ಇಶಾಂತ್‌ರನ್ನು ಪ್ರಸಾದ್ ಅಟ್ಟಿಸಿಕೊಂಡು ಹೋಗಿದ್ದೇಕೆ?
ಕೊಲಂಬೋ, ಆಗಸ್ಟ್. 31: ಕ್ರಿಕೆಟ್ ಜಂಟಲ್ ಮನ್ ಗಳ ಆಟ ಎಂಬ ಶ್ರೇಯ ಕಳೆದುಕೊಂಡು ವರ್ಷಗಳೇ ಕಳೆದುಹೋಗಿದೆ. ಭಾರತ ಮತ್ತು ಶ್ರೀಲಂಕಾ ಮಧ್ಯೆ ನಡೆಯುತ್ತಿರುವ 3ನೇ ಟೆಸ್ಟ್ ನ ನಾಲ್ಕನೇ ದಿನ ಆಟಗಾರರ ನಡುವೆ ಚಕಮಕಿಯೊಂದದು ನಡೆದು ಹೋಗಿದೆ.
ಭಾರತದ ಇಶಾಂತ್ ಶರ್ಮಾ ಮತ್ತು ಶ್ರೀಲಂಕಾದ ಧಮಿಕಾ ಪ್ರಸಾದ್ ನಡುವೆ ಇಂಥದ್ದೊಂದು ಘರ್ಷಣೆ ನಡೆದಿದೆ. ಇಬ್ಬರ ನಡುವಿನ ಮಾತಿನ ಚಕಮಕಿ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು.[ಸಂಗಕ್ಕಾರ ಕೊನೆ ಟೆಸ್ಟ್ ನಲ್ಲಿ ಕೊಹ್ಲಿಗೆ ಮೊದಲ ಗೆಲುವು]

ಮೈದಾನದಲ್ಲಿ ಆರಂಭವಾದ ಗಲಾಟೆ ಡ್ರೆಸ್ಸಿಂಗ್ ರೂಮ್ ವರೆಗೆ ತಲುಪಿತು. ಕೊನೆಗೆ ಉಭಯ ತಂಡದ ಆಟಗಾರರ ಮಧ್ಯಪ್ರವೇಶದಿಂದ ಪರಿಸ್ಥಿತಿ ಹತೋಟಿಗೆ ಬಂದಿತು.
ಆಗಿದ್ದೇನು?
ಭಾರತದ ಎರಡನೇ ಇನಿಂಗ್ಸ್ ಬ್ಯಾಟಿಂಗ್ ನಡೆಯುತ್ತಿದ್ದ ವೇಳೆ ಇಶಾಂತ್ ಶರ್ಮಾ ಕ್ರೀಸ್ ನಲ್ಲಿದ್ದರು. ಈ ವೇಳೆ 76 ನೇ ಓವರ್ ಬೌಲಿಂಗ್ ಮಾಡಲು ಬಂದ ಪ್ರಸಾದ್ ಬೌನ್ಸರ್ ಎಸೆಯುತ್ತಿದ್ದರು. ನಿರಂತರವಾಗಿ 4 ಬೌನ್ಸರ್ ಎಸೆದಿದ್ದರು. ನಂತರ 5 ನೇ ಎಸೆತದಲ್ಲಿ ಇಶಾಂತ್ ಒಂದು ರನ್ ಕದ್ದರು. ಈ ವೇಳೆ ಬೌಲರ್ ಪ್ರಸಾದ್ ಮತ್ತು ಶರ್ಮಾ ನಡುವೆ ಮಾತಿನ ಚಕಮಕಿ ನಡೆಯಿತು.
ಆದರೆ ಗಲಾಟೆ ಇಲ್ಲಿಗೆ ಕೊನೆಯಾಗಲಿಲ್ಲ. ಅದೇ ಓವರ್ ನ ಕೊನೆ ಎಸೆತದಲ್ಲಿ ಆರ್ ಅಶ್ವಿನ್ ವಿಕೆಟ್ ಒಪ್ಪಿಸಿದರು. ಅಲ್ಲಿಗೆ ಭಾರತದ ಇನಿಂಗ್ಸ್ ಕೊನೆಗೊಂಡಿತ್ತು. ಭಾರತದ ಪರ ಬೌಲಿಂಗ್ ಎಸೆಯಲು ಶರ್ಮಾ ಪೆವಿಲಿಯನ್ ಕಡೆ ಓಡುತ್ತ ತೆರಳಿದರು. ಆದರೆ ಈ ವೇಳೆ ಪ್ರಸಾದ್ ಸಹ ಅವರನ್ನು ಬೆನ್ನಟ್ಟಿಕೊಂಡು ಹೋದರು.
ಡ್ರೆಸ್ಸಿಂಗ್ ರೂಂ ಗೆ ತೆರಳಿದ ಮೇಲೆ ಮತ್ತೆ ಇಬ್ಬರ ನಡುವೆ ಮತ್ತೆ ಮಾತುಕತೆ ಮುಂದುವರಿಯಿತು. ಭಾನುವಾರ ಸಹ ಇಶಾಂತ್ ಶರ್ಮಾ ಮತ್ತು ಶ್ರೀಲಂಕಾ ವಿಕೆಟ್ ಕೀಪರ್ ಕುಶಾಲ್ ಪರೇರಾ ನಡುವೆ ಮಾತುಕತೆ ನಡೆದಿತ್ತು. ಘಟನೆ ನಂತರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ. ಟ್ವಿಟರ್ ನಲ್ಲಿ ಜನರು ತಮ್ಮದೇ ಆತ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications