For Quick Alerts
ALLOW NOTIFICATIONS  
For Daily Alerts
 

T20 World Cup 2026: ತಂಡದಲ್ಲಿ ಇಲ್ಲ ಕನ್ನಡಿಗರಿಗೆ ಸ್ಥಾನ: ಹೀಗೆ ಆಗಿದ್ದು ಮೂರನೇ ಬಾರಿ

ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಈ ಮೆಗಾ ಟೂರ್ನಿಗೆ ಭಾರತ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ. ತಂಡವನ್ನು ಸೂರ್ಯಕುಮಾರ್‌ ಯಾದವ್ ಮುನ್ನಡೆಸಲಿದ್ದಾರೆ. ಇದೆ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಸೂರ್ಯ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ತಂಡದ ಉಪನಾಯಕನಾಗಿ ಆಯ್ಕೆ ಆಗಿದ್ದ ಶುಭಮನ್‌ ಗಿಲ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಇವರು ಟಿ20 ಕ್ರಿಕೆಟ್‌ನಲ್ಲಿ ರನ್‌ ಬರವನ್ನು ಅನುಭಿಸುತ್ತಿದ್ದರು. ತವರಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಕನ್ನಡಿಗರು ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಪ್ರಕಟಿಸಿದ ತಂಡದಲ್ಲಿ ಕರ್ನಾಟಕದ ಪ್ಲೇಯರ್‌ ಸ್ಥಾನ ಪಡೆದಿಲ್ಲ. ಕರ್ನಾಟಕದ ಸ್ಟಾರ್ ಪ್ಲೇಯರ್‌ ಕೆಎಲ್ ರಾಹುಲ್‌ ಪ್ರಸಕ್ತ ವರ್ಷ ಭರ್ಜರಿ ಫಾರ್ಮ್‌ನಲ್ಲಿದ್ದರು. ಅಲ್ಲದೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದರು. ಆದರೆ ಇವರಿಗೆ ಬಿಸಿಸಿಐ ಆಯ್ಕೆ ಸಮಿತಿ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನವನ್ನು ನೀಡಿಲ್ಲ. ಇವರು ಆರಂಭಿಕರಾಗಿ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಹೆಸರು ಮಾಡಿರುವ ಆಟಗಾರ.

No Karnataka Players in India s T20 World Cup Squad A Miss for the Third Time

ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೆಎಲ್ ರಾಹುಲ್‌ ಆರಂಭಿಕರಾಗಿ ಕಣಕ್ಕೆ ಇಳಿಯುತ್ತಾರೆ. ಇವರು ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ತಮ್ಮ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಿದ್ದರು. ಅಲ್ಲದೆ ರೋಹಿತ್ ಶರ್ಮಾ ಅವರಿಂದ ತೆರವಾಗಿದ್ದ ಟೆಸ್ಟ್ ಓಪನರ್‌ ಸ್ಥಾನವನ್ನು ಸಮರ್ಥವಾಗಿ ತುಂಬಿದ್ದಾರೆ. ಇತ್ತೀಚಿದೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲೂ ರಾಹುಲ್‌, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಅಬ್ಬರಿಸಿದ್ದರು. ಕರ್ನಾಟಕದ ಈ ಆಟಗಾರನಿಗೆ ಬಿಸಿಸಿಐ ಆಯ್ಕೆ ಸಮಿತಿ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ನೀಡಿಲ್ಲ.

ಕಳೆದ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಹಿರಿಮೆಯನ್ನು ಹೊಂದಿರುವ ಕರ್ನಾಟಕದ ಪ್ರಸಿದ್ಧ್ ಕೃಷ್ಣ ಅವರ ಹೆಸರು ಸಹ ಈ ಪಟ್ಟಿಯಲ್ಲಿ ಇಲ್ಲ. ಇವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ ಸ್ಥಾನವನ್ನು ಭಧ್ರ ಪಡಿಸಿಕೊಂಡಿದ್ದಾರೆ. ಇವರು ಸಹ ಪ್ರಕಟಿತ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿಲ್ಲ. ದೇಶೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಹಾಗೂ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರ ಆರಂಭಿಕರಾಗಿ ಆಡಿ ಸೈ ಎನಿಸಿಕೊಂಡಿರುವ ದೇವದತ್ ಪಡಿಕ್ಕಲ್‌ ಸಹ ಈ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಹೀಗಾಗಿದ್ದು ಮೂರನೇ ಬಾರಿ

ಟಿ20 ವಿಶ್ವಕಪ್‌ನಲ್ಲಿ ಕರ್ನಾಟಕದ ಆಟಗಾರರು ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದು, ಇದಕ್ಕೂ ಮೊದಲು 2024, 2012ರಲ್ಲಿಯೂ ಕರ್ನಾಟಕದ ಆಟಗಾರರು ಸ್ಥಾನ ಪಡೆದಿರಲಿಲ್ಲ. ಈ ಹಿಂದೆ ವೆಸ್ಟ್‌ ಇಂಡೀಸ್‌ ಹಾಗೂ ಅಮೆರಿಕದ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್, 2007ರಲ್ಲಿ ರಾಬಿನ್‌ ಉತ್ತಪ್ಪ, 2010ರಲ್ಲಿ ವಿನಯ್ ಕುಮಾರ್, 2014ರಲ್ಲಿ ಸ್ಟುವರ್ಟ್‌ ಬಿನ್ನಿ, 2016ರಲ್ಲಿ ಮನೀಶ್‌ ಪಾಂಡೆ, 2021, 2022ರಲ್ಲಿ ಕೆಎಲ್‌ ರಾಹುಲ್ ಸ್ಥಾನ ಪಡೆದಿದ್ದರು.

Story first published: Saturday, December 20, 2025, 15:54 [IST]
Other articles published on Dec 20, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+