For Quick Alerts
ALLOW NOTIFICATIONS  
For Daily Alerts
 

Winter Olympics: ಅತಿ ಹೆಚ್ಚು ಚಿನ್ನದ ಪದಕ ಗೆದ್ದ ದಾಖಲೆ ಬರೆದ ನಾರ್ವೆ

ನಾರ್ವೆಯ ಆಟಗಾರ ಜೋಹಾನ್ಸ್ ಡೇಲ್-ಸ್ಕಜೆವ್ಡಾಲ್ ಅವರು ಪುರುಷರ 15 ಕಿ.ಮೀ ಮಾಸ್ ಸ್ಟಾರ್ಟ್ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುತ್ತಿದಂತೆ ತಂಡದಲ್ಲಿ ಸಡಗರ ಮನೆ ಮಾಡಿತು. ಜೋಹಾನ್ಸ್ ಡೇಲ್-ಸ್ಕಜೆವ್ಡಾಲ್ ಅವರು ವೈಯಕ್ತಿಕ ಚಿನ್ನದ ಸಾಧನೆ ಮಾಡುವುದರ ಜೊತೆಗೆ ನಾರ್ವೆ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಬಂಗಾರದ ಗೆದ್ದ ಕೀರ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ನಾರ್ವೆ ಒಂದೇ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ತನ್ನದೇ ದಾಖಲೆಯನ್ನು ಅಳಿಸಿ ಹಾಕಿದೆ. ಇದಕ್ಕೂ ಮೊದಲು ನಾರ್ವೆ 2022ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ನಾರ್ವೆ 16 ಚಿನ್ನದ ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿತ್ತು.

ನಾರ್ವೆಯ ಕ್ರಾಸ್-ಕಂಟ್ರಿ ಸ್ಕೀಯಿಂಗ್ ಹೋಸ್ಫ್ಲೋಟ್ ಕ್ಲಾಬೊ ಈ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಅತ್ಯಂತ ಯಶಸ್ವಿ ಅಥ್ಲೀಟ್‌ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇವರು ಈ ಒಲಿಂಪಿಕ್ಸ್‌ನಲ್ಲಿ ಒಟ್ಟು 5 ಚಿನ್ನದ ಪದಕವನ್ನು ಗೆದ್ದು ಬೀಗಿದ್ದಾರೆ. ಈ ಮೂಲಕ ಒಲಿಂಪಿಕ್ಸ್‌ನಲ್ಲಿ 10 ಚಿನ್ನದ ಪದಕಗಳ ಒಡೆಯರಾಗಿದ್ದಾರೆ. ಡೇಲ್-ಸ್ಕ್ಜೆವ್ಡಾಲ್ ಕ್ಲೀನ್ ಶೂಟಿಂಗ್ ಮೂಲಕ ಮುನ್ನಡೆ ಸಾಧಿಸಿದರು. ಇವರು ಐದು ಲ್ಯಾಪ್‌ಗಳ ರೇಸ್‌ನ್ನು 39 ನಿಮಿಷ 17.1 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು. ಇನ್ನೊಬ್ಬ ಆಟಗಾರ ಸ್ಟರ್ಲಾ ಹೋಮ್ ಲೇಗ್ರೀಡ್ ಕೂದುಲೆಳೆಯ ಅಂತರದಲ್ಲಿ ಬಂಗಾರವನ್ನು ಕೈ ಚೆಲ್ಲಿದರು. ಇದು ಈ ಓಲಿಂಪಿಕ್ಸ್‌ನ ಕ್ರೀಡಾಕೂಟದ ಅವರ ಐದನೇ ಪದಕವಾಗಿದೆ.

Norway

ನಾರ್ವೆ 37 ಪದಕಗಳೊಂದಿಗೆ ಪದಕಗಳ ಎಣಿಕೆಯಲ್ಲಿ ಅಗ್ರಸ್ಥಾನದಲ್ಲಿದೆ. ಇದರಲ್ಲಿ 17 ಚಿನ್ನ, 10 ಬೆಳ್ಳಿ, 10 ಕಂಚಿನ ಪದಕವನ್ನು ಗೆದ್ದಿದೆ. ಈ ಪಟ್ಟಿಯಲ್ಲಿ ಅಮೆರಿಕ ಎರಡನೇ ಸ್ಥಾನದಲ್ಲಿದೆ. ಇವರು 9 ಬಂಗಾರ, 12 ಬೆಳ್ಳಿ, 6 ಕಂಚಿನ ಪದಕ ಸೇರಿದಂತೆ ಒಟ್ಟು 27 ರನ್‌ ಸಿಡಿಸಿದರು. ಇಟಲಿ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

Story first published: Friday, February 20, 2026, 22:51 [IST]
Other articles published on Feb 20, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+