Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೋನಾಲ್ಡ್ ಆಯ್ಕೆಯ ಶ್ರೇಷ್ಠ XIನಲ್ಲಿ ಏಷ್ಯನ್ನರಿಗೆ ಸ್ಥಾನವಿಲ್ಲ!

No Asians in Allan Donalds all time best XI

ಬೆಂಗಳೂರು, ಸೆಪ್ಟೆಂಬರ್ 05: 'ವೈಟ್ ಲೈಟನಿಂಗ್' ಎಂದು ಕರೆಸಿಕೊಳ್ಳುತ್ತಿದ್ದ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಅಲಾನ್ ಡೊನಾಲ್ಡ್ ಅವರು ತಮ್ಮ ಆಯ್ಕೆಯ ಶ್ರೇಷ್ಠ XI ತಂಡವನ್ನು ಪ್ರಕಟಿಸಿದ್ದಾರೆ. ಡೊನಾಲ್ಡ್ ಅವರ ತಂಡದಲ್ಲಿ ಇಬ್ಬರು ದಕ್ಷಿಣ ಆಫ್ರಿಕನ್ನರಿದ್ದಾರೆ. ಆದರೆ, ಒಬ್ಬೇ ಒಬ್ಬ ಏಷ್ಯನ್ ಆಟಗಾರ ಇಲ್ಲದಿರುವುದು ಅಚ್ಚರಿ ಮೂಡಿಸಿದೆ.

ಸದ್ಯ ಕೆಂಟ್ ಕೌಂಟಿ ಕ್ರಿಕೆಟ್ ಕ್ಲಬ್ ನ ಕೋಚ್ ಆಗಿರುವ ಡೊನಾಲ್ಡ್ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಹಾಗೂ ಜಸ್ಟೀನ್ ಲ್ಯಾಂಗರ್ ಅವರನ್ನು ಆರಂಭಿಕ ಆಟಗಾರರಾಗಿ ಆಯ್ಕೆ ಮಾಡಿದ್ದಾರೆ. ಜಾಕ್ ಕಾಲಿಸ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಕರೆದಿದ್ದು, ಮೂರನೇ ಕ್ರಮಾಂಕಕ್ಕೆ ಸೂಕ್ತ ಆಟಗಾರ ಎಂದಿದ್ದಾರೆ.

ಬೌಲಿಂಗ್ ಪಡೆಯಲ್ಲಿ ಶೇನ್ ವಾರ್ನ್, ಮಾಲ್ಕಂ ಮಾರ್ಷಲ್, ಗ್ಲೆನ್ ಮೆಗ್ರಾ ಇದ್ದಾರೆ. ಆದರೆ, ಏಷ್ಯಾದ ದೇಶಗಳಾದ ಭಾರತ, ಶ್ರೀಲಂಕಾ, ಪಾಕಿಸ್ತಾನದ ಯಾವೊಬ್ಬ ಆಟಗಾರರನ್ನು ಆಯ್ಕೆ ಮಾಡಿಲ್ಲ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಇಮ್ರಾನ್ ಖಾನ್, ವಾಸೀಂ ಅಕ್ರಮ್ ಅವರನ್ನು ಪರಗಣಿಸದಿರುವುದು ಅಭಿಮಾನಗಳ ಆಕ್ರೋಶಕ್ಕೆ ಕಾರಣವಾಗಿದೆ.

ಅಲಾನ್ ಡೊನಾಲ್ಡ್ ಆಯ್ಕೆಯ ಶ್ರೇಷ್ಠ XI
ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ), ಜಸ್ಟೀನ್ ಲ್ಯಾಂಗರ್ (ಆಸ್ಟ್ರೇಲಿಯಾ), ಜಾಕ್ ಕಾಲಿಸ್(ದಕ್ಷಿಣ ಆಫ್ರಿಕಾ), ಬ್ರಿಯಾನ್ ಲಾರಾ( ವೆಸ್ಟ್ ಇಂಡೀಸ್), ಸರ್ ವಿವ್ ರಿಚರ್ಡ್ಸ್ (ವೆಸ್ಟ್ ಇಂಡೀಸ್ -ನಾಯಕ), ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ), ಆಡಂ ಗಿಲ್ ಕ್ರಿಸ್ಟ್ (ಆಸ್ಟ್ರೇಲಿಯಾ -ವಿಕೆಟ್ ಕೀಪರ್), ಶೇನ್ ವಾರ್ನ್ (ಆಸ್ಟ್ರೇಲಿಯಾ), ಮಾಲ್ಕಂ ಮಾರ್ಷಲ್ (ವೆಸ್ಟ್ ಇಂಡೀಸ್), ಕರ್ಟ್ಲಿ ಆಂಬ್ರೋಸ್ (ವೆಸ್ಟ್ ಇಂಡೀಸ್), ಗ್ಲೆನ್ ಮೆಗ್ರಾ(ಆಸ್ಟ್ರೇಲಿಯಾ).

Story first published: Wednesday, September 5, 2018, 16:07 [IST]
Other articles published on Sep 5, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+