ಜೆಪಿ ಡುಮಿನಿಯ ಆಲ್ ಟೈಮ್ ಐಪಿಎಲ್ ತಂಡದಲ್ಲಿ ಇಬ್ಬರೇ ಭಾರತೀಯರು!

ಬೆಂಗಳೂರು, ಮೇ 29: ಇದೇ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿ ನಡೆಯುತ್ತದೆ ಎನ್ನುವುದಕ್ಕೆ ಯಾವುದೇ ಖಾತರಿಯಿಲ್ಲ. ಕೋವಿಡ್ 19ನಿಂದಾಗಿ 2020 ಐಪಿಎಲ್ ನಡೆಯುತ್ತೋ ಇಲ್ಲವೋ ಎಂಬಂತಾಗಿದೆ. ಒಂದು ವೇಳೆ ಟಿ20 ವಿಶ್ವಕಪ್ ಮುಂದೂಡಲ್ಪಟ್ಟರೆ, ಅಕ್ಟೋಬರ್‌ನಲ್ಲಿ ಐಪಿಎಲ್ ನಡೆಯುವ ಸಾಧ್ಯತೆ ಇದೆ.
ಮೇ 28ರಂದು ಐಸಿಸಿ, ಟಿ20 ಆಯೋಜಿಸಲು ದಿನ ನಿಗದಿಪಡಿಸುವ ಬಗ್ಗೆ ಸಭೆ ನಡೆಸಿತ್ತು. ಆದರೆ ಸಭೆಯ ಬಳಿಕ ಐಸಿಸಿ ತನ್ನ ನಿರ್ಧಾರ ತಿಳಿಸಲಿಲ್ಲ. ಬದಲಿಗೆ ಜೂನ್ 10ಕ್ಕೆ ತನ್ನ ನಿರ್ಧಾರವನ್ನು ಕಾದಿರಿಸಿಕೊಂಡಿದೆ. ಅಂದರೆ ಐಪಿಎಲ್ ಯಾವಾಗ ನಡೆಯಲಿದೆ ಅನ್ನೋದು ಜೂನ್ 10ರ ಬಳಿಕ ಗೊತ್ತಾಗಲಿದೆ. ಒಟ್ಟಿನಲ್ಲಿ ಐಪಿಎಲ್ ಭವಿಷ್ಯ ಟಿ20 ವಿಶ್ವಕಪ್ ಅನ್ನು ಅವಲಂಭಿಸಿದೆ.
ಏನೇ ಇರಲಿ, ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಜೆಪಿ ಡುಮಿನಿ ತನ್ನ ಆಲ್ ಟೈಮ್ ಐಪಿಎಲ್ ತಂಡ ಪ್ರಕಟಿಸಿದ್ದಾರೆ. ಆದರೆ ಇಲ್ಲಿ ಡುಮಿನಿ ಐಪಿಎಲ್‌ನಲ್ಲಿರುವ 4 ವಿದೇಶಿಯರು, 7 ಭಾರತೀಯರು ನಿಯಮ ಪಾಲಿಸಿಲ್ಲ. ಡುಮಿನಿ ಪ್ರಕಟಿಸಿರುವ ಐಪಿಎಲ್ ತಂಡದಲ್ಲಿ ಎಂಎಸ್ ಧೋನಿಯಿಲ್ಲ, ಕೇವಲ ಇಬ್ಬರೇ ಭಾರತೀಯರಿದ್ದಾರೆ.
ಜೆಪಿ ಡುಮಿನಿಯ ಆಲ್ ಟೈಮ್ ಐಪಿಎಲ್ ತಂಡ: ಕ್ರಿಸ್ ಗೇಲ್, ಆ್ಯಡಮ್ ಗಿಲ್‌ಕ್ರಿಸ್ಟ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಸಿ), ಎಬಿ ಡಿವಿಲಿಯರ್ಸ್, ಕೀರನ್ ಪೊಲಾರ್ಡ್, ಆ್ಯಂಡ್ರೆ ರಸೆಲ್, ಬ್ರೆಟ್ ಲೀ, ಮುತ್ತಯ್ಯ ಮುರಳೀಧರನ್, ಲಸಿತ್ ಮಾಲಿಂಗ, ಇಮ್ರಾನ್ ತಾಹಿರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications