ಎಬಿಡಿಗೆ ಅಲ್ಲ, ಆರ್‌ಸಿಬಿಯ ಆ ಆಟಗಾರನಿಗೆ ಪಂದ್ಯಶ್ರೇಷ್ಠ ನೀಡಬೇಕಿತ್ತು ಎಂದ ಬೆನ್ ಸ್ಟೋಕ್ಸ್

ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಯ ಪ್ರಮುಖ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಅದ್ಭುತ ಪ್ರದರ್ಶನವನ್ನು ನೀಡಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. 33 ಎಸೆತಗಳನ್ನು ಎದುರಿಸಿದ ಎಬಿ ಡಿವಿಲಿಯರ್ಸ್ ಅಜೇಯ 72 ರನ್‌ಗಳನ್ನು ಬಾರಿಸಿದ್ದರು. ಈ ಸಾಧನೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು ಎಬಿಡಿ.
ಆದರೆ ರಾಜಸ್ಥಾನ್ ರಾಯಕ್ಸ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಎಬಿ ಡಿವಿಲಿಯರ್ಸ್‌ಗಿಂತಲೂ ಇನ್ನೋರ್ವ ಆಟಗಾರ ಅತ್ಯಂತ ಹೆಚ್ಚು ಅರ್ಹರಾಗಿದ್ದರು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಬ್ಯಾಟರ್‌ಗಳ ಆ ಬೌಲರ್ ನೀಡಿದ ಪ್ರದರ್ಶನ ಅದ್ಭುತವಾಗಿತ್ತು ಎಂದು ಸ್ಟೋಕ್ಸ್ ಕೊಂಡಾಡಿದ್ದಾರೆ.
ಹಾಗಾದರೆ ಸ್ಟೋಕ್ಸ್ ಹೊಗಳಿದ ಆ ಆಟಗಾರ ಯಾರು ಮುಂದೆ ಓದಿ..

ಬ್ಯಾಟ್ಸ್‌ಮನ್‌ಗಳ ನೆಚ್ಚಿನ ತಾಣ ಶಾರ್ಜಾ
ಸ್ಟೋಕ್ಸ್ ಎಬಿಡಿಗಿಂತ ಓರ್ವ ಬೌಲರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹ ಎನ್ನಲು ಕಾರಣವೂ ಇದೆ. ಕೆಕೆಆರ್ ಹಾಗೂ ಆರ್‌ಸಿವಿ ವಿರುದ್ಧದ ಪಂದ್ಯ ನಡೆದಿದ್ದು ಬ್ಯಾಟ್ಸ್‌ಮನ್‌ಗಳ ಸ್ವರ್ಗವೆನಿಸಿರುವ ಶಾರ್ಜಾ ಕ್ರೀಡಾಂಗಣದಲ್ಲಿ. ಇತರ ಕ್ರೀಡಾಂಗಣಗಳಿಗೆ ಹೋಲಿಸಿದರೆ ಚಿಕ್ಕ ಗಾತ್ರವನ್ನು ಹೊಂದಿರುವ ಈ ಕ್ರೀಡಾಂಗಣದಲ್ಲಿ ಬೌಲರ್‌ಗಳು ದಂಡನೆಗೆ ಒಳಗಾಗುವುದು ತೋರಾ ಸಾಮಾನ್ಯವೇ ಆಗಿಬಿಟ್ಟಿದೆ. ಮಧ್ಯೆಯೂ ಆರ್‌ಸಿಬಿಯ ಆ ಬೌಲರ್ ಅದ್ಭುತ ಯಶಸ್ಸು ಸಾಧಿಸಿದ್ದರು.

ಯಾರು ಆ ಬೌಲರ್?
ಬೆನ್ ಸ್ಟೋಕ್ಸ್ ಹೇಳಿದ ಆ ಬೌಲರ್ ಬೇರೆ ಯಾರೂ ಅಲ್ಲ. ಅದು ಆರ್‌ಸಿಬಿ ಪ್ರಮುಖ ಸ್ಪಿನ್ ಅಸ್ತ್ರ ಯುಜುವೇಂದ್ರ ಚಾಹಲ್. ನಾಲ್ಕು ಓವರ್‌ಗಳನ್ನು ಎಸೆದ ಯುಜಿ ಅದ್ಭುತ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾದರು. ಒಂದು ವಿಕೆಟ್ ಪಡೆದ ಚಾಹಲ್ ನೀಡಿದ್ದು ಕೇವಲ 12 ರನ್ ಮಾತ್ರ. ಶಾರ್ಜಾ ಕ್ರೀಡಾಂಗಣದಲ್ಲಿ ಇದು ಸಣ್ಣ ಸಾಧನೆ ಖಂಡಿತಾ ಅಲ್ಲ.
"ಚಾಹಲ್‌ಗೆ ಪಂದ್ಯಶ್ರೇಷ್ಠ ನೀಡಬೇಕಿತ್ತು"
ಪಂದ್ಯದ ಮುಕ್ತಾಯದ ಕೆಲವೇ ಕ್ಷಣಗಳಲ್ಲಿ ಬೆನ್ ಸ್ಟೋಕ್ಸ್ ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡರು. "ಬ್ಯಾಟರ್‌ಗಳ ಈ ಆಟದಲ್ಲಿ ಯುಜುವೇಂದ್ರ ಚಾಹಲ್ ನಿಜಕ್ಕೂ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆಯಬೇಕಾಗಿತ್ತು. ಶಾರ್ಜಾ ಕ್ರೀಡಾಂಗಣದಲ್ಲಿ ಇದು ಊಹೆಗೂ ಮೀರಿದ ಪ್ರದರ್ಶನ" ಎಂದು ಬರೆದುಕೊಂಡಿದ್ದಾರೆ.

ಉತ್ತಮ ಫಾರ್ಮ್‌ನಲ್ಲಿ ಚಾಹಲ್
ಆರ್‌ಸಿಬಿ ಪರವಾಗಿ ಕಣಕ್ಕಿಲೀಯುವ ಚಾಹಲ್ ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಆಡಿರುವ 7 ಪಂದ್ಯಗಳಲ್ಲಿ ಚಾಹಲ್ 10 ವಿಕೆಟ್ ಕಿತ್ತಿದ್ದಾರೆ. ಇದರಲ್ಲಿ ಎರಡು ಪಮದ್ಯಗಳಲ್ಲಿ 3 ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಮುಂಬೈ ವಿರುದ್ಧ ದುಬಾರಿಯಾಗಿದ್ದು ಹೊರತು ಪಡಿಸಿದರೆ ಚಾಹಲ್ ಎಕಾನಮಿ ರೇಟ್ ಅದ್ಭುತವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications