For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದ ಭವಿಷ್ಯದ ನಾಯಕನಾಗುವ ಎಲ್ಲಾ ಆರ್ಹತೆಗಳೂ ಆತನಲ್ಲಿದೆ: ಅಲೆಕ್ಸ್ ಕ್ಯಾರಿ

No doubt Shreyas Iyer has potential to lead Team India: Alex Carey

ಟೀಮ್ ಇಂಡಿಯಾದ ಯುವ ಆಟಗಾರನನ್ನು ಆಸ್ಟ್ರೇಲಿಯಾದ ಯುವ ಕ್ರಿಕೆಟಿಗ ಅಲೆಕ್ಸ್ ಕ್ಯಾರಿ ಪ್ರಶಂಸಿಸಿದ್ದಾರೆ. ಭವಿಷ್ಯದಲ್ಲಿ ಟೀಮ್ ಇಮಡಿಯಾ ಕ್ರಿಎಕಟ್ ತಂಡದ ನಾಯಕನಾಗಲು ಬೆಕಿರುವ ಎಲ್ಲಾ ಅರ್ಹತೆಗಳೂ ಆತನಲ್ಲಿ ಇದೆ ಎಂದು ಅಲೆಕ್ಸ್ ಕ್ಯಾರಿ ಅಭಿಪ್ರಾಯಪಟ್ಟಿದ್ದಾರೆ.

ಅಲೆಕ್ಸ್ ಕ್ಯಾರಿ ಹೀಗೆ ಪ್ರಶಂಸೆಯ ಮಾತಗಳನ್ನು ಆಡಿದ್ದು ಟೀಮ್ ಇಂಡಿಯಾದ ಯುವ ಆಟಗಾರ ಶ್ರೇಯಸ್ ಐಯ್ಯರ್ ಬಗ್ಗೆ. ಶ್ರೇಯಸ್ ಐಯ್ಯರ್ ಹಾಗೂ ಅಲೆಕ್ಸ್ ಕ್ಯಾರಿ ಐಪಿಎಲ್‌ನಲ್ಲಿ ಒಂದೇ ತಂಡದ ಸದಸ್ಯರಾಗಿದ್ದಾರೆ. ಶ್ರೇಯಸ್ ಐಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಅಲೆಕ್ಸ್ ಕ್ಯಾರಿ ಕೂಡ ಆಡಿದ್ದಾರೆ.

ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ವಿಶ್ವಕಪ್‌ಗೂ ಎರಡು ವರ್ಷ ಮೊದಲು ಭಾರತಿಯ ಕ್ರಿಕೆಟ್ ತಂಡ ನಾಲ್ಕನೇ ಕ್ರಮಾಂಕಕ್ಕೆ ಸೂಕ್ತವಾದ ಆಟಗಾರನ ಹುಡುಕಾಟದಲ್ಲಿತ್ತು. ಆದರೆ ಸೂಕ್ತವೆನಿಸುವ ಆಟಗಾರ ಟೀಮ್ ಇಂಡಿಯಾಗೆ ಸಿಕ್ಕಿರಲಿಲ್ಲ. ಕಳೆದ ವಿಸ್ವಕಪ್ ಅಂತ್ಯದ ಬಳಿಕ ಶ್ರೇಯಸ್ ಐಯ್ಯರ್ ಅವರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು. ಐಯ್ಯರ್ ತನಗೆ ಸಿಕ್ಕ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿ ಸ್ವೀಕರಿಸಿದರು. ಹೀಗಾಗಿ ನಾಲ್ಕನೇ ಆಟಗಾರನ ಸಮಸ್ಯೆಗೆ ಶ್ರೇಯಸ್ ಪರಿಹಾರವಾದರು.

2019ರ ಐಪಿಎಲ್‌ನ ಬಳಿಕ ಶ್ರೇಯಸ್ ಐಯ್ಯರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಗೌತಮ್ ಗಂಭೀರ್ ಡೆಲ್ಲಿ ನಾಯಕತ್ವವನ್ನು ತೊರೆದ ನಂತರ ಈ ಜವಾಬ್ಧಾರಿ ಐಯ್ಯರ್ ಹೆಗಲಿಗೆ ಬಿದ್ದಿತ್ತು. ಈ ಅವಕಾಶವನ್ನು ಕೂಡ ಐಯ್ಯರ್ ಅತ್ಯುತ್ತಮವಾಗಿ ಬಳಸಿಕೊಂಡಿದ್ದಾರೆ. ಯುವ ತಂಡದೊಂದಿಗೆ 2019ರಲ್ಲಿ ಪ್ಲೇ ಆಫ್ ಹಂತಕ್ಕೇರಿದ್ದ ಡೆಲ್ಲಿ 2020ರ ಆವೃತ್ತಿಯಲ್ಲಿ ರನ್ನರ್‌ಅಪ್ ಆಗಿ ಮೆರೆದಿದೆ.

ಶ್ರೇಯಸ್ ಐಯ್ಯರ್ ಬಗ್ಗೆ ಅಲೆಕ್ಸ್ ಕ್ಯಾರಿ ಮಾತನಾಡುತ್ತಾ "ತಂಡದ ಎಲ್ಲಾ ಸದಸ್ಯರ ಜೊತೆಗೆ ಸಂವಹಿಸುವ ಕಲೆ ಶ್ರೇಯಸ್ ಐಯ್ಯರ್ ಅವರಲ್ಲಿ ಅತ್ಯುತ್ತಮವಾಗಿದೆ. ತನ್ನ ಪ್ರದರ್ಶನದ ಜೊತೆಗೆ ತಂಡವನ್ನು ಕುಡ ಅತ್ಯುತ್ತಮವಾಗಿ ಮುನ್ನಡೆಸುವ ಚಾಕಚಕ್ಯತೆ ಅವರಲ್ಲಿದೆ. ಡೆಲ್ಲಿ ತಂಡಕ್ಕೆ ಆಯ ಕಳೆದೆರಡು ಐಪಿಎಲ್ ಆವೃತ್ತಿಗಳಲ್ಲಿ ಯಶಸ್ಸನ್ನು ದೊರಕಸಿಕೊಟ್ಟಿದ್ದಾರೆ. ಅನುಮಾನವೇ ಇಲ್ಲ ಆತ ಭವಿಷ್ಯದಲ್ಲಿ ಭಾರತವನ್ನು ಮುನ್ನಡೆಸುವ ಎಲ್ಲಾ ಅರ್ಹತೆಯನ್ನು ಹೊಂದಿದ್ದಾರೆ" ಎಂದು ಅಲೆಕ್ಸ್ ಕ್ಯಾರಿ ಹೇಳಿದ್ದಾರೆ.

Story first published: Friday, November 20, 2020, 14:53 [IST]
Other articles published on Nov 20, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+