For Quick Alerts
ALLOW NOTIFICATIONS  
For Daily Alerts
 

ಪಿಂಕ್‌ಬಾಲ್‌ ಟೆಸ್ಟ್‌ ವೇಳೆ ಅಡಿಲೇಡ್ ದುರಂತ ಮರುಕಳಿಸದು: ಪೂಜಾರ

No chance of Adelaide disaster repeat in pink ball Test: Cheteshwar Pujara

ಅಹ್ಮದಾಬಾದ್: ಭಾರತಕ್ಕೆ ಪ್ರವಾಸ ಬಂದಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಆತಿಥೇಯರ ವಿರುದ್ಧ ಅಹ್ಮದಾಬಾದ್‌ನಲ್ಲಿ ಮೂರನೇ ಟೆಸ್ಟ್‌ ಪಂದ್ಯ ಆಡಲಿದೆ. ಇದು ಪಿಂಕ್‌ಬಾಲ್ ಟೆಸ್ಟ್‌ ಅಥವಾ ಡೇ-ನೈಟ್ ಟೆಸ್ಟ್‌ ಆಗಿರಲಿದೆ. ಈ ಟೆಸ್ಟ್ ಪಂದ್ಯದ ವೇಳೆ ಅಡಿಲೇಡ್ ದುರಂತ ಮರುಕಳಿಸಲಾರದು ಎಂದು ಭಾರತದ ಟೆಸ್ಟ್‌ ಸ್ಪೆಶಾಲಿಸ್ಟ್‌ ಚೇತೇಶ್ವರ ಪೂಜಾರ ಹೇಳಿದ್ದಾರೆ.

ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ಭಾರತ ಅಡಿಲೇಡ್‌ನಲ್ಲಿ ಮೊದಲನೇ ಟೆಸ್ಟ್‌ ಪಂದ್ಯ ಆಡಿತ್ತು. ಈ ವೇಳೆ ಭಾರತ ಅತ್ಯಂತ ಕಳಪೆ ಬ್ಯಾಟಿಂಗ್‌ ಪ್ರದರ್ಶಿಸಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್‌ ಗಳಿಸಿ ಮುಖಭಂಗ ಅನುಭವಿಸಿತ್ತು. ಈ ಕೆಟ್ಟ ಬ್ಯಾಟಿಂಗ್‌ 88 ವರ್ಷಗಳ ಹಿಂದಿನ ಕೆಟ್ಟ ಬ್ಯಾಟಿಂಗ್‌ ಅನ್ನೇ ನೆನಪಿಸಿತ್ತು.

ಅಂದಿನ ಪಂದ್ಯದಲ್ಲಿ 'ಗ್ರೇಟ್‌ ವಾಲ್2' ಎಂದು ಕರೆಯಲ್ಪಡುತ್ತಿರುವ ಚೇತೇಶ್ವರ ಪೂಜಾರ ಅಂದಿನ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 43, ದ್ವಿತೀಯ ಇನ್ನಿಂಗ್ಸ್‌ನಲ್ಲಿ 0ಗೆ ವಿಕೆಟ್ ಒಪ್ಪಿಸಿದ್ದರು. ಆ ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್‌ಗಳ ಸುಲಭ ಜಯ ಗಳಿಸಿತ್ತು. ಆದರೆ ಆ ಬಳಿಕ, ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 2-1 ಜಯ ಗಳಿಸಿ ಇತಿಹಾಸ ನಿರ್ಮಿಸಿತ್ತು.

'ಆಸ್ಟ್ರೇಲಿಯಾದಲ್ಲಿ ಅದು ಬೇರೆಯೇ ಬಾಲ್‌ ಗೇಮ್ ಆಗಿತ್ತು. ಆದರೆ ಇಲ್ಲಿ ನಾವು ನಮ್ಮ ಪರಿಚಿತ ಪರಿಸ್ಥಿತಿಯಲ್ಲಿ ಆಡುತ್ತಿದ್ದೇವೆ. ಇಲ್ಲಿ ನಾವು ಉತ್ತಮ ಪ್ರದರ್ಶನ ನೀಡುತ್ತೇವೆ ಎಂಬ ಭರವಸೆಯಿದೆ. ಹಿಂದೆ ನಡೆದಿದ್ದರೆ ಬಗ್ಗೆ ನಾವು ಚಿಂತಿಸುತ್ತಿಲ್ಲ,' ಎಂದು ಚೇತೇಶ್ವರ ಪೂಜಾರ ಹೇಳಿದ್ದಾರೆ. ಭಾರತ-ಇಂಗ್ಲೆಂಡ್ ತೃತೀಯ ಟೆಸ್ಟ್‌ ಪಂದ್ಯ ಫೆಬ್ರವರಿ 24ರಿಂದ ಅಹ್ಮದಾಬಾದ್‌ನ ಮೊಟೆರಾದಲ್ಲಿ ಆರಂಭಗೊಳ್ಳಲಿದೆ.

Story first published: Saturday, February 20, 2021, 20:57 [IST]
Other articles published on Feb 20, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+