ಐಪಿಎಲ್ ಹರಾಜು 2021: ನೋಂದಾಯಿತರ ಪಟ್ಟಿಯಲ್ಲಿ ಸ್ಟಾರ್ಕ್ ಹೆಸರಿಲ್ಲ!

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಆಟಗಾರರ ಹರಾಜಿಗೆ ತಯಾರಿ ನಡೆಯುತ್ತಿದೆ. 2021 ಐಪಿಎಲ್ ಹರಾಜಿಗೆ ನೋಂದಾವಣೆಗಾಗಿ ಫೆಬ್ರವರಿ 4 ಕೊನೇ ದಿನವಾಗಿತ್ತು. ಒಟ್ಟಿಗೆ 1097 ಆಟಗಾರರು ಹರಾಜಿಗಾಗಿ ನೋಂದಾಯಿಸಿಕೊಂಡಿದ್ದಾರೆ. ಫೆಬ್ರವರಿ 18ರಂದು ಚೆನ್ನೈನಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ.
ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಸಂಪೂರ್ಣ ಆಟಗಾರ ಪಟ್ಟಿ ಪ್ರಕಟಗೊಂಡಿಲ್ಲ. ಶೀಘ್ರ ಪ್ರಕಟಗೊಳ್ಳಲಿದೆ. ಆದರೆ ಐಪಿಎಲ್ ಆಟಗಾರರ ಹರಾಜಿಗೆ ಸಂಬಂಧಿಸಿ ಮಾಹಿತಿಗಳು ಒಂದೊಂದಾಗಿ ಹೊರ ಬೀಳುತ್ತಿವೆ. ಐಪಿಎಲ್‌ಗಾಗಿ ನೋಂದಾಯಿಸಿಕೊಂಡ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಹೆಸರೇ ಇಲ್ಲ ಎನ್ನಲಾಗಿದೆ.
ಮಿಚೆಲ್ ಸ್ಟಾರ್ 2019ರಲ್ಲಿ ವಿಶ್ವಕಪ್ ಕಾರಣ ನೀಡಿ ಐಪಿಎಲ್‌ನಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದರು. 2020ರಲ್ಲೂ ಸ್ಟಾರ್ಕ್ ಐಪಿಎಲ್‌ನಲ್ಲಿ ಆಡಿರಲಿಲ್ಲ. ಇದೀಗ 2021ರ ಐಪಿಎಲ್ ಸೀಸನ್‌ನಿಂದಲೂ ಹೊರಗಿರಲು ಸ್ಟಾರ್ಕ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಲ್ಲಿಗೆ ಸ್ಟಾರ್ಕ್ ಒಟ್ಟಿಗೆ 6 ಐಪಿಎಲ್ ಸೀಸನ್‌ಗಳನ್ನು ಮಿಸ್ ಮಾಡಿಕೊಂಡಂತಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಮಾತ್ರ ಆಡಿರುವ ಸ್ಟಾರ್ಕ್ 27 ಪಂದ್ಯಗಳಲ್ಲಿ 34 ವಿಕೆಟ್ ಉರುಳಿಸಿದ್ದಾರೆ. ಆರ್‌ಸಿಬಿ ಪರ ಕೇವಲ ಎರಡು ಸೀಸನ್‌ಗಳಲ್ಲಷ್ಟೇ ಆಡಿರುವ ಸ್ಟಾರ್ಕ್, ಅತ್ಯಧಿಕ ವಿಕೆಟ್ ಪಡೆದ ಆರ್‌ಸಿಬಿಯ ವಿದೇಶಿ ಆಟಗಾರರಲ್ಲಿ ದ್ವಿತೀಯ ಸ್ಥಾನದಲ್ಲಿದ್ದರು. ಅಂದ್ಹಾಗೆ ನೋಂದಾಯಿತರಲ್ಲಿ ನಿಷೇಧಕ್ಕೀಡಾಗಿದ್ದ ಎನ್ ಶ್ರೀಶಾಂತ್ ಹೆಸರಿದೆ ಎಂದು ತಿಳಿದು ಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications