ಗೇಲಿ ಮಾಡಿದವರಿಗೆ ತಕ್ಕ ಉತ್ತರ ನೀಡಿದ ಮೊಹಮ್ಮದ್ ಕೈಫ್
ನವದೆಹಲಿ, ಮೇ 19: ನಿವೃತ್ತ ಸೇನಾಧಿಕಾರಿ ಕುಲಭೂಷಣ್ ಜಾಧವ್ ಅವರ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ಕೋರ್ಟಿನಲ್ಲಿ ತಡೆ ಸಿಕ್ಕ ಸಂಭ್ರಮಾಚರಣೆಯನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ ಕ್ರಿಕೆಟರ್ ಕೈಫ್ ರನ್ನು ಗೇಲಿ ಮಾಡಿದ ಪ್ರಸಂಗ ನಡೆದಿದೆ.
ಆದರೆ, ಕಿಡಿಗೇಡಿಗಳಿಗೆ ಕೈಫ್ ತಕ್ಕ ಉತ್ತರ ನೀಡಿದ್ದು, ಟೀಕಾಕಾರರು ಬಾಯ್ಮುಚ್ಚುವಂತೆ ಮಾಡಿದ್ದಾರೆ.

ಜಾತಿ, ಧರ್ಮ, ಮತ, ಪಂಥಗಳಿಗಿಂತ ದೇಶ ಮೊದಲು ಎಂಬ ಪಾಠ ಮಾಡಿದ್ದಾರೆ. ಕೈಫ್ ಅವರ ಸರಣಿ ಟ್ವೀಟ್ ಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಅವರ ಪರ ತೀರ್ಪು ಬಂದಿದ್ದಕ್ಕೆ ಇಡೀ ದೇಶವೇ ಸಂತಸಪಟ್ಟಿದೆ. ಇದೇ ಖುಷಿಯಲ್ಲಿ ಇಂಡಿಯಾಕ್ಕೆ ಶುಭವಾಗಲಿ, ಗೆಲುವು ಸಿಕ್ಕಿದೆ ಎಂಬರ್ಥದಲ್ಲಿ ಕೈಫ್ ಟ್ವೀಟ್ ಮಾಡಿದ್ದರು.
ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವರು, ಕೈಫ್ ಅವರು ತಮ್ಮ ಹೆಸರಿನಲ್ಲಿ 'ಮೊಹಮ್ಮದ್' ಹೆಸರನ್ನು ಕಳಚಿ ನಂತರ ಟ್ವೀಟ್ ಮಾಡಿ ಎಂದಿದ್ದರು. ಸೆಹ್ವಾಗ್ ಅವರ ಟ್ವೀಟ್ ಗೂ ಆಕ್ಷೇಪಗಳು ಕೇಳಿ ಬಂದಿತ್ತು.
ಇದಕ್ಕೆ ಉತ್ತರ ನೀಡಿರುವ ಕೈಫ್, ದೇಶದಲ್ಲಿ ಅಸಹಿಷ್ಣುತೆ ಹರಡುವ ಮುನ್ನ ದೇಶ ಮೊದಲು ನಂತರ ಮಿಕ್ಕ ಎಲ್ಲಾ ವಿಚಾರ ಎಂಬುದನ್ನು ಕಾಣಿರಿ, ಯಾವುದೇ ಧರ್ಮಕ್ಕಾಗಲಿ, ಯಾವುದೇ ಹೆಸರಿಗಾಗಲಿ ಯಾರೂ ಪಾಳೆಗಾರರಿಲ್ಲ ಎಂದಿದ್ದಾರೆ.
Story first published: Wednesday, January 3, 2018, 10:04 [IST]
Other articles published on Jan 3, 2018
Read in English: See how Kaif clean bowled a Pak troll
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications