Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ಗೆ ಕೊರೊನಾ ವೈರಸ್ ಭೀತಿ: ಪ್ರತಿಕ್ರಿಯಿಸಿದ ಬ್ರಿಜೇಶ್, ಗಂಗೂಲಿ

No threat to IPL due to coronavirus, we are keeping a tab: Brajesh Patel

ಬೆಂಗಳೂರು, ಮಾರ್ಚ್ 3: ವಿಶ್ವದಾದ್ಯಂತ ಜನರನ್ನು ಆತಂಕಕ್ಕೀಡುವ ಮಾಡಿರುವ ಮಾರಕ ಸೋಂಕು ಕೊರೊನಾ ವೈರಸ್‌ನಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ಗೆ ತೊಂದರೆಯೇನಿಲ್ಲ ಎಂದು ಐಪಿಎಲ್ ಆಡಳಿತ ಮಂಡಳಿಯ ಅಧ್ಯಕ್ಷ ಬ್ರಿಜೇಶ್ ಪಟೇಲ್ ಮಂಗಳವಾರ (ಮಾರ್ಚ್ 3) ತಿಳಿಸಿದ್ದಾರೆ.

ಐಪಿಎಲ್ ಟೂರ್ನಿ ನಿಗದಿಪಡಿಸಿದ ದಿನಾಂಕಕ್ಕೆ ನಡೆಯಲಿದೆ ಅದರಲ್ಲಿ ಬದಲಾವಣೆಯೇನಿಲ್ಲ. ಆದರೆ ಅಧಿಕಾರಿಗಳು ಈ ಬಗ್ಗೆ ನಿಗಾ ಇಡಲಿದ್ದಾರೆ ಎಂದು ಬ್ರಿಜೇಶ್ ಹೇಳಿದ್ದಾರೆ. ಮಾರ್ಚ್‌ 29ರಂದು ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿರುವ ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಕಾದಾಡಲಿವೆ.

ಕೊರೊನಾ ವೈರಸ್‌ನಿಂದ ಐಪಿಎಲ್‌ಗೆ ತೊಂದರೆಯಿದೆಯೇ ಎಂಬ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಬ್ರಿಜೇಶ್, 'ಐಪಿಎಲ್‌ಗೆ ಕೊರೊನಾ ವೈರಸ್ ಭೀತಿಯಿಲ್ಲ. ಆದರೆ ಆಗುಹೋಗುಗಳ ಬಗ್ಗೆ, ಸಂದರ್ಭಗಳ ಬಗ್ಗೆ ನಿಗಾ ಇಡುತ್ತಿದ್ದೇವೆ,' ಎಂದು ಉತ್ತರಿಸಿದ್ದಾರೆ.

ಬಿಸಿಸಿಐ ಅಧ್ಯಕ್ಷ, ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಐಪಿಎಲ್‌ಗೆ ಕೊರೊನಾ ವೈರಸ್ ಭೀತಿಯಿರುವ ವಿಚಾರವನ್ನು ತಳ್ಳಿ ಹಾಕಿದ್ದಾರೆ. 'ಭಾರತದಲ್ಲಿ ಅಂಥ ಆತಂಕವೇನಿಲ್ಲ. ಅದರ (ಕೊರೊನಾ ವೈರಸ್) ಬಗ್ಗೆ ಇನ್ನೂ ಯಾವುದೇ ಚರ್ಚೆಯೂ ನಡೆದಿಲ್ಲ,' ಎಂದು ಗಂಗೂಲಿ ಹೇಳಿದ್ದಾರೆ.

ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ದಕ್ಷಿಣ ಆಫ್ರಿಕಾ ತಂಡವೂ ನಿಗದಿಯಾಗಿರುವ ದಿನಾಂಕಕ್ಕೆ ಬರಲಿದೆ ಎಂದು ಬಿಸಿಸಿಐ ಮತ್ತೊಬ್ಬ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಭಾರತ-ದಕ್ಷಿಣ ಆಫ್ರಿಕಾ ಏಕದಿನ ಸರಣಿ ಮಾರ್ಚ್ 12ರಿಂದ ಆರಂಭಗೊಳ್ಳಲಿದೆ.

Story first published: Tuesday, March 3, 2020, 22:30 [IST]
Other articles published on Mar 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+