Yuzvendra Chahal On RCB: ಆರ್‌ಸಿಬಿ ವಿರುದ್ಧ ಕಿಡಿಕಾರಿದ ಯುಜ್ವೇಂದ್ರ ಚಹಾಲ್
ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಆಗಿದ್ದಾರೆ. ಅಲ್ಲದೆ, ಭಾರತ ತಂಡದ ಪರ ಅತಿ ಹೆಚ್ಚು ಟಿ20 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಯುಜ್ವೇಂದ್ರ ಚಹಾಲ್ ನಿವೃತ್ತಿಯಾದಾಗ ನಂತರ ಬಹುಶಃ ಭಾರತದ ಸ್ಪಿನ್-ಬೌಲಿಂಗ್ ಲೆಜೆಂಡ್‌ಗಳಲ್ಲಿ ಒಬ್ಬರು ಎಂದು ಕರೆಯಲ್ಪಡುತ್ತಾರೆ.
ಯುಜ್ವೇಂದ್ರ ಚಹಾಲ್ ಯಾವಾಗಲೂ ಖುಷಿ ಹಾಗೂ ಅದೃಷ್ಟ ರೀತಿಯ ಪಾತ್ರವಾಗಿರುತ್ತಾರೆ. ಚಹಾಲ್ ಹೆಚ್ಚಿನ ಕಠಿಣ ಪರಿಶ್ರಮದಿಂದ ಯಶಸ್ವಿಯಾದ ಬೌಲರ್ ಆಗಿದ್ದು, ಮೇಲಿನ ಅಂಕಿಅಂಶಗಳೇ ಅವರ ಕ್ರಿಕೆಟ್ ಸಾಧನೆಗಳನ್ನು ಪ್ರತಿಬಿಂಬಿಸುತ್ತವೆ.

ಚಹಾಲ್ ತಮ್ಮ ಕ್ರಿಕೆಟ್ ಪ್ರತಿಭೆಯ ಜೊತೆಗೆ, ಭಾರತೀಯ ಕ್ರಿಕೆಟ್ ಮಾತ್ರವಲ್ಲದೆ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ತಮಾಷೆಯ ಮತ್ತು ಪ್ರತಿಭಾವಂತ ಕ್ರಿಕೆಟಿಗನಾಗಿದ್ದಾರೆ. ಆದರೂ, ಈ ಕುಳ್ಳ ಮತ್ತು ತೆಳ್ಳನೆಯ ವ್ಯಕ್ತಿಯೂ ಕೆಲವೊಮ್ಮೆ ಕೋಪಗೊಳ್ಳುತ್ತಾನೆ.
2022ರ ಐಪಿಎಲ್ ಪಂದ್ಯಾವಳಿಗೂ ಮುನ್ನ ಸ್ಪರ್ಧೆಯಲ್ಲಿರುವ ಎಲ್ಲಾ ಎಂಟು ತಂಡಗಳು ಕೆಲವು ಆಟಗಾರರನ್ನು ಉಳಿಸಿಕೊಂಡು ಮತ್ತು ಇತರರನ್ನು ಬಿಡುಗಡೆ ಮಾಡಬೇಕಾಗಿ ಬಂದಾಗ, ಯುಜ್ವೇಂದ್ರ ಚಹಾಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಿಂದ ಕೈಬಿಡಲಾಯಿತು.
ಇದು ಅನೇಕ ಕ್ರಿಕೆಟ್ ಪಂಡಿತರು ಮತ್ತು ಆರ್‌ಸಿಬಿ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯಾಗಿತ್ತು. ಯುಜ್ವೇಂದ್ರ ಚಾಹಲ್ ಆರ್‌ಸಿಬಿ ತಂಡಕ್ಕಾಗಿ ಹಲವು ಪಂದ್ಯಗಳನ್ನು ಗೆದ್ದಿದ್ದಾರೆ. ಅಲ್ಲದೆ, ತವರು ಮೈದಾನ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮ್ಯಾನೇಜ್‌ಮೆಂಟ್‌ನಿಂದ ಯಾವುದೇ ಕರೆ ಪಡೆಯದೆ ಯುಜ್ವೇಂದ್ರ ಚಹಾಲ್ ಅವರನ್ನು ಕೈಬಿಟ್ಟಿದ್ದು ಕೋಪಕ್ಕೆ ಕಾರಣವಾಗಿತ್ತು.
ಇತ್ತೀಚಿನ ಸಂದರ್ಶನವೊಂದರಲ್ಲಿ ಯುಜ್ವೇಂದ್ರ ಚಾಹಲ್ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸುವ ಮೊದಲು ತಮ್ಮೊಂದಿಗೆ ಮಾತನಾಡದಿದ್ದಕ್ಕಾಗಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ.
"ನಾನು ಆರ್‌ಸಿಬಿ ತಂಡಕ್ಕಾಗಿ ಸುಮಾರು 140 ಪಂದ್ಯಗಳನ್ನು ಆಡಿದ್ದೇನೆ. ಆದರೆ ನಾನು ಆರ್‌ಸಿಬಿ ಮ್ಯಾನೇಜ್‌ಮೆಂಟ್‌ನಿಂದ ಸರಿಯಾದ ಸಂವಹನ ನಡೆಯಲಿಲ್ಲ. ಅವರು ನನಗಾಗಿ ಎಲ್ಲವನ್ನೂ ಮಾಡುತ್ತಾರೆ ಎಂದು ನನಗೆ ಭರವಸೆ ಇತ್ತು," ಎಂದರು.
"ಬಳಿಕ ನನಗೆ ತುಂಬಾ ಕೋಪ ಬಂದಿತು. ನಾನು 8 ವರ್ಷಗಳ ಕಾಲ ಆರ್‌ಸಿಬಿಗಾಗಿ ಆಡಿದ್ದೇನೆ. ಚಿನ್ನಸ್ವಾಮಿ ಸ್ಟೇಡಿಯಂ ನನ್ನ ಅಚ್ಚುಮೆಚ್ಚಿನ ಮೈದಾನ," ಎಂದು ರಣವೀರ್ ಅಲ್ಲಾಬಾಡಿಯಾ ಶೋನಲ್ಲಿ ಯುಜ್ವೇಂದ್ರ ಚಹಾಲ್ ತಿಳಿಸಿದ್ದಾರೆ.
ಐಪಿಎಲ್ ಹರಾಜು ಪ್ರಕ್ರಿಯೆ ಮುಗಿದು ಒಂದೂವರೆ ವರ್ಷ ಕಳೆದಿದೆ ಮತ್ತು ಯುಜ್ವೇಂದ್ರ ಚಹಾಲ್ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಸಂಘರ್ಷದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತಿರುವುದು ಇದೇ ಮೊದಲು ಎನ್ನಬಹುದು.
ಯುಜ್ವೇಂದ್ರ ಚಾಹಲ್ ಅವರ ಹೇಳಿಕೆಯಿಂದ ಆರ್‌ಸಿಬಿ ಫ್ರಾಂಚೈಸಿಗೆ ತಮ್ಮ ಸೇವೆಯ ಹೊರತಾಗಿಯೂ ಅವರೊಂದಿಗೆ ಸಂವಹನದ ಕೊರತೆಯ ಬಗ್ಗೆ ಚಹಾಲ್ ಹತಾಶೆ ಸ್ಪಷ್ಟವಾಗಿ ತೋರಿಸುತ್ತದೆ.
ಬಲಗೈ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಆ ಬಳಿಕ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಖರೀದಿಯಾದರು. ಐಪಿಎಲ್ 2022ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಮೊದಲ ಋತುವಿನಲ್ಲೇ ಚಹಾಲ್ 27 ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದರು.
ಇನ್ನು ಯುಜ್ವೇಂದ್ರ ಚಾಹಲ್ ಅವರು 2023ರ ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಗೆದ್ದರು. ಇನ್ನು ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಭಾರತದ ದೊಡ್ಡ ಭರವಸೆಯಾಗಿದ್ದಾರೆ. ಭಾರತದಲ್ಲೇ ನಡೆಯುವ ಐಸಿಸಿ ಟೂರ್ನಿಯಲ್ಲಿ ಯುಜ್ವೇಂದ್ರ ಚಾಹಲ್ ಹೇಗೆ ಆಡಲಿದ್ದಾರೆ ಎಂಬುದನ್ನು ನೋಡಲು ಕುತೂಹಲಕಾರಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications