For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಗೆಲ್ಲುವ ತಂಡ ಯಾವುದೆಂಬುದನ್ನು ಹೇಳಲಾಗದು: ವಿರಾಟ್ ಕೊಹ್ಲಿ

ವಿಶ್ವಕಪ್ ಗೆಲ್ಲುವ ಬಗ್ಗೆ ಮಾತನಾಡಿದ ಭಾರತ ತಂಡದ ಆಪದ್ಬಾಂದವ..! | Oneindia Kannada
No clear World Cup favourites, Virat Kohli says after series defeat

ನವದೆಹಲಿ, ಮಾರ್ಚ್ 15: ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯ ಆರಂಭದಲ್ಲಿ 2-0ಯಿಂದ ಮುನ್ನಡೆಯಲ್ಲಿದ್ದ ಭಾರತ ಅಂತಿಮವಾಗಿ 2-3ರಿಂದ ಸರಣಿ ಕೈ ಚೆಲ್ಲಿತ್ತು. ಭಾರತದ ಸದ್ಯದ ಪರಿಸ್ಥಿತಿ ನೋಡಿದರೆ ವಿಶ್ವಕಪ್ ಗೆಲುವು ಅನುಮಾನ ಎಂಬಂತಿದೆ. ಆದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗಲೂ ಗೆಲುವಿನ ನಂಬಿಕೆ ಉಳಿಸಿಕೊಂಡಿದ್ದಾರೆ.

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಟಿ20 ಮತ್ತು ಏಕದಿನ ಎರಡೂ ಸರಣಿಗಳನ್ನು ಭಾರತ ಸೋತು ಮುಖಭಂಗ ಅನುಭವಿಸಿತ್ತು. ಈ ಸೋಲು ಭಾರತವನ್ನು ವಿಶ್ವಕಪ್ ನೆಲೆಯಲ್ಲಿ ಮರು ವಿಮರ್ಶೆಗೆ ಒಳಪಡುವಂತೆ ಮಾಡಿದೆ. ಆದರೆ ಭಾರತ ತಂಡ ವಿಶ್ವಕಪ್‌ನಲ್ಲಿ ಈಗಲೂ ಪ್ರಮುಖ ಸ್ಪರ್ಧಿಗಳ ಸಾಲಿನಲ್ಲಿದೆ ಎಂಬ ಅಭಿಪ್ರಾಯವನ್ನು ಕೊಹ್ಲಿ ಹೊರ ಹಾಕಿದ್ದಾರೆ.

'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ವಿಶ್ವಕಪ್‌ನಲ್ಲಿ ಸ್ಪರ್ಧಿಸುವ ಎಲ್ಲಾ ತಂಡಗಳೂ ಪ್ರತಿಸ್ಪರ್ಧಿಗಳಿಗೆ ಭೀತಿಯೊಡ್ಡುತ್ತವೆ. ವಿಶ್ವಕಪ್‌ನಲ್ಲಿ ಸ್ಪರ್ಧಿಸುವ ಯಾವ ತಂಡಗಳನ್ನೂ ಪ್ರಬಲ ಪೈಪೋಟಿಯಿಂದ ತಡೆಯಲಾಗದು' ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಕೊಹ್ಲಿ ಹೇಳಿದರು.

'ಆರಂಭಗೊಳ್ಳಲಿರುವ ವಿಶ್ವಕಪ್‌ನಲ್ಲಿ ಇಂಥದ್ದೇ ತಂಡ ಮೆಚ್ಚಿನದ್ದು ಅನ್ನುವಂತಿಲ್ಲ. ಯಾವುದೇ ತಂಡ ಅಪಾಯಕಾರಿಯಾಗಬಲ್ಲದು. ಉಳಿದ ಟೂರ್ನಿಗಳಲ್ಲಿ ಅಂಥದ್ದೇನೂ ಬಲ ಪ್ರದರ್ಶಿಸದ ವೆಸ್ಟ್ ಇಂಡೀಸ್, ವಿಶ್ವಕಪ್‌ನಲ್ಲಿ ತೀರಾ ಅಪಾಯಕಾರಿ ತಂಡವಾಗಿ ಕಾಣಿಸಿಕೊಳ್ಳುವುದನ್ನು ನಾವು ಗಮನಿಸಿದ್ದೇವೆ' ಎಂದು ಕೊಹ್ಲಿ ಉದಾಹರಣೆ ನೀಡಿದರು.

Story first published: Friday, March 15, 2019, 13:33 [IST]
Other articles published on Mar 15, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+