ಬುಮ್ರಾ ಅಲ್ಲ ಮುಂಬೈ ತಂಡದ ಎಕ್ಸ್-ಫ್ಯಾಕ್ಟರ್ ಬೌಲರ್ ಈ ಯುವ ಬೌಲರ್
19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಿದ್ದು, ಮುಂಬೈ ಇಂಡಿಯನ್ಸ್ ಶುಭಾರಂಭ ಮಾಡಿದೆ. ಈ ಲೀಗ್‌ನ ಎರಡನೇ ಪಂದ್ಯವನ್ನು ಮುಂಬೈ ಶನಿವಾರ ಆಡಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಲೀಗ್‌ನಲ್ಲಿ ಎರಡನೇ ಗೆಲುವಿನ ನಗೆ ಬೀರಲು ಮುಂಬೈ ಯೋಜನೆ ರೂಪಿಸಿಕೊಂಡಿದೆ. ಎರಡನೇ ಪಂದ್ಯಕ್ಕೂ ಮುನ್ನ ಮುಂಬೈ ತಂಡದ ಕೋಚ್ ಮಹೇಲ್ ಜಯವರ್ಧನೆ ದೊಡ್ಡ ಹೇಳಿಕೆ ನೀಡಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಋತುವಿನ ಎರಡನೇ ಪಂದ್ಯವನ್ನು ಮುಂಬೈ ಆಡಲಿದೆ. ಈ ಪಂದ್ಯದಲ್ಲಿ ಜಯವನ್ನು ಸಾಧಿಸುವುದು ಹಾರ್ದಿಕ್ ಪಾಂಡ್ಯ ಪಡೆಗೆ ಸುಲಭವಲ್ಲ. ಆದರೆ ಸ್ಥಿರ ಪ್ರದರ್ಶನ ನೀಡುವ ವಿಶ್ವಾಸವನ್ನು ತಂಡ ಹೊಂದಿದೆ. ಈ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ತಮ್ಮ ತಂಡದ ಎಕ್ಸ್-ಫ್ಯಾಕ್ಟರ್ ಆಟಗಾರ 20 ವರ್ಷದ ಅಫ್ಘಾನ್ ಸ್ಪಿನ್ನರ್ ಅಲ್ಲಾ ಗಜನ್‌ಫರ್ ಎಂದು ತಿಳಿಸಿದ್ದಾರೆ.

ಅಫ್ಘಾನಿಸ್ತಾನ ತಂಡದ ಯುವ ಬೌಲರ್ ಅಲ್ಲಾ ಗಜನ್‌ಫರ್ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರನ್ ನೀಡಿ ಕೈ ಸುಟ್ಟುಕೊಂಡಿದ್ದರು. ಇವರು ಮಾಡಿದ 4 ಓವರ್‌ಗಳಲ್ಲಿ 51 ರನ್ ಬಿಟ್ಟುಕೊಟ್ಟಿದ್ದರು. ಇವರು ಮೊದಲ ಪಂದ್ಯದಲ್ಲಿ ರನ್‌ಗಳನ್ನು ಹೆಚ್ಚು ನೀಡಿ ಕೈ ಸುಟ್ಟುಕೊಂಡಿದ್ದರು ಸಹ ಮುಂಬೈ ಕೋಚ್ ಇವರ ಬೆನ್ನಿಗೆ ನಿಂತಿದ್ದು ಅವರನ್ನು ಸಮರ್ಥಿಸಿಕೊಂಡಿದ್ದಾರೆ. "ಅವರು ಭವಿಷ್ಯದ ಆಟಗಾರ. ಅವರಲ್ಲಿ ಎದುರಾಳಿಗಳನ್ನು ಕಟ್ಟಿ ಹಾಕಬಲ್ಲ ಸಾಮರ್ಥ್ಯವಿದೆ. ಮುಂಬರುವ ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಕೆಕೆಆರ್ ವಿರುದ್ಧ ಅವರು ನಾಲ್ಕು ಅಥವಾ ಐದು ಕೆಟ್ಟ ಎಸೆತಗಳನ್ನು ಮಾಡಿ ಕೈ ಸುಟ್ಟುಕೊಂಡಿದ್ದರು. ಆದರೂ ಅವರು ನಮ್ಮ ತಂಡದ ಎಕ್ಸ್-ಫ್ಯಾಕ್ಟರ್ ಎಂದು ತಿಳಿಸಿದ್ದಾರೆ.
ಈ ಲೀಗ್‌ನಲ್ಲಿ 10 ತಂಡಗಳನ್ನು ಆಡುವುದರಿಂದ ಸ್ಪರ್ಧೆಯು ಹೆಚ್ಚು ಕಠಿಣವಾಗಿದೆ. ಇದರ ಹೊರತಾಗಿಯೂ, ಕಳೆದ ಐದು ವರ್ಷಗಳಲ್ಲಿ ನಾವು ಎರಡು ಅಥವಾ ಮೂರು ಬಾರಿ ಪ್ಲೇಆಫ್ ತಲುಪುವಲ್ಲಿ ಯಶಸ್ವಿಯಾಗಿದ್ದೇವೆ. ತಂಡವಾಗಿ ನಾವು ಸ್ಥಿರ ಪ್ರದರ್ಶನ ನೀಡುತ್ತಿದ್ದೇವೆ ಎಂದು ಜಯವರ್ಧನೆ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಮುಂದಿನ ಪಂದ್ಯಗಳು
ಏಪ್ರಿಲ್ 4, ಡೆಲ್ಲಿ ಕ್ಯಾಪಿಟಲ್ಸ್, ಮಧ್ಯಾಹ್ನ 3.30ಕ್ಕೆ, ನವದೆಹಲಿ
ಏಪ್ರಿಲ್ 7, ರಾಜಸ್ಥಾನ ರಾಯಲ್ಸ್, ಸಂಜೆ 7.30ಕ್ಕೆ, ಗುವಾಹಟಿ
ಏಪ್ರಿಲ್ 12, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸಂಜೆ 7.30ಕ್ಕೆ, ಮುಂಬೈ
ಏಪ್ರಿಲ್ 16, ಪಂಜಾಬ್ ಕಿಂಗ್ಸ್, ಸಂಜೆ 7.30ಕ್ಕೆ, ಮುಂಬೈ
ಏಪ್ರಿಲ್ 20, ಗುಜರಾತ್ ಟೈಟಾನ್ಸ್, ಸಂಜೆ 7.30ಕ್ಕೆ, ಅಹಮದಾಬಾದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications