ಆರ್ ಸಿಬಿ ಕ್ಯಾಪ್ಟನ್ ಬದಲಾಯಿಸಲ್ಲ, ಕೊಹ್ಲಿಯೇ ನಾಯಕ!

ಬೆಂಗಳೂರು, ಸೆಪ್ಟೆಂಬರ್ 10: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಅವರು ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಸೀಸನ್ ನಲ್ಲಿ ನಾಯಕರಾಗಿ ಉಳಿಯುವುದಿಲ್ಲ. ಅವರ ಬದಲಿಗೆ ಎ ಬಿ ಡಿ ವಿಲಿಯರ್ಸ್ ನಾಯಕರಾಗಲಿದ್ದಾರೆ ಎಂಬ ಸುದ್ದಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಕ್ತಾರರು ತಳ್ಳಿ ಹಾಕಿದ್ದಾರೆ.
ತಂಡದ ನಾಯಕತ್ವದಲ್ಲಿ ಯಾವುದೇ ಬದಲಾವಣೆಯಿಲ್ಲ. ವಿರಾಟ್ ಕೊಹ್ಲಿ ನಾಯಕರಾಗಿ ಮುಂದುವರಿಯುತ್ತಾರೆ ಎಂದು ಇಂಡಿಯಾ ಟುಡೇ ವರದಿಯನ್ನು ಉಲ್ಲೇಖಿಸಿ ಆರ್ ಸಿಬಿ ವಕ್ತಾರರು ಸ್ಪಷ್ಟಪಡಿಸಿದರು.
ಕೊಹ್ಲಿ ಆರ್.ಸಿ.ಬಿ.ಯಲ್ಲಿ 2008ರಿಂದ ಆಟವಾಡುತ್ತಿದ್ದಾರೆ. 2013ರಿಂದ 6 ಸೀಸನ್ ಗಳಲ್ಲಿ ನಾಯಕನಾಗಿ ತಂಡವನ್ನು ಮುನ್ನೆಡೆಸಿದ್ದಾರೆ. ಕೊಹ್ಲಿ, ಎಬಿ ಡಿವಿಲಿಯರ್ಸ್ ರಂಥ ದಿಗ್ಗಜ ಆಟಗಾರರಿದ್ದರೂ ಆರ್.ಸಿ.ಬಿ. ಒಮ್ಮೆ ಕೂಡಾ ಕಪ್ ಎತ್ತಿಲ್ಲ
ಐಪಿಎಲ್'ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ, ಆರ್'ಸಿಬಿ ಪರ 163 ಪಂದ್ಯಗಳನ್ನು ಆಡಿ 4948 ರನ್ ಬಾರಿಸಿದ್ದಾರೆ. 2016ರಲ್ಲಿ ಆರ್ ಸಿಬಿ ರನ್ನರ್ ಅಪ್ ಆದ ಸೀಸನ್ ನಲ್ಲಿ ಕೊಹ್ಲಿ 81.08 ರನ್ ಸರಾಸರಿಯೊಂದಿಗೆ 4 ಶತಕ ಸೇರಿದಂತೆ 973ರನ್ ಚೆಚ್ಚಿದ್ದರು.
2017 ಹಾಗೂ 2018ರಲ್ಲಿ ಆರ್ ಸಿಬಿ ಕಳಪೆ ಸಾಧನೆ ಮಾಡಿತ್ತು. ಆದರೆ, ಈ ಬಾರಿ ಉತ್ತಮ ಸಾಧನೆ ಮಾಡುವ ಭರವಸೆ ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications