Purple Cap: ರೋಚಕತೆ ಹೆಚ್ಚಿಸಿದೆ ಪರ್ಪಲ್ ಕ್ಯಾಪ್ ರೇಸ್: ಈ ಪಟ್ಟಿಯಲ್ಲಿ ಕನ್ನಡಿಗನಿಗೂ ಸ್ಥಾನ
ಈ ಬಾರಿಯ ಐಪಿಎಲ್ ಹಾಫ್ ವೇ ಮಾರ್ಕ್ ಹತ್ತಿರ ಬರುತ್ತಿದೆ. ಈ ವೇಳೆ ಆಟಗಾರರು ತಮ್ಮ ಪ್ರದರ್ಶನದ ಬಲದಿಂದ ತಂಡದ ಗೆಲುವಿನಲ್ಲಿ ತಮ್ಮದೇ ಆದ ಕಾಣಿಕೆ ನೀಡುತ್ತಿದ್ದಾರೆ. ಇನ್ನು ಹಲವು ಆಟಗಾರರು ಇನ್ನು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಈ ವೇಳೆ ಸಿಕ್ಕ ಅವಕಾಶದಲ್ಲಿ ಮಿಂಚಿ ಗಮನ ಸೆಳೆದಿರುವ ಬೌಲರ್‌ಗಳು ವಿಕೆಟ್ ಬೇಟೆ ನಡೆಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಸದ್ಯ ಪರ್ಪಲ್ ಕ್ಯಾಪ್ ಯಾರ ಬಳಿ ಇದೆ ಎಂಬ ಬಗ್ಗೆ ವರದಿ ಇಲ್ಲಿದೆ.
ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಆಟಗಾರರಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇದರಲ್ಲಿ ಪ್ರಮುಖವಾಗಿ ಎದ್ದು ಕಾಣುವ ಪ್ರಶಸ್ತಿಗಳು ಎಂದರೆ ಆರೆಂಜ್ ಕ್ಯಾಪ್ ಹಾಗೂ ಪರ್ಪಲ್ ಕ್ಯಾಪ್ ಪಡೆದಿರುವ ಆಟಗಾರರ ಮೇಲೆ ಎಲ್ಲರ ಚಿತ್ತ ನೆಟ್ಟಿರುತ್ತದೆ. ಈ ವೇಳೆ ಈ ಬಾರಿ ಆರೇಂಜ್ ಕ್ಯಾಪ್‌ನಲ್ಲಿ ಯುವ ಹಾಗೂ ಅನುಭಬಿ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಿದ್ದು ಈ ಕ್ಯಾಪ್ ಮೇಲೆ ಕಣ್ಣು ನೆಟ್ಟಿದ್ದಾರೆ. ಇನ್ನು ಪರ್ಪಲ್ ಕ್ಯಾಪ್ ಮೇಲೆ ಹಲವು ಆಟಗಾರರು ಕಣ್ಣು ನೆಟ್ಟಿದ್ದಾರೆ.

ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ನಾಲ್ವರು ಭಾರತೀಯ ಆಟಗಾರರು ಇದ್ದಾರೆ. ಅಲ್ಲೆದ ಈ ರೇಸ್‌ನಲ್ಲಿ ಒಬ್ಬ ಕನ್ನಡಿಗ ಇರುವುದ ಸಹ ಹೆಮ್ಮೆಯ ವಿಚಾರ. ಈ ವರೆಗೆ ನಡೆದ ಪಂದ್ಯದಲ್ಲಿ ನೂರ್ ಅಹ್ಮದ್ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದ್ದಾರೆ. ಇವರು ಆಡಿದ 6 ಪಂದ್ಯಗಳಲ್ಲಿ 12 ವಿಕೆಟ್ ಕಬಳಿಸಿದ್ದಾರೆ. ಇನ್ನು ಗುಜರಾತ್ ಜೈಂಟ್ಸ್ ತಂಡದ ಪರ ಆಡು ಕರ್ನಾಟಕದ ಸ್ಟಾರ್ ಆಟಗಾರ ಪ್ರಸಿದ್ಧ ಕೃಷ್ಣ ಸಹ ಪರ್ಪಲ್ ಕ್ಯಾಪ್ ರೇಸ್‌ನಲ್ಲಿದ್ದಾರೆ. ಇವರು ಆಡಿದ 5 ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿ ಭರವಸೆ ಮೂಡಿಸಿದ್ದಾರೆ.
ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್
ನೂರ್ ಅಹ್ಮದ್, ಸಿಎಸ್‌ಕೆ, 6 ಪಂದ್ಯ, 12 ವಿಕೆಟ್
ಶಾರ್ದೂಲ್ ಠಾಕೂರ್, ಎಲ್‌ಎಸ್‌ಜಿ, 6 ಪಂದ್ಯ, 11 ವಿಕೆಟ್
ಕುಲ್‌ದೀಪ್ ಯಾದವ್, ಡಿಸಿ, 5 ಪಂದ್ಯ, 10 ವಿಕೆಟ್
ಹಾರ್ದಿಕ್ ಪಾಂಡ್ಯ, ಎಂಐ, 5 ಪಂದ್ಯ, 10 ವಿಕೆಟ್
ಪ್ರಸಿದ್ಧ ಕೃಷ್ಣ, ಜಿಟಿ, 5 ಪಂದ್ಯ, 10 ವಿಕೆಟ್

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಕೀರ್ತಿ ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್‌ಗಡ ಸಲ್ಲುತ್ತದೆ. ಇವರು ಆಡಿದ 6 ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದಾರೆ. ಇನ್ನು ಇಷ್ಟೇ ಪಂದ್ಯಗಳನ್ನು ಆಡಿದ ಕೃನಾಲ್ ಪಾಂಡ್ಯ 8 ವಿಕೆಟ್ ಕಬಳಿಸಿದ್ದಾರೆ.
ಈ ಬಾರಿಯ ಐಪಿಎಲ್‌ನಲ್ಲಿ ಬೆಸ್ಟ್ ಎಕನಾಮಿ ಹೊಂದಿರುವ ಬೌಲರ್ಸ್
ಮೋಯಿನ್ ಅಲಿ, ಕೆಕೆಆರ್, 3 ಪಂದ್ಯ, 5.37 ಎಕನಾಮಿ
ಕುಲ್‌ದೀಪ್ ಯಾದವ್, ಡಿಸಿ, 5 ಪಂದ್ಯ, 5.60 ಎಕನಾಮಿ
ವರುಣ್ ಚಕ್ರವರ್ತಿ, ಕೆಕೆಆರ್, 6 ಪಂದ್ಯ, 6.39 ಎಕನಾಮಿ
ಪ್ರಸಿದ್ಧ ಕೃಷ್ಣ, ಜಿಟಿ, 6 ಪಂದ್ಯ, 6.95 ಎಕನಾಮಿ
ರಿಯಾನ್ ಪರಾಗ್, ಆರ್‌ಆರ್, 6 ಪಂದ್ಯ, 7.00 ಎಕನಾಮಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications