ವಿಶ್ವಕಪ್‌ನ ಅತ್ಯುತ್ತಮ XI ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾ: ಕೊಹ್ಲಿಗೆ ನಾಯಕತ್ವ, ರೋಹಿತ್‌ಗಿಲ್ಲ ಸ್ಥಾನ!!
ಐಸಿಸಿ ವಿಶ್ವಕಪ್ ಟೂರ್ನಿ ನಕೌಟ್ ಹಂತವನ್ನು ಪ್ರವೇಶಿಸಿದೆ. ಗ್ರೂಪ್ ಹಂತದ ಎಲ್ಲಾ ಪಂದ್ಯಗಳು ಕೂಡ ಮುಕ್ತಾಯವಾಗಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭಾರತ ಪಡೆದುಕೊಂಡಿದೆ. ಟೀಮ್ ಇಂಡಿಯಾ ಜೊತೆಗೆ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ವಿಶ್ವಕಪ್‌ನ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.
ಟೀಮ್ ಇಂಡಿಯಾ ಈ ಬಾರಿಯ ವಿಶ್ವಕಪ್‌ನಲ್ಲಿ ಅಜೇಯವಾಗಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದು ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗೋಚರಿಸುತ್ತಿದೆ. ಈ ಹಂತದಲ್ಲಿ ಲೀಗ್ ಹಂತದ ಪ್ರದರ್ಶನವನ್ನು ಆಧಾರವಾಗಿಟ್ಟುಕೊಂಡು ಕ್ರಿಕೆಟ್ ಆಸ್ಟ್ರೇಲಿಯಾ ಟೂರ್ನಿಯ ಅತ್ಯುತ್ತಮ ಆಡುವ 11ರ ಬಳಗವನ್ನು ಪ್ರಕಟಿಸಿದೆ. ಇದರಲ್ಲಿ ನಿರೀಕ್ಷೆಯಂತೆಯೇ ಭಾರತೀಯ ಆಟಗಾರರೇ ಮೇಲುಗೈ ಸಾಧಿಸಿದ್ದು ನಾಲ್ವರು ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ.

ಟೀಮ್ ಇಂಡಿಯಾದ ನಾಲ್ಕು ಆಟಗಾರರು
ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿರುವ ಟೂರ್ನಿಯ ಅತ್ಯುತ್ತಮ ಆಡುವ 11ರ ಬಳಗದಲ್ಲಿ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಮೊಹಮ್ಮದ್ ಶನಿ, ಜಸ್ಪ್ರೀತ್ ಬೂಮ್ರಾ ಹಾಗೂ ರವೀಂದ್ರ ಜಡೇಜಾ ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ರೋಹಿತ್‌ಗಿಲ್ಲ ಸ್ಥಾನ, ಕೊಹ್ಲಿ ಕ್ಯಾಪ್ಟನ್
ಅಚ್ಚರಿಯ ವಿಚಾರವೆಂದರೆ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿರುವ ಈ ತಂಡದಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾಗೆ ಸ್ಥಾನ ದೊರೆತಿಲ್ಲ. ಬ್ಯಾಟರ್‌ಗಳ ಪೈಕಿ ವಿರಾಟ್ ಕೊಹ್ಲಿ ಮಾತ್ರವೇ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ವಿರಾಟ್ ಕೊಹ್ಲಿಗೆ ಈ ತಂಡದ ನಾಯಕತ್ವದ ಜವಾಬ್ಧಾರಿ ನೀಡಿರುವುದು ವಿಶೇಷ.
ಆಸ್ಟ್ರೇಲಿಯಾದಿಂದ ಮೂವರು ಆಟಗಾರರು
ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿರುವ ಈ ತಂಡದಲ್ಲಿ ಆಸ್ಟ್ರೇಲಿಯಾದಿಂದ ಮೂವರು ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ. ಆರಂಭಿಕನಾಗಿ ಡೇವಿಡ್ ವಾರ್ನರ್, ಆರನೇ ಕ್ರಮಾಂಖದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಸ್ಪಿನ್ನರ್ ಆಡಂ ಜಂಪಾ ಈ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಮೂವರು ಆಸಿಸ್ ಆಟಗಾರರಾಗಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ ಆರಂಭಿಕನಾಗಿ ವಾರ್ನರ್ ಜೊತೆಗೆ ಹೆಸರಿಸಲ್ಪಟ್ಟಿದ್ದಾರೆ. ಮೂರನೇ ಕ್ರಮಾಂಕದಲ್ಲಿ ರಚಿನ್ ರವೀಂದ್ರ ಹೆಸರಿಸಲ್ಪಟ್ಟಿದ್ದರೆ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಹೆಸರಿಸಲ್ಪಟ್ಟಿದ್ದಾರೆ. ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಮ್ ಗ್ಲೆನ್ ಮ್ಯಾಕ್ಸ್‌ವೆಲ್ ಐದು ಹಾಗೂ ಆರನೇ ಕ್ರಮಾಂಕದಲ್ಲಿದ್ದಾರೆ. ಇನ್ನು ಬೌಲಿಂಗ್ ಆಲ್‌ರೌಂಡರ್‌ಗಳಾಗಿ ಮಾರ್ಕೋ ಜಾನ್ಸನ್ ಮತ್ತು ರವೀಂದ್ರ ಜಡೇಜಾ ಸ್ಥಾನ ಪಡೆದುಕೊಂಡಿದ್ದಾರೆ. ಆಡಂ ಜಂಪಾ ಸ್ಪಿನ್ನರ್ ಆಗಿದ್ದರೆ ಹೆಸರಿಸಲ್ಪಟ್ಟಿದ್ದರೆ ವೇಗಿಗಳಾದ ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ ಹಾಗೂ ದಿಲ್ಶನ್ ಮದುಶಂಕ(12ನೇ ಆಟಗಾರ) ಈ ತಂಡದಲ್ಲಿ ಸ್ಥಾನ ಪಡೆದ ವೇಗದ ಬೌಲರ್‌ಗಳಾಗಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದ ವಿಶ್ವಕಪ್ ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಡೇವಿಡ್ ವಾರ್ನರ್, ರಚಿನ್ ರವೀಂದ್ರ, ವಿರಾಟ್ ಕೊಹ್ಲಿ (ನಾಯಕ), ಏಡೆನ್ ಮಾರ್ಕ್ರಾಮ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕೊ ಜಾನ್ಸೆನ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಆಡಮ್ ಝಂಪಾ, ಜಸ್ಪ್ರೀತ್ ಬುಮ್ರಾ, ದಿಲ್ಶನ್ ಮಧುಶಂಕ (12ನೇ ಆಟಗಾರ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications