮೂಳೆಮುರಿತ ಅನುಭವಿಸಿದ್ದರು. ನಂತರ ತಾಯ್ನಾಡಿಗೆ ಮರಳಿ ಶಸ್ತ್ರಚಿಕಿತ್ಸೆ ಪಡೆದುಕೊಂಡಿದ್ದಾರೆ. ಅವರು ಕೂಡ ಐಪಿಎಲ್ 10ರಲ್ಲಿ ಆಡುತ್ತಿಲ್ಲ. ಕೊಹ್ಲಿ ಅವರು ಕೆಲಸ ಪಂದ್ಯಗಳಿಂದ ದೂರ ಉಳಿದಿದ್ದಾರೆ.

ಕೊಹ್ಲಿ ಕೆಲ ಪಂದ್ಯಗಳಿಗೆ ಇಲ್ಲ
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಬಲ ಭುಜಕ್ಕೆ ಗಾಯ ಮಾಡಿಕೊಂಡಿರುವ ವಿರಾಟ್ ಕೊಹ್ಲಿ ಅವರು ಇನ್ನೂ ಚೇತರಿಸಿಕೊಂಡಿಲ್ಲ. ಈ ಬಗ್ಗೆ ತಿಳಿದ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಅವರು ಗಾಯಾಳುಗಳ ಟೀಂ ಕಟ್ಟೋಣ ಎಂದು ಹಾಸ್ಯ ಮಾಡಿದ್ದಾರೆ. ಆದರೆ, ಕೊಹ್ಲಿಗೆ ಕಳಿಸಬೇಕಾದ ಸಂದೇಶ ಕೊಹ್ಲಿ ಹೆಸರಿನ ಪರೋಡಿ ಅಕೌಂಟಿಗೆ ಕಳಿಸಿದ್ದಾರೆ. ಗಾಯಾಳು ಸ್ತಾರ್ಕ್, ಈ ಬಾರಿ ಐಪಿಎಲ್ ನಿಂದ ಹೊರಗುಳಿದಿದ್ದಾರೆ.
ಕೊಹ್ಲಿ ಐಡಿ ಹೋಲುವ ಮತ್ತೊಂದು ಐಡಿ
ಮಿಚೆಲ್ ಸ್ಟಾರ್ಕ್ ಅವರು ಕೊಹ್ಲಿ ಐಡಿ(@imVkohIi) ಎಂದುಕೊಂಡು ಪರೋಡಿ(ಫ್ಯಾನ್ಸ್ ಗಳು ಮಾಡಿಕೊಂಡಿರುವ ಐಡಿ (@imVkohIIi) ಗೆ ಈ ಸಂದೇಶ ಕಳಿಸಿದ್ದಾರೆ. ಸ್ಟಾರ್ಕ್ ಕಳಿಸಿದ ಸಂದೇಶ ಹಾಗೂ ಚಾಟ್ ಹಿಸ್ಟರಿಯನ್ನು ಪರೋಡಿ ಖಾತೆದಾರ ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಟ್ವೀಟ್
ವಿರಾಟ್ ಕೊಹ್ಲಿ ಅವರು ಆರ್ ಸಿಬಿಗೆ ಬರುತ್ತಿರುವ ಶುಭಹಾರೈಕೆ ಸಂದೇಶಗಳು, ತಮಗೆ ಹರಿಸಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿ ವಿಡಿಯೋ ಮಾಡಿ ಟ್ವೀಟ್ ಮಾಡಿದ್ದಾರೆ.
ಅಲಾನ್ ಡೊನಾಲ್ಡ್ ಟ್ವೀಟ್
ವಿರಾಟ್ ಕೊಹ್ಲಿ, ಯಜುವೇಂದ್ರ ಚಾಹಲ್, ಎಬಿ ಡಿ ವಿಲಿಯರ್ಸ್, ಶೇನ್ ವಾಟ್ಸನ್, ಕ್ರಿಸ್ ಗೇಲ್ ಗೆ ಶುಭ ಹಾರೈಸಿರುವ ದಕ್ಷಿಣ ಅಫ್ರಿಕಾದ ಮಾಜಿ ವೇಗಿ ಅಲಾನ್ ಡೊನಾಲ್ಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications