ಸಚಿನ್ ನಿಂದಲೂ ಆಗದ್ದನ್ನು ಕೊಹ್ಲಿ ಮಾಡುತ್ತಿದ್ದಾರೆ: ಶೇನ್ ವಾರ್ನ್

ನವದೆಹಲಿ, ಮೇ 14: ಆಸ್ಟ್ರೇಲಿಯಾ ಕ್ರಿಕೆಟ್ ದಂತಕತೆ ಶೇನ್ ವಾರ್ನ್ ಅವರು ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರನ್ನು ಹೊಗಳಿದ್ದಾರೆ. ಕೊಹ್ಲಿ ಈಗ ಮಾಡಿತ್ತಿರುವ ಸಾಧನೆಗಳನ್ನು ಸಚಿನ್ ನಿಂದಲೂ ಮಾಡಲು ಸಾಧ್ಯವಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಕ್ರಿಕೆಟ್ ನ ಎಲ್ಲಾ ಮಾದರಿಗಳಲ್ಲೂ ಸಾಧನೆ ತೋರುತ್ತಿರುವ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಬಗ್ಗೆ ಮಾತನಾಡುತ್ತ ಶೇನ್ ವಾರ್ನ್, ಸಚಿನ್ ಅವರಿಂದಲೂ ಸಾಧ್ಯವಾಗದ ಸಾಧನೆಗಳನ್ನು ಭಾರತ ತಂಡದ ನಾಯಕ ಕೊಹ್ಲಿ ಮಾಡುತ್ತಿದ್ದಾರೆ ಎಂದಿದ್ದಾರೆ.
ಕೊಹ್ಲಿ ಸೆಂಚುರಿ ಬಾರಿಸಿದ 19 ಏಕದಿನ ಪಂದ್ಯಗಳಲ್ಲಿ ಭಾರತ ಜಯಭೇರಿ ಬಾರಿಸಿತ್ತು. ಈ ವಿಚಾರವನ್ನು ವಿಶ್ಲೇಷಿಸಿ ಮಾಡನಾಡಿದ ಸ್ಪಿನ್ ದಿಗ್ಗಜ ವಾರ್ನ್, 'ಕೊಹ್ಲಿ ಸೆಂಚುರಿ ಮೂಲಕ ಗೆಲ್ಲಿಸಿದ್ದು ಸಚಿನ್ ಸಾಧನೆಗಿಂತಲೂ ಮೇಲ್ಮಟ್ಟದಲ್ಲಿ ಗುರುತಿಸಿಕೊಂಡಿದೆ' ಎಂದರು.
ಏಕದಿನ ಕ್ರಿಕೆಟ್ ನಲ್ಲಿ ಸಚಿನ್ 51 ಶತಕ ದಾಖಲೆಯೊಂದಿಗೆ ಅಗ್ರ ಸ್ಥಾನಿಗರಾಗಿದ್ದರೆ, ಕೊಹ್ಲಿ ಒಟ್ಟು 35 ಶತಕ ಸಾಧನೆಯಿಂದ ಏಕದಿನ ಕ್ರಿಕೆಟ್ ನಲ್ಲಿ ಅಧಿಕ ಸೆಂಚುರಿ ಬಾರಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನಿಗರಾಗಿ ಗುರುತಿಸಿಕೊಂಡಿದ್ದಾರೆ.
'ವಿರಾಟ್ ಕೊಹ್ಲಿ ಸೆಂಚುರಿ ಬಾರಿಸಿದ ಸಂಖ್ಯೆಗಳನ್ನು ಗಮನಿಸಿ; ಅವರು ಸೆಂಚುರಿ ಬಾರಿಸಿದ ಹೆಚ್ಚಿನ ಪಂದ್ಯಗಳಲ್ಲಿ ಭಾರತ ಗೆದ್ದಿದೆ. ಕೊಹ್ಲಿ ಆಟದ ಗತಿಯನ್ನು ನೋಡಿದರೆ ಅವರು ಸಾಧಿಸಿದ್ದನ್ನು ಯಾರಿಂದಲೂ ಅಷ್ಟೇಯಾಕೆ ಸಚಿನ್ ಅವರಿಂದಲೂ ಸಾಧಿಸುವುದು ಸಾಧ್ಯವಿರಲಿಲ್ಲ' ಎಂದು ಶೇನ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications