ಆರ್‌ಸಿಬಿ ಬಗ್ಗೆ ಭಾವನಾತ್ಮಕ ಮಾತುಗಳನ್ನಾಡಿದ ನಾಯಕ ವಿರಾಟ್ ಕೊಹ್ಲಿ!

ಬೆಂಗಳೂರು, ಏಪ್ರಿಲ್ 25: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಒಮ್ಮೆಯೂ ಟ್ರೋಫಿ ಗೆದ್ದಿದ್ದಿಲ್ಲ. ತಂಡದಲ್ಲಿ ಸಾಕಷ್ಟು ಓಳ್ಳೆಯ ಆಟಗಾರರಿದ್ದರೂ ಆರ್‌ಸಿಬಿ ಎಡವುತ್ತಿರುವುದೇಕೆ? ಮುಂಬೈ, ಚೆನ್ನೈನಂತ ತಂಡಗಳು ಹೆಚ್ಚಾಗಿ ಗೆಲ್ಲುತ್ತಿರುವುದೇಕೆ ಎಂಬುದಕ್ಕೆ ಆರ್‌ಸಿಬಿ ಮಾಜಿ ಆಟಗಾರ, ಟೀಮ್ ಇಂಡಿಯಾದ ಮಾಜಿ ನಾಯಕ, ಕನ್ನಡಿಗ 'ಗ್ರೇಟ್ ವಾಲ್' ರಾಹುಲ್ ದ್ರಾವಿಡ್ ಒಂದಿಷ್ಟು ಕಾರಣಗಳನ್ನು ಹೇಳಿಕೊಂಡಿದ್ದರು.
ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ಎಬಿ ಡಿ ವಿಲಿಯರ್ಸ್, ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಅನಿಲ್ ಕುಂಬ್ಳೆ, ಕೆವಿನ್ ಪೀಟರ್ಸನ್, ಯುವರಾಜ್ ಸಿಂಗ್, ಡೇಲ್ ಸ್ಟೇನ್, ಶೇನ್ ವಾಟ್ಸನ್ ಇಂಥವರೆಲ್ಲ ಆಡಿದ್ದರೂ ತಂಡ ಕಪ್ ಗೆಲ್ಲುತ್ತಿಲ್ಲವೆಂದಾದರೆ, ದ್ರಾವಿಡ್ ಹೇಳಿರುವಂತೆ ಆರ್‌ಸಿಬಿಯಲ್ಲಿ ತಿದ್ದುಕೊಳ್ಳಬೇಕಾದ ಸಂಗತಿಗಳು ಖಂಡಿತಾ ಇವೆ.
ಆರ್‌ಸಿಬಿಗೆ ಚಾಂಪಿಯನ್ ಪಟ್ಟ ಲಭಿಸದಿರುವುದಕ್ಕೆ ನಾಯಕ ವಿರಾಟ್ ಕೊಹ್ಲಿಯೂ ಆಗೀಗ ಟೀಕೆಗೆ ಗುರಿಯಾಗಿದ್ದಿದೆ. ಈ ಬಾರಿ ಆರ್‌ಸಿಬಿ ತಂಡದ ಕುರಿತು ಕೇಳಲಾದ ಪ್ರಶ್ನೆಗೆ ಕೊಹ್ಲಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಕೊಹ್ಲಿ ಆರ್‌ಸಿಬಿ ಬಿಡಬೇಕಾ?
ಆರ್‌ಸಿಬಿ ಒಮ್ಮೆಯೂ ಚಾಂಪಿಯನ್ ಆಗಿ ಹೊರಹೊಮ್ಮದಿರುವುದರಿಂದ ಸಹಜವಾಗಿಯೇ ತಂಡದ ನಾಯಕ ಕೊಹ್ಲಿಯ ಬಗ್ಗೆ ಟೀಕೆಗಳು ಕೇಳಿಬರುತ್ತವೆ. ಹೀಗಾಗಿ ಕೊಹ್ಲಿ, ಆರ್‌ಸಿಬಿ ತಂಡವನ್ನು ತೊರೆದು ಬೇರೆ ತಂಡಕ್ಕೆ ಬಂದರೆ ಒಳ್ಳೆಯದು ಎಂದು ಬಹಳಷ್ಟು ಮಂದಿ ಕ್ರಿಕೆಟ್ ಪ್ರೇಮಿಗಳು ಹೇಳುತ್ತಿರುತ್ತಾರೆ. ಕೊಹ್ಲಿ ಆರ್‌ಸಿಬಿ ತೊರೆಯೋದು ಸರಿಯಾ?

ಕಿಂಗ್ ಕೊಹ್ಲಿ ಏನಂತಾರೆ?
ಕೊಹ್ಲಿ ಅವರು ಆರ್‌ಸಿಬಿ ತೊರೆದರೆ ಚೆನ್ನ ಎಂಬ ಮಾತನ್ನು ಕೊಹ್ಲಿ ನಿರಾಕರಿಸಿದ್ದಾರೆ. ಯಾವುದೇ ಕಾರಣಕ್ಕೂ ನಾನು ಬೆಂಗಳೂರು ತಂಡವನ್ನು ತ್ಯಜಿಸಲಾರೆ ಎಂದು ಕೊಹ್ಲಿ ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾದಾಗಿನಿಂದಲೂ ಕೊಹ್ಲಿ ಆರ್‌ಸಿಬಿ ತಂಡದಲ್ಲೇ ಆಡುತ್ತಿದ್ದಾರೆ.

ಆರ್‌ಸಿಬಿಯೊಂದಿಗೆ ಅದ್ಭುತ ಪ್ರಯಾಣ
ಆರ್‌ಸಿಬಿ ಸಹ ಆಟಗಾರ ಎಬಿಡಿ ಜೊತೆ ಇನ್‌ಸ್ಟಾಗ್ರಾಮ್ ವೀಡಿಯೋದಲ್ಲಿ ಮಾತನಾಡಿರುವ ಕೊಹ್ಲಿ, 'ಆರ್‌ಸಿಬಿ ಜೊತೆಗಿನ ಪಯಣ ಅದ್ಭುತವಾದ್ದು. ಐಪಿಎಲ್ ಟ್ರೋಫಿಯನ್ನ ನಾವೆಲ್ಲರೂ ಸೇರಿ ಗೆಲ್ಲಬೇಕನ್ನೋದು ನಮ್ಮ ಕನಸು. ಆದರೆ ಯಾವುದೇ ಸಂದರ್ಭದಲ್ಲೂ ನಾನು ತಂಡ ಬಿಟ್ಟು ಹೋಗುವ ಬಗ್ಗೆ ಯೋಚಿಸಲಾರೆ,' ಎಂದು ಹೇಳಿದ್ದಾರೆ.

'ನಾನಿನ್ನ ಬಿಡಲಾರೆ' ಎಂದ ಕೊಹ್ಲಿ
'ಈವರೆಗೂ ಸೀಸನ್‌ನಲ್ಲಿ ಚೆನ್ನಾಗಿ ಆಡಲಾಗಿಲ್ಲ, ಟ್ರೋಫಿ ಗೆಲ್ಲಲಾಗುತ್ತಿಲ್ಲ ಎಂದಾಗ ಬೇಸರವಾಗುತ್ತದೆ. ಆದರೆ ನಾನು ಎಲ್ಲೀವರೆಗೂ ಐಪಿಎಲ್ ಆಡುತ್ತೇನೋ, ಅಲ್ಲೀವರೆಗೂ ಆರ್‌ಸಿಬಿ ಬಿಡಲಾರೆ. ತಂಡದ ಬಗ್ಗೆ ಅಭಿಮಾನಿಗಳಿಗಿರುವ ಪ್ರೀತಿ, ಪ್ರಾಮಾಣಿಕತೆ ಕೂಡ ಬೆಲೆಕಟ್ಟಲಾರದ್ದು,' ಎಂದು 31ರ ಹರೆಯದ ಕೊಹ್ಲಿ ವಿವರಿಸಿದರು.

ಐಪಿಎಲ್ ಟ್ರೋಫಿ ಗೆಲ್ಲದ ತಂಡಗಳು
ಐಪಿಎಲ್‌ನಲ್ಲಿ ಈವರೆಗೂ ಟ್ರೋಫಿಯೇ ಗೆಲ್ಲದ ತಂಡಗಳೆಂದರೆ ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಆರ್‌ಸಿಬಿ ತಂಡ 2016ರಲ್ಲಿ, 2011ರಲ್ಲಿ, 2009ರಲ್ಲಿ ಫೈನಲ್‌ಗೆ ಪ್ರವೇಶಿಸಿತ್ತು, ಆದರೆ ಪ್ರಶಸ್ತಿ ಸುತ್ತಿನಲ್ಲಿ ಸೋತಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications