ಹರ್ಷ ಭೋಗ್ಲೆ ಆಯ್ಕೆಯ ಏಷ್ಯಾ ಕಪ್ 2018 XIರಲ್ಲಿ ಧೋನಿ ಇಲ್ಲ

ಬೆಂಗಳೂರು, ಸೆಪ್ಟೆಂಬರ್ 28: 14ನೇ ಏಷ್ಯಾಕಪ್ ನಲ್ಲಿ ಭಾರತ ತಂಡವು ನಿರೀಕ್ಷೆಯಂತೆ ಫೈನಲ್ ಪ್ರವೇಶಿಸಿದೆ. ಕ್ರಿಕೆಟ್ ವಿಶ್ಲೇಷಕರು, ಕಾಮೆಂಟೆಟರ್ಸ್ ತಮ್ಮ ಆಯ್ಕೆಯ ತಂಡವನ್ನು ಪ್ರಕಟಿಸುತ್ತಿದ್ದಾರೆ.
ಹರ್ಷ ಭೋಗ್ಲೆ ಅವರು ತಮ್ಮ ಆಯ್ಕೆಯ ಆಡುವ ಹನ್ನೊಂದು ಮಂದಿ ತಂಡವನ್ನು ಪ್ರಕಟಿಸಿದ್ದು, ಸ್ಟಾರ್ ಆಟಗಾರ ಎಂಎಸ್ ಧೋನಿ ಅವರನ್ನು ಆಯ್ಕೆ ಮಾಡಿಲ್ಲ.
ಈ ಬಾರಿಯ ಏಷ್ಯಾಕಪ್ ನಲ್ಲಿ ಪಂದ್ಯಗಳು ರೋಚಕವಾಗಿದ್ದು, ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳ ಪಂದ್ಯ ಟೈ ನಲ್ಲಿ ಅಂತ್ಯ ಕಂಡಿದ್ದನ್ನು ಸ್ಮರಿಸಬಹುದು. ವೈಯಕ್ತಿಕವಾಗಿ ಕೆಲವು ಬ್ಯಾಟ್ಸ್ ಮನ್ ಹಾಗೂ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದ್ದರೂ ಆಲ್ ರೌಂಡರ್ ಗಳು ವಿಫಲರಾಗಿದ್ದಾರೆ.
ಧೋನಿ ಏಕಿಲ್ಲ?: ಏಷ್ಯಾಕಪ್ ಇತಿಹಾಸದಲ್ಲೇ ಧೋನಿ ಉತ್ತಮ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಟೂರ್ನಮೆಂಟ್ ನಲ್ಲಿ ಭಾರತದ ಬ್ಯಾಟಿಂಗ್ ಉತ್ತಮವಾಗಿತ್ತು ಹಾಗೂ ಧೋನಿ ಅವರು ಬ್ಯಾಟ್ಸ್ ಮನ್ ಆಗಿ ಮಿಂಚಲು ಅವಕಾಶಗಳು ಕಡಿಮೆ ಇದ್ದಿದ್ದರಿಂದ ಅವರನ್ನು ಆಯ್ಕೆಗೆ ಪರಿಗಣಿಸಲಿಲ್ಲ ಎಂದಿದ್ದಾರೆ.
ಬೌಲಿಂಗ್ ಪಡೆಯಲ್ಲಿ ಅಪ್ಘಾನಿಸ್ತಾನದಿಂದ ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ ಅಲ್ಲದೆ ರವೀಂದ್ರ ಜಡೇಜರನ್ನು ಆಯ್ಕೆ ಮಾಡಿದ್ದಾರೆ.
ಹರ್ಷ ಭೋಗ್ಲೆ ಆಯ್ಕೆ ತಂಡ : ಶಿಖರ್ ಧವನ್, ರೋಹಿತ್ ಶರ್ಮ, ಅಂಬಟಿ ರಾಯುಡು, ಮುಶ್ಫಿಕರ್ ರಹೀಮ್, ಶೋಯೆಬ್ ಮಲೀಕ್, ಮೊಹಮ್ಮದ್ ನಬಿ, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬೂಮ್ರಾ, ರಶೀದ್ ಖಾನ್, ಮುಸ್ತಫಿಜುರ್ ರಹ್ಮಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications