For Quick Alerts
ALLOW NOTIFICATIONS  
For Daily Alerts
 

ಚಿನ್ನಸ್ವಾಮಿಯಲ್ಲಿ ಇಲ್ಲ ವಿಜಯ್‌ ಹಜಾರೆ ಪಂದ್ಯ

ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾಲದಲ್ಲಿ ವಿಜಯ್‌ ಹಜಾರೆ ಟ್ರೋಫಿಯ ಪಂದ್ಯಗಳು ನಡೆಯುತ್ತಿವೇಯಾ ಎಂಬುದಕ್ಕೆ ಸ್ಪಷ್ಟ ಉತ್ತರ ಸಿಕ್ಕಿದೆ. ಕರ್ನಾಟಕದ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಕನಸಿಗೆ ಪೆಟ್ಟು ಬಿದ್ದಿದೆ. ರಾಜ್ಯ ಗೃಹ ಇಲಾಖೆ ಚಿನ್ನಸ್ವಾಮಿಯಲ್ಲಿ ವಿಜಯ್‌ ಹಜಾರೆ ಟ್ರೋಫಿಯ ಅನುಮತಿ ನಿರಾಕರಿಸಿದೆ. ಡಿಸೆಂಬರ್‌ 24ರ ಬುಧವಾರ ನಡೆಯಬೇಕಿದ್ದ ಪಂದ್ಯದಲ್ಲಿ ದೆಹಲಿ ಹಾಗೂ ಆಂಧ್ರಾ ತಂಡಗಳು ಕಾದಾಟ ನಡೆಸಬೇಕಿದ್ದವು. ವಿಜಯ್ ಹಜಾರೆ ಟ್ರೋಫಿಯಲ್ಲಿ 15 ವರ್ಷಗಳ ಬಳಿಕ ವಿರಾಟ್‌ ಕೊಹ್ಲಿ ಕಣಕ್ಕೆ ಇಳಿಯಲಿದ್ದು, ಅಭಿಮಾನಿಗಳು ಈ ಪಂದ್ಯದ ಮೇಲೆ ಚಿತ್ತ ನೆಟ್ಟಿದ್ದರು. ಭದ್ರತೆಯ ದೃಷ್ಟಿಯಿಂದ ಈ ಪಂದ್ಯವನ್ನು ಆಡಿಸಲು ಅನುಮತಿ ನೀಡಲಾಗಿಲ್ಲ ಎಂದು ಕೆಎಸ್‌ಸಿಎ ತಿಳಿಸಿದೆ.

ಈ ಬಗ್ಗೆ ಪೊಲೀಸ್‌ ಕಮೀಷನರ್‌ ಸೀಮಂತ್ ಕುಮಾರ್ ಸಿಂಗ್‌ ಹೇಳಿಕೆ ನೀಡಿದ್ದಾರೆ. ಬುಧವಾರ ಚಿನ್ನಸ್ವಾಮಿಯಲ್ಲಿ ದೆಹಲಿ ಹಾಗೂ ಆಂಧ್ರ ನಡುವಣ ವಿಜಯ್‌ ಹಜಾರೆ ಟ್ರೋಫಿಯ ಪಂದ್ಯ ನಡೆಯಬೇಕಿತ್ತು. ಆದರೆ ಕೆಎಸ್‌ಸಿಎ ಸರ್ಕಾರ ನೀಡಿರುವ ಮಾನದಂಡಗಳನ್ನು ಕೆಎಸ್‌ಸಿಎ ಪಾಲಿಸಬೇಕಾಗುತ್ತದೆ. ಹೀಗಾಗಿಯೇ ಪಂದ್ಯಗಳನ್ನು ನಡೆಸಲು ಅನುಮತಿ ನೀಡಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಸೋಮವಾರ ಪೊಲೀಸರ ಸಮಿತಿ ಹಾಗೂ ಕೆಎಸ್‌ಸಿಎ ಅಧಿಕಾರಿಗಳ ಸಭೆ ನಡೆದಿತ್ತು.

No Vijay Hazare Trophy at Chinnaswamy Police Deny Permission for Delhi vs Andhra Match

ಇತ್ತೀಚಿಗೆ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್ ಅವರು ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿತ್ತು. ಈ ಮನವಿಗೆ ಮನ್ನಣೆ ನೀಡಿದ ಸರ್ಕಾರ ಉಪಸಮಿತಿಯನ್ನು ರಚಿಸಿ ಕಾಲ್ತುಳಿತದ ಬಳಿಕ ಕೈಗಳೊಳ್ಳಲಾಗಿರುವ ಕ್ರಮದ ಬಗ್ಗೆ ಪರಿಶೀಲನೆ ನಡೆಸಿದರು. ಈ ಸಮಿತಿ ಚಿನ್ನಸ್ವಾಮಿ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿಯನ್ನು ನೀಡಿತ್ತು.

ಡಿಕೆಶಿ ಹೇಳಿದ್ದೇನು?

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಕ್ರಿಕೆಟ್‌ ಪಂದ್ಯ ನಡೆಸಲು ಅನುಮತಿ ನಿರಾಕರಿಸಿದಕ್ಕೆ ಡಿಕೆ ಶಿವಕುಮಾರ್ ಸಹ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಬೆಂಗಳೂರಿನಲ್ಲಿ ಕ್ರಿಕೆಟ್‌ ನಡೆಸಬೇಕು ಎಂದು ಬಯಸುವವನು. ಬೆಂಗಳೂರಿನ ಗೌರವ ಉಳಿಸಬೇಕು ಎನ್ನುವುದು ನಮ್ಮ ಉದ್ದೇಶ. ಅನುಮೃತಿ ಸಿಗದೇ ಇರುವುದರ ಬಗ್ಗೆ ನಾನು ಗೃಹ ಸಚಿವರೊಂದಿಗೆ ಮಾತನಾಡುವೆ ಎಂದು ತಿಳಿಸಿದ್ದಾರೆ.

ಸಿಎಂ ಹೇಳಿದ್ದು ಇಷ್ಟು..

ನ್ಯಾ.ಕುನ್ಹಾ ತನಿಖಾ ವರದಿ ಅನ್ವಯವಾಗುವರೆಗೂ ಪಂದ್ಯ ಆಯೋಜನೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಸಿಎಂ ಸಿದ್ಧರಾಮಯ್ಯ ಸ್ಪಷ್ಟ ಪಡಿಸಿದ್ದಾರೆ.

ಆರ್‌ಸಿಬಿ ವಿಕ್ಟರಿ ಪರೇಡ್‌ ವೇಳೆ ನಡೆದ ಕಾಲ್ತುಳಿತದಲ್ಲಿ ಅಪಾರ ಸಂಖ್ಯೆ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿದ್ದರು. ಇದರಿಂದ ಚಿನ್ನಸ್ವಾಮಿ ಮೈದಾನಕ್ಕೆ ಕಪ್ಪುಚುಕ್ಕೆಯೊಂದು ಅಂಟಿತು. ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳು ನಡೆಯಬೇಕಾದಲ್ಲಿ ನ್ಯಾ.ಕುನ್ಹಾ ಅವರದಿಯನ್ನು ಅನುಷ್ಠಾನಕ್ಕೆ ತರುವಂತೆ ಸೂಚಿಸಲಾಗಿತ್ತು. ಅಲ್ಲದೆ ಅಭಿಮಾನಿಗಳ ಹಿತದ ದೃಷ್ಟಿಯಿಂದ ಪೊಲೀಸ್‌ ಇಲಾಖೆ 17 ಅಂಗಳಗಳ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚನೆ ನೀಡಿತ್ತು. ಈ ಅಂಶಗಳು ಕಾರ್ಯರೂಪಕ್ಕೆ ತರುವುದೇ ಸದ್ಯ ಕೆಎಸ್‌ಸಿಎ ಮುಂದಿರುವ ದೊಡ್ಡ ಸವಾಲಾಗಿದೆ.

Story first published: Tuesday, December 23, 2025, 15:10 [IST]
Other articles published on Dec 23, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+