For Quick Alerts
ALLOW NOTIFICATIONS  
For Daily Alerts
 

ಬಿಬಿಎಲ್‌: ಶತಕ ಬಾರಿಸಿಲ್ಲ, ಆದರೂ ಟಿ20ಯಲ್ಲಿ ಸೋಫಿ ಡೆವೈನ್ 115 ರನ್!

No century, but 115 runs in a T20 for Sophie Devine

ಅಡಿಲೇಡ್, ಜನವರಿ 9: ನ್ಯೂಜಿಲ್ಯಾಂಡ್ ರಾಷ್ಟ್ರೀಯ ಕ್ರಿಕೆಟ್ ತಂಡ ಮತ್ತು ಫೀಲ್ಡ್ ಹಾಕಿ ತಂಡ ಎರಡರಲ್ಲೂ ಸೈ ಎನಿಸಿ ಗಮನ ಸೆಳೆದಿದ್ದ ಸೋಫಿ ಡೆವೈನ್, ಅಪರೂಪದ ಸಾಧನೆಗಾಗಿ ಸುದ್ದಿಯಲ್ಲಿದ್ದಾರೆ. ಅದೇನೆಂದರೆ, ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸದೆಯೇ ಅವರು 115 ರನ್ ಸಾಧನೆ ಮಾಡಿದ್ದಾರೆ.

ಇನ್ನೂ ಬಿಡಿಸಿ ಹೇಳೋದಾದ್ರೆ; ಸೋಫಿ ಅವರು ಟಿ20ಯಲ್ಲಿ ಸೂಪರ್ ಓವರ್‌ನಲ್ಲಿ ಅಜೇಯ 99 ರನ್ ಸಾಧನೆ ಹೊಂದಿದ್ದರು. ಬುಧವಾರ (ಜನವರಿ 9) ಅಡಿಲೇಡ್‌ನಲ್ಲಿ ನಡೆದ ಬಿಗ್‌ ಬ್ಯಾಷ್ ಲೀಗ್ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಮತ್ತೆ ಅಜೇಯ 16 ರನ್ ಸಿಡಿಸಿದವರು. ಅಲ್ಲಿಗೆ ಸೋಫಿಯಾ ಸೂಪರ್ ಓವರ್‌ನಲ್ಲಿ ಒಟ್ಟು 115 ರನ್ ಬಾರಿಸಿದಂತಾಗಿದೆ.

ಬುಧವಾರ ನಡೆದ ಮಹಿಳಾ ಬಿಬಿಎಲ್‌ 49ನೇ ಪಂದ್ಯದಲ್ಲಿ ಸೋಫಿಯಾ ಅವರ ಅಬ್ಬರ ಬ್ಯಾಟಿಂಗ್‌ನಿಂದಾಗಿ ಭಾರತದ ಸ್ಮೃತಿ ಮಂಧಾನ ಅವರಿದ್ದ ಹೊಬರ್ಟ್ ಹರಿಕೇನ್‌ ಮಹಿಳಾ ತಂಡದ ವಿರುದ್ಧ ಅಡಿಲೇಡ್ ಸ್ಟ್ರೈಕರ್ಸ್ ಮಹಿಳಾ ತಂಡ 24 ರನ್ ಜಯ ಸಾಧಿಸಿದೆ.

ಪಂದ್ಯದಲ್ಲಿ ಡೆವೈನ್ 26 ಎಸೆತಕ್ಕೆ 40 ರನ್ ಚಚ್ಚಿದ್ದರು. ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಅಡಿಲೇಡ್ ಸ್ಟ್ರೈಕರ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದು 165 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಹೊಬರ್ಟ್ ಹರಿಕೇನ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಲಷ್ಟೇ ಶಕ್ತವಾಯ್ತು.

Story first published: Wednesday, January 9, 2019, 18:26 [IST]
Other articles published on Jan 9, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+