ಮೂರೇ ದಿನಕ್ಕೆ ಪಂದ್ಯ ಮುಗಿಸಿ ವರ್ಕೌಟ್ ಜಪದಲ್ಲಿ ಕ್ಯಾಪ್ಟನ್ ಕೊಹ್ಲಿ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಟ್ವಿಟರ್‌ನಲ್ಲಿ ಯಾವಾಗಲೂ ಸಕ್ರಿಯ. ಯಾವುದಾದರು ವಿಚಾರವಾಗಿ ವಿರಾಟ್ ತಮ್ಮ ಅಭಿಮಾನಿಗಳ ಜೊತೆ ಈ ಸೋಶಿಯಲ್ ಮೀಡಿಯಾ ಮೂಲಕ ಸಂಪರ್ಕದಲ್ಲಿರುವ ಪ್ರಯತ್ನದಲ್ಲಿರುತ್ತಾರೆ. ಇವತ್ತು ವಿರಾಟ್ ಕೊಹ್ಲಿ ತಮ್ಮ ವರ್ಕೌಟ್ ವೀಡಿಯೋ ಒಂದನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.
ಭಾರತ ತಂಡದ ನಾಯಕ ವಿರಾಟ್‌ಕೊಹ್ಲಿ ವಿರಾಟ್ ಫಿಟ್‌ನೆಸ್‌ಗೆ ಎಷ್ಟು ಗಮನ ನೀಡುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಆಟದಿಂದಾಗಿ ಮಾತ್ರವಲ್ಲ ತಮ್ಮ ಫಿಟ್‌ನೆಸ್‌ನಿಂದಲೂ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರ ದೈಹಿಕ ಕ್ಷಮತೆ ಆಟಕ್ಕೆ ಮತ್ತಷ್ಟು ಪೂರಕವಾಗಿದೆ ಅನ್ನೋದನ್ನು ತಜ್ಞರೂ ಹೇಳಿತ್ತಾರೆ. ಕೊಹ್ಲಿ ಅತ್ಯುತ್ತಮ ಫಿಟ್‌ನೆಸ್ ಹೊಂದಿರುವ ಆಟಗಾರ ಅನ್ನೋದನ್ನು ಯಾರೂ ತಿರಸ್ಕರಿಸಲು ಸಾಧ್ಯವಿಲ್ಲ.
View this post on InstagramA post shared by Virat Kohli (@virat.kohli) on
ವಿರಾಟ್ ಫಿಟ್‌ನೆಸ್ ತಂಡದ ಇತರ ಆಟಗಾರರ ಮೇಲೂ ಪರಿಣಾಮ ಬೀರಿದೆ. ನಾಯಕನ ಹಾದಿಯನ್ನು ಸಹ ಆಟಗಾರರೂ ಪಾಲಿಸುತ್ತಿದ್ದು ಟೀಮ್ ಇಂಡಿಯಾದ ಎಲ್ಲಾ ಆಟಗಾರರೂ ಫಿಟ್ ಆಂಡ್ ಫೈನ್ ಆಗಿದ್ದಾರೆ. ಇನ್ನು ವಿರಾಟ್ ಕೊಹ್ಲಿ ನಿರಂತರ ಕ್ರಿಕೆಟ್ ಆಡುತ್ತಿದ್ದರೂ ಗಾಯಗೊಂಡು ಪಂದ್ಯದಿಂದ ಹೊರಗುಳಿದಿರುವ ಘಟನೆ ತೀರಾ ವಿರಳ. ವಿರಾಟ್ ದೈಹಿಕ ಕ್ಷಮತೆಗೆ ಸಾಕ್ಷಿ.
ಮೊನ್ನೆಯಷ್ಟೇ ಟೀಮ್ ಇಂಡಿಯಾ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು ಗೆದ್ದು ಬೀಗಿತ್ತು. ಕೇವಲ ಮೂರೇ ದಿನ ನಡೆದ ಮೊದಲ ಪಂದ್ಯ ಮುಗಿದಿತ್ತು. ಆದರೂ ನಾಯಕ ಕೊಹ್ಲಿ ತಮ್ಮ ಎಂದಿನ ವರ್ಕೌಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಮುಂದಿನ ಪಂದ್ಯ 22ನೇ ತಾರೀಖಿನಿಂದ ಆರಂಭಗೊಳ್ಳಲಿದೆ. ಕೊಲ್ಕತ್ತಾದಲ್ಲಿ ನಡೆಯಲಿರುವ ಈ ಅಹರ್ನಿಶಿ ಪಂದ್ಯ ಐತಿಹಾಸಿಕವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications